Government hospitals

ಸರ್ಕಾರಿ ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಬಿದ್ದಿರುವ ಆಕ್ಸಿಜನ್ ಪ್ಲಾಂಟ್‌ಗಳು ಈಗ ನಿಷ್ಕ್ರಿಯ
ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಬಗ್ಗೆ ರಾಜ್ಯ ಸರ್ಕಾರ ಅಲರ್ಟ್ ಆಗಿದ್ದರೂ, ನಿರ್ಣಾಯಕ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯಕೀಯ ದರ್ಜೆಯ ಆಮ್ಲಜನಕವನ್ನು ಉತ್ಪಾದಿಸುವ ಘಟಕಗಳು ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿಲ್ಲ.

ಅವ್ಯವಹಾರ ಮತ್ತು ಅಕ್ರಮ ಆರೋಪ: 10 ಸರ್ಕಾರಿ ಆಸ್ಪತ್ರೆಗಳ ಮೇಲೆ ಲೋಕಾಯುಕ್ತ ದಾಳಿ
ಅವ್ಯವಹಾರ ಹಾಗೂ ಅಕ್ರಮ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿನ ಹತ್ತು ಸರ್ಕಾರಿ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದ್ದಾರೆ.

ಭ್ರಷ್ಟಾಚಾರದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಮೊದಲ ಸ್ಥಾನ: ಲೋಕಾಯುಕ್ತ ವಿಶೇಷ ನ್ಯಾಯಾಲಯ
ಭ್ರಷ್ಟಾಚಾರದಲ್ಲಿ ಸರ್ಕಾರಿ ಆಸ್ಪತ್ರೆಗಳು ಅಗ್ರಸ್ಥಾನದಲ್ಲಿವೆ ಎಂದು ಲೋಕಾಯುಕ್ತ ವಿಶೇಷ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಭ್ರಷ್ಟ ನೌಕರರು ಅರಾಜಕತೆ ಸೃಷ್ಟಿಸಿದ್ದಾರೆ ಎಂದು ಹೇಳಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಸಮಸ್ಯೆಗೆ ಇಲಾಖೆಯೊಳಗಿನ ಸಮನ್ವಯ ಕೊರತೆ ಮುಖ್ಯ ಕಾರಣ: ಕೆಎಸ್ಎಂಎಸ್ ಸಿಎಲ್
ಔಷಧ ಕಂಪೆನಿಗಳಿಗೆ ಸರಿಯಾಗಿ ಪಾವತಿ ಮಾಡದಿರುವುದು, ಹಣ ಪಾವತಿಯಲ್ಲಿ ವಿಳಂಬಕ್ಕೆ ಸರ್ಕಾರದ ಇಲಾಖೆಯೊಳಗಿನ ಸಮನ್ವಯ ಕೊರತೆ ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ಹಿಂಜರಿಕೆಯೇ ಮುಖ್ಯ ಕಾರಣವಾಗಿದೆ ಎಂದು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (KSMSCL) ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ಎಸ್ ವಟಾರೆ ತಿಳಿಸಿದ್ದಾರೆ.

ಇನ್ಮುಂದೆ ಆಸ್ಪತ್ರೆಯಲ್ಲಿ ರೋಗಿಗಳು ಕ್ಯೂ ನಿಲ್ಲಬೇಕಿಲ್ಲ, ಆನ್‌ಲೈನ್ ನೋಂದಣಿ ಜಾರಿ: ಸಚಿವ ಸುಧಾಕರ್
ಜಯನಗರ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಹಲವು ಆಸ್ಪತ್ರೆಗಳು ಹಾಗೂ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಒಂದು ತಿಂಗಳೊಳಗೆ ಡಿಜಿಟಲ್ ಹೆಸರು ನೋಂದಣಿ ಹಾಗೂ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೆ ತರಲಾಗುವುದು.

ಬೆಂಗಳೂರಿನಲ್ಲಿ ಮಾದರಿ ಸೇವೆ: ಸರ್ಕಾರಿ ವೈದ್ಯರಿಗೆ ಚಹಾ, ಕಾಫಿ ನೀಡಿ ಒತ್ತಡ ನಿವಾರಣೆಗೆ ಸ್ವಯಂಸೇವಕರು ಮುಂದು
ವೈಟ್‌ಫೀಲ್ಡ್‌ನ ಅಪಾರ್ಟ್‌ಮೆಂಟ್‌ಗಳ ಸ್ವಯಂಸೇವಕರು ಕೋವಿಡ್ ಕಾಲದಲ್ಲಿ ಬಿಡುವಿಲ್ಲದೆ ದುಡಿಯುತ್ತಿರುವ ನಗರದ ಐದು ಸರ್ಕಾರಿ ಆಸ್ಪತ್ರೆಗಳ ವೈದ್ಯಕೀಯ ಸಿಬ್ಬಂದಿಗಳಿಗೆ ಒಂದು ಕಪ್ ಕಾಫಿ ಅಥವಾ ಚಹಾ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.

ದಕ್ಷಿಣ ಕನ್ನಡ: ಸರ್ಕಾರಿ ಆಸ್ಪತ್ರೆಗಳ ತಾತ್ಕಾಲಿಕ ಸೇವೆಗಳ ಹುದ್ದೆ ಭರ್ತಿ ಅರ್ಜಿ ಆಹ್ವಾನಕ್ಕೆ ನೀರಸ ಪ್ರತಿಕ್ರಿಯೆ
ಮಹಾಮಾರಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗದಿಂದ ದಕ್ಷಿಣ ಕನ್ನಡ ಜಿಲ್ಲೆ ತತ್ತರಿಸಿದ್ದು, ಈ ನಡುವಲ್ಲೇ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಿಗೆ ತಾತ್ಕಾಲಿಕ ಸೇವೆಗಳ ಹುದ್ದೆ ಭರ್ತಿಗೆ ನೀಡಲಾಗಿದ್ದ ಅರ್ಜಿ ಆಹ್ವಾನಕ್ಕೆ ನೀರಸ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಸರ್ಕಾರಿ ಆಸ್ಪತ್ರೆಗಳಲ್ಲಿ 18-44 ವರ್ಷದವರಿಗೆ ಸ್ಥಳದಲ್ಲೇ ನೋಂದಾಯಿಸಿಕೊಂಡು ಲಸಿಕೆ ನೀಡಲು ಕೇಂದ್ರ ಸಮ್ಮತಿ!
ಲಸಿಕೆ ವ್ಯರ್ಥವಾಗುವುದನ್ನು ತಪ್ಪಿಸಲು ಮತ್ತು ಅಂತರ್ಜಾಲದ ಮೂಲಕ ನೋಂದಾಯಿಸಿಕೊಳ್ಳಲು ಆಗದವರಿಗೂ ಲಸಿಕೆ ಸಿಗುವಂತೆ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಥಳದಲ್ಲೇ ನೊಂದಾಯಿಸಿಕೊಂಡು 18-44 ವರ್ಷದವರಿಗೆ ಲಸಿಕೆ ನೀಡಲು ನಿರ್ಧರಿಸಿದೆ.

ರಾಜ್ಯ ಆರೋಗ್ಯ ಇಲಾಖೆಯ 'ಲಕ್ಷ್ಯ ಕಾರ್ಯಕ್ರಮ' ಪುನರಾರಂಭ
ಲಾಕ್ ಡೌನ್ ಕಾರಣದಿಂದ ಮೂರು ತಿಂಗಳಿನಿಂದ ಸ್ಥಗಿತಗೊಂಡಿದ್ದ ಲಕ್ಷ್ಯ ಮಾತೃ ಆರೋಗ್ಯ ಕಾರ್ಯಕ್ರಮವನ್ನು ರಾಜ್ಯ ಆರೋಗ್ಯ ಇಲಾಖೆ ಪುನರಾರಂಭಿಸಿದೆ.

