Governer

ಬಿಎಸ್ ಯಡಿಯೂರಪ್ಪ ರಾಜಿನಾಮೆ ಕುರಿತ ಚರ್ಚೆ ಮಧ್ಯೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇನ್ನೂ ಪ್ರವಾಸದಲ್ಲಿ!
ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಿರುವ ವೇಳೆಯಲ್ಲಿಯೇ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬೆಂಗಳೂರಿನಲ್ಲಿರದಿರುವುದು ತಿಳಿದು ಬಂದಿದೆ.

ಪ್ರತಿದಿನ 1 ಕೋಟಿ ಜನರಿಗೆ ಲಸಿಕೆ ಹಾಕಿ: ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಆಗ್ರಹ
ದೇಶದಲ್ಲಿ ಪ್ರತಿ ದಿನ ಒಂದು ಕೋಟಿ ಜನರಿಗೆ ಕೋವಿಡ್ ಲಸಿಕೆ ವ್ಯಾಕ್ಸಿನೇಷನ್ ಮಾಡುವಂತೆ ಕೇಂದ್ರ ಸರ್ಕಾರದ ಗಮನಕ್ಕೆ ತರುವಂತೆ ರಾಜ್ಯ ಕಾಂಗ್ರೆಸ್ ನಾಯಕರ ನಿಯೋಗ ರಾಜ್ಯಪಾಲ ವಿ.ಆರ್.ವಾಲಾ ಅವರಿಗೆ ಮನವಿ ಮಾಡಿದೆ.

ಒಡಿಶಾ ರಾಜ್ಯಪಾಲರ ಪತ್ನಿ ಸುಶೀಲಾ ದೇವಿ ಕೊರೋನಾಗೆ ಬಲಿ
ಒಡಿಶಾ ರಾಜ್ಯಪಾಲ ಪ್ರೊ. ಗಣೇಶಿ ಲಾಲ್ ಪತ್ನಿ ಸುಶೀಲಾ ದೇವಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನವೆಂಬರ್ 2 ರಂದು ಕೊರೋನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ರಾಜ್ಯದ ಮೊದಲ ಮಹಿಳೆ ಸೋಮವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ತಿರಸ್ಕರಿಸುವಂತೆ ರಾಜ್ಯಪಾಲರಿಗೆ ಕಾಂಗ್ರೆಸ್ ಮನವಿ
ಒಪ್ಪಂದ ಆಧಾರಿತ ಕೃಷಿಯ ಮೂಲಕ ರೈತರ ಬದುಕನ್ನು ನಾಶ ಮಾಡಲು ಸರ್ಕಾರ ಅವಕಾಶ ಮಾಡಿಕೊಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.

ಮಧ್ಯಪ್ರದೇಶ: ಗವರ್ನರ್ ಲಾಲ್ ಜೀ ಟಂಡನ್ ಆರೋಗ್ಯದಲ್ಲಿ ಚೇತರಿಕೆ
ಮಧ್ಯಪ್ರದೇಶ ರಾಜ್ಯಪಾಲ ಲಾಲ್ ಜೀ ಟಂಡನ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯದಲ್ಲಿ ಚೇತರಿಕೆಯಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಬಿಡಿಎ ಅಕ್ರಮ ಸೈಟ್‌ಗಳಿಗೆ ಸಕ್ರಮ ಭಾಗ್ಯ: ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ವಾಧೀನಪಡಿಸಿಕೊಂಡ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಮನೆಗಳನ್ನು ಸಕ್ರಮಗೊಳಿಸುವ ಬಿಡಿಎ ಕಾಯ್ದೆ ತಿದ್ದುಪಡಿಗಾಗಿ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ. ಮನೆ ನಿರ್ಮಿಸಿ 12 ವರ್ಷ ಆಗಿದ್ದರೆ ಮಾತ್ರ ಸಕ್ರಮಕ್ಕೆ ಅವಕಾಶ ನೀಡಲಾಗುತ್ತದೆ.

ಕೊರೋನಾ ಸಂಕಷ್ಟದಲ್ಲೂ ರಾಜಕೀಯ ಮೇಲಾಟ: ಸಂವಿಧಾನದ ಪ್ರಾಥಮಿಕ ಜ್ಞಾನವೂ ಇಲ್ಲ; ದೀದಿ ವಿರುದ್ಧ ಗವರ್ನರ್ ಗರಂ
ನಾನು ಚುನಾಯಿತ ಮುಖ್ಯಮಂತ್ರಿ, ನೀವು ನಾಮ ನಿರ್ದೇಶಿತ ರಾಜ್ಯಪಾಲರು ಎಂದು ಮಮತಾ ಬ್ಯಾನರ್ಜಿ ಬರೆದಿರುವ 5 ಪುಟಗಳ ಪತ್ರಕ್ಕೆ ರಾಜ್ಯಪಾಲ ಜಗದೀಪ್ ಧನಕರ್ ಪ್ರತ್ಯುತ್ತರ ನೀಡಿದ್ದಾರೆ.

ಕೇರಳ ವಿಧಾನಸಭೆಯಲ್ಲಿ ಇಂದು ಹೈಡ್ರಾಮಾ: ವಿರೋಧ ಪಕ್ಷ ಶಾಸಕರಿಂದ ರಾಜ್ಯಪಾಲರಿಗೆ 'ಗೋ ಬ್ಯಾಕ್' ಘೋಷಣೆ
ಬುಧವಾರ ಬೆಳಗ್ಗೆ ಕೇರಳ ವಿಧಾನಸಭೆಯಲ್ಲಿ ನಾಟಕೀಯ ವಿದ್ಯಮಾನ ನಡೆಯಿತು. ಇಂದು ಬೆಳಗ್ಗೆ ವಿಧಾನಸಭೆಯ ಬಜೆಟ್ ಅಧಿವೇಶನ ಆರಂಭಕ್ಕೆ ಮುನ್ನ ರಾಜ್ಯಪಾಲ ಅರಿಫ್ ಮೊಹಮ್ಮದ್ ಖಾನ್ ಸಾಂಪ್ರದಾಯಿಕವಾಗಿ ಸರ್ಕಾರದ ಯೋಜನೆಗಳ ಕುರಿತು ಭಾಷಣ ಮಾಡಲು ಆಗಮಿಸಿದರು.

ಕೇರಳ ವಿಧಾನಸಭೆಯಲ್ಲಿ ನಾಟಕೀಯ ಬೆಳವಣಿಗೆ: ಸರ್ಕಾರದ ಸಿಎಎ ವಿರೋಧಿ ನಿಲುವನ್ನು ಓದಿದ ರಾಜ್ಯಪಾಲರು
ವಾರವಿಡೀ ಅಸ್ಥಿರತೆ ಮತ್ತು ಊಹಾಪೋಹಗಳ ನಂತರ ಕೇರಳ ರಾಜ್ಯಪಾಲ ಅರಿಫ್ ಮೊಹಮ್ಮದ್ ಖಾನ್ ಬುಧವಾರ ಬಜೆಟ್ ಅಧಿವೇಶನ ಆರಂಭಕ್ಕೆ ಮುನ್ನ ವಿಧಾನಸಭೆಯಲ್ಲಿ ಸರ್ಕಾರದ ನೀತಿ ಯೋಜನೆಗಳನ್ನು ಪ್ರಕಟಿಸಿದರು.

