Hamas

ಗಾಜಾಪಟ್ಟಿಗೆ ನುಗ್ಗಿದ ಇಸ್ರೇಲ್ ಸೇನೆ, ಹಮಾಸ್ ಉಗ್ರರ ಹುಡುಕಿ-ಹುಡುಕಿ ದಾಳಿ!
ಪ್ಯಾಲೆಸ್ತೀನ್ ನ ಹಮಾಸ್ ಉಗ್ರರ ವಿರುದ್ಧ ಇಸ್ರೇಲ್ ಸೇನೆ ಆರಂಭಿಸಿರುವ ಯುದ್ಧ ಇದೀಗ ನಿರ್ಣಾಯಕ ಹಂತ ತಲುಪಿದ್ದು, ಇಸ್ರೇಲ್ ನ ಭೂದಳ ಇದೀಗ ಗಾಜಾಪಟ್ಟಿಗೆ ನುಗ್ಗಿದೆ.

ಇಸ್ರೇಲ್ ಎಚ್ಚರಿಕೆ ಬೆನ್ನಲ್ಲೇ ಪ್ಯಾಲೆಸ್ತೀನಿಯರ ಸಾಮೂಹಿಕ ಸ್ಥಳಾಂತರ, ವಿಶ್ವಸಂಸ್ಥೆ ಅಸಮಾಧಾನ
24 ಗಂಟೆಗಳಲ್ಲಿ ಜಾಗ ಖಾಲಿ ಮಾಡಿ ಎಂಬ ಇಸ್ರೇಲ್ ಎಚ್ಚರಿಕೆ ಬೆನ್ನಲ್ಲೇ ಇತ್ತ ಗಾಜಾಪಟ್ಟಿಯಲ್ಲಿನ ಪ್ಯಾಲೆಸ್ತೀನಿಯನ್ನರು ದಕ್ಷಿಣ ಗಾಜಾಗೆ ಸಾಮೂಹಿಕ ವಲಸೆ ಆರಂಭಿಸಿದ್ದಾರೆ.

ಹಮಾಸ್ ಬಂಡುಕೋರರ ದಾಳಿ: ಒತ್ತೆಯಾಳು ಬಿಡುಗಡೆಯಾಗುವವರೆಗೂ ಗಾಜಾಕ್ಕೆ ನೀರು, ವಿದ್ಯುತ್ ಇಲ್ಲ: ಇಸ್ರೇಲ್
ಪ್ಯಾಲೆಸ್ತೈನ್ ನ ಬಂಡುಕೋರರು ಒತ್ತೆಯಾಳು ಬಿಡುಗಡೆ ಮಾಡುವವರೆಗೂ ಗಾಜಾಕ್ಕೆ ನೀರು, ವಿದ್ಯುತ್ ಸೇರಿದಂತೆ ಮತ್ತಿತರ ಅಗತ್ಯ ಮೂಲಸೌಕರ್ಯ ಒದಗಿಸುವುದಿಲ್ಲ ಎಂದು ಇಸ್ರೇಲ್ ಹೇಳಿದೆ.

ಇಸ್ರೇಲ್-ಹಮಾಸ್ ಯುದ್ಧ: ಇಸ್ರೇಲಿ ಸೇನೆಯ ಪರಾಕ್ರಮ; 60 ಉಗ್ರರ ಕೊಂದು 250 ಒತ್ತೆಯಾಳುಗಳ ರಕ್ಷಣೆ, ವೀಡಿಯೊ ನೋಡಿ!
ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಉಗ್ರ ಹಮಾಸ್ ನಡುವಿನ ಸಂಘರ್ಷ ಏಳನೇ ದಿನವೂ ಮುಂದುವರಿದಿದೆ. ಏತನ್ಮಧ್ಯೆ, ಇಸ್ರೇಲಿ ಸೇನೆಯು ಹಮಾಸ್ ಹೋರಾಟಗಾರರ ವಿರುದ್ಧ ನಡೆಸಿದ ಕಾರ್ಯಾಚರಣೆಯ ಒಂದು ವೀಡಿಯೊವನ್ನು ಬಿಡುಗಡೆ ಮಾಡಿದೆ.

ಹಮಾಸ್ ದಾಳಿಗೂ ಕೆಲವು ಗಂಟೆ ಮುನ್ನ ಬೆಂಗಳೂರಿನ ಮಹಿಳೆ ಏರ್ ಲಿಫ್ಟ್!
ಹಮಾಸ್ ದಾಳಿಗೂ ಕೆಲವು ಗಂಟೆ ಮುನ್ನಾ ವಿಶೇಷ ಚಿಕಿತ್ಸೆಗಾಗಿ ಇಸ್ರೇಲ್‌ಗೆ ತೆರಳಿದ್ದ 50ರ ಹರೆಯದ ಮಹಿಳೆ ಹಾಗೂ ಆಕೆಯ ಪತಿಯನ್ನು ಟೆಲ್ ಅವೀವ್‌ನಿಂದ ಬೆಂಗಳೂರಿಗೆ ವಿಶೇಷ ವೈದ್ಯಕೀಯ ಸೌಲಭ್ಯವಿರುವ ವಿಶೇಷ ವಿಮಾನದ ಮೂಲಕ ಬೆಂಗಳೂರು ಮೂಲದ ಇಂಟರ್‌ನ್ಯಾಶನಲ್ ಕ್ರಿಟಿಕಲ್ ಕೇರ್ ಏರ್ ಟ್ರಾನ್ಸ್‌ಫರ್ ಟೀಮ್ (ಐಸಿಎಟಿಟಿ) ಕರೆತಂದಿದೆ.

ಇಸ್ರೇಲ್-ಹಮಾಸ್ ಯುದ್ಧ: ಚೀನಾದಲ್ಲಿ ಇಸ್ರೇಲ್ ರಾಜತಾಂತ್ರಿಕ ಕಚೇರಿ ಸಿಬ್ಬಂದಿಗೆ ಚಾಕು ಇರಿತ
ಇಸ್ರೇಲ್ ಮತ್ತು ಹಮಾಸ್ ನಡುವೆ 7 ದಿನಗಳಿಂದ ಯುದ್ಧ ನಡೆಯುತ್ತಿದೆ. ಇದೇ ವೇಳೆ ಚೀನಾದಲ್ಲಿ ಇಸ್ರೇಲ್ ರಾಜತಾಂತ್ರಿಕ ಕಚೇರಿ ಸಿಬ್ಬಂದಿ ಮೇಲೆ ವ್ಯಕ್ತಿಯೋರ್ವ ಮಾರಣಾಂತಿಕ ದಾಳಿ ನಡೆಸಿದ್ದಾನೆ.

24 ಗಂಟೆಗಳಲ್ಲಿ ದಕ್ಷಿಣ ಗಾಜಾಕ್ಕೆ ಸ್ಥಳಾಂತರಗೊಳ್ಳಿ: ಇಸ್ರೇಲ್ ಆದೇಶ ತಿರಸ್ಕರಿಸಿದ ಹಮಾಸ್
ಗಾಜಾಪಟ್ಟಿಯಲ್ಲಿ ಬೀಡು ಬಿಟ್ಟಿರುವ ಹಮಾಸ್ ಉಗ್ರರನ್ನು ನಿರ್ನಾಮ ಮಾಡದೆ ಬಿಡುವುದಿಲ್ಲ ಎಂದು ಪಣತೊಟ್ಟಿರುವ ಇಸ್ರೇಲ್ ಉತ್ತರ ಗಾಜಾದಲ್ಲಿರುವ ಪ್ಯಾಲೆಸ್ಟೀನಿಯನ್ ಜನರನ್ನು 24 ಗಂಟೆಗಳ ಅವಧಿಯಲ್ಲಿ ದಕ್ಷಿಣ ಗಾಜಾಕ್ಕೆ ಸ್ಥಳಾಂತರಗೊಳ್ಳುವಂತೆ ಆದೇಶಿಸಿದ್ದು, ಈ ಆದೇಶವನ್ನು ಹಮಾಸ್ ತಿರಸ್ಕರಿಸಿದೆ.

ಭಾರತಕ್ಕೂ ತಟ್ಟಲಿದೆ ಇಸ್ರೇಲ್-ಹಮಾಸ್ ಯುದ್ಧದ ಬಿಸಿ: ಏರಲಿದೆಯೇ ಚಿನ್ನದ ದರ?
ಹಬ್ಬ- ಹರಿದಿನ ಬಂದರೆ ಭಾರತದಲ್ಲಿ ಚಿನ್ನದ ಖರೀದಿ ಸಾಮಾನ್ಯವಾಗಿಯೇ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಚಿನ್ನವನ್ನು ಆಭರಣ ರೂಪದಲ್ಲಿ ಖರೀದಿಸುತ್ತಾರೆ. ಇನ್ನೂ ಕೆಲವರು ಹೂಡಿಕೆಗೆ ಚಿನ್ನ ಉತ್ತಮ ಆಯ್ಕೆ ಎಂದೂ ಪರಿಗಣಿಸುತ್ತಾರೆ.

ಇಸ್ರೇಲ್-ಹಮಾಸ್ ಯುದ್ಧ: ಪ್ಯಾಲೆಸ್ತೀನ್‌ನಲ್ಲಿ ಸಿಲುಕಿರುವ ಭಾರತೀಯ ಪ್ರವಾಸಿಗರಿಂದ ನೆರವಿಗಾಗಿ ಮೊರೆ
ಇಸ್ರೇಲ್-ಪ್ಯಾಲೆಸ್ತೀನ್ ನಡುವೆ ಸಂಘರ್ಷ ಶುರುವಾಗಿ ನಾಲ್ಕು ದಿನಗಳು ಕಳೆದಿದ್ದು, ಯುದ್ಧಪೀಡಿತ ರಾಷ್ಟ್ರದಲ್ಲಿ ರಾಜ್ಯ ಸೇರಿ ದೇಶದ ಇತರೆ ಭಾಗಗಳ ಸಾಕಷ್ಟು ಮಂದಿ ಭಾರತೀಯರು ಸಿಲುಕಿಕೊಂಡಿದ್ದು, ನೆರವಿಗಾಗಿ ಮೊರೆ ಇಡುತ್ತಾರೆ.

