Ghulam Nabi Azad

ಹಿರಿಯ ನಾಯಕರು ಪಕ್ಷ ತೊರೆಯಲು ರಾಹುಲ್ ಮುಖ್ಯ ಕಾರಣ; ಬೆನ್ನುಮೂಳೆಯಿಲ್ಲದವರು ಆ ಪಕ್ಷದಲ್ಲಿರಲು ಸಾಧ್ಯ: ಆಜಾದ್
ಇಂದು ನಾನು ಕಾಂಗ್ರೆಸ್ ಪಕ್ಷದಲ್ಲಿ ಇಲ್ಲದಿರುವುದಕ್ಕೆ ರಾಹುಲ್ ಗಾಂಧಿಯೇ ಮುಖ್ಯ ಕಾರಣ. ಹಳೆಯ ಪಕ್ಷದಲ್ಲಿ ಉಳಿಯಬೇಕೆಂದರೆ ಬೆನ್ನುಮೂಳೆ ಇರಬಾರದು ಎಂದು ಹಿರಿಯ ರಾಜಕಾರಣಿ ಗುಲಾಂ ನಬಿ ಆಜಾದ್ ಹೇಳಿದ್ದಾರೆ.

ಗುಲಾಂ ನಬಿ ಆಜಾದ್ ಅವರ 17 ನಿಷ್ಠಾವಂತರು ಮತ್ತೆ ಕಾಂಗ್ರೆಸ್ ಗೆ ಸೇರ್ಪಡೆ!
ಕಾಂಗ್ರೆಸ್ ತೊರೆದು ಹೊಸ ಪಕ್ಷ ಸ್ಥಾಪಿಸಿದ್ದ ಗುಲಾಂ ನಬಿ ಆಜಾದ್ ಅವರ ಡೆಮಾಕ್ರಟಿಕ್ ಆಜಾದ್ ಪಾರ್ಟಿ (ಡಿಎಪಿ) ಗೆ ಸೇರಿದ ಹದಿನೇಳು ನಾಯಕರು ಶುಕ್ರವಾರ ಮತ್ತೆ ತಮ್ಮ ತವರು ಪಕ್ಷ ಕಾಂಗ್ರೆಸ್‌ಗೆ ಮರಳಿದ್ದಾರೆ

ಕಾಶ್ಮೀರಿ ಪಂಡಿತರ ಸುರಕ್ಷತೆ ಮುಖ್ಯವಾಗಿದ್ದು, ಅವರನ್ನು ಜಮ್ಮುವಿಗೆ ಸ್ಥಳಾಂತರಿಸಬೇಕು: ಗುಲಾಂ ನಬಿ ಆಜಾದ್
ಕಾಶ್ಮೀರಿ ಪಂಡಿತರ ಸುರಕ್ಷತೆ ಮುಖ್ಯವಾಗಿದ್ದು, ಕೂಡಲೇ ಅವರನ್ನು ಜಮ್ಮುವಿಗೆ ಸ್ಥಳಾಂತರಿಸಬೇಕು ಎಂದು ಡೆಮಾಕ್ರಟಿಕ್ ಆಜಾದ್ (ಡಿಎಪಿ) ಪಕ್ಷದ ಮುಖ್ಯಸ್ಥ ಗುಲಾಂ ನಬಿ ಆಜಾದ್ ಅವರು ಹೇಳಿದ್ದಾರೆ.

ಗುಲಾಂ ನಬಿ ಆಜಾದ್ ನಿರ್ಗಮನ; 'ಕಾಂಗ್ರೆಸ್' ಭವಿಷ್ಯದ ಬಗ್ಗೆ ನಾಯಕರುಗಳಿಗೆ ಅನುಮಾನ; ಮತ್ತಷ್ಟು 'ಕೈ' ವಿಕೆಟ್ ಪತನ?
ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡುವುದರಿಂದ ಪಕ್ಷದೊಳಗೆ ಆಳವಾಗಿ ಬೇರೂರಿರುವ ಅಸ್ವಸ್ಥತೆ ಯಿಂದಾಗಿ ಹಾಗೂ ಪರಿಹರಿಸಲಾಗದ ಕಾರಣದಿಂದ ಮತ್ತಷ್ಟು ನಾಯಕರಿಗೆ ಪಕ್ಷ ತೊರೆಯಲು ಪ್ರಚೋದಿಸಬಹುದು.

ಜನರಿಗೆ ಹಾನಿ, ದುಃಖವನ್ನು ತರುವ ಶಸ್ತ್ರಾಸ್ತ್ರ ತ್ಯಜಿಸಿ ಎಂದು ಉಗ್ರರಿಗೆ ಹೇಳಿದ ಗುಲಾಂ ನಬಿ ಆಜಾದ್, ಜೀವ ಬೆದರಿಕೆ
ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮ ಹೊಸ ಪಕ್ಷದ ಹೆಸರನ್ನು ಘೋಷಿಸುವ ಮುನ್ನ ಸರಣಿ ಸಾರ್ವಜನಿಕ ಸಭೆಗಳನ್ನು ನಡೆಸಿದ ಗುಲಾಂ ನಬಿ ಆಜಾದ್, ಜನರಿಗೆ ಹಾನಿ ಮತ್ತು ದುಃಖವನ್ನು ಮಾತ್ರ ತರುವ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಎಂದು ಭಯೋತ್ಪಾದಕರಿಗೆ ಮನವಿ ಮಾಡಿದರು.

ಹತ್ತು ದಿನಗಳೊಳಗೆ ನೂತನ ರಾಜಕೀಯ ಪಕ್ಷ ರಚನೆ- ಗುಲಾಂ ನಬಿ ಆಜಾದ್
ಇನ್ನೂ ಹತ್ತು ದಿನಗಳೊಳಗೆ ನೂತನ ರಾಜಕೀಯ ಪಕ್ಷವನ್ನು ರಚಿಸಲಾಗುವುದು ಎಂದು ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದ ಗುಲಾಂ ನಬಿ ಆಜಾದ್ ಭಾನುವಾರ ಹೇಳಿದ್ದಾರೆ ಮತ್ತು ನೂತನ ಪಕ್ಷದ ಸಿದ್ಧಾಂತವು 'ಸ್ವತಂತ್ರ'ವಾಗಿರುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಪುನಃಸ್ಥಾಪಿಸಲು ಸಾಧ್ಯವಿಲ್ಲ: ರ‍್ಯಾಲಿಯಲ್ಲಿ ಗುಲಾಂ ನಬಿ ಆಜಾದ್
ಜಮ್ಮು ಮತ್ತು ಕಾಶ್ಮೀರಕ್ಕೆ ಹೆಚ್ಚಿನ ಸ್ವಾಯತ್ತತೆಯನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಎರಡು ವರ್ಷಗಳ ಹಿಂದೆ ಹಿಂತೆಗೆದುಕೊಂಡಿದೆ. ಅದನ್ನು ಪುನಃಸ್ಥಾಪಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮಾಜಿ ನಾಯಕ ಗುಲಾಂ ನಬಿ ಆಜಾದ್ ಭಾನುವಾರ ಹೇಳಿದ್ದಾರೆ.

ಗಾಂಧಿ ಕುಟುಂಬದವರ ನಿರಂತರ ದಾಳಿಯು, ನನ್ನನ್ನು ಪ್ರತೀಕಾರ ತೀರಿಸಿಕೊಳ್ಳುವಂತೆ ಮಾಡಿತು: ಗುಲಾಂ ನಬಿ ಆಜಾದ್
ಕಾಂಗ್ರೆಸ್‌ನ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ವಿರುದ್ಧ ವಾಗ್ಧಾಳಿ ನಡೆಸಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್, ಕಾಂಗ್ರೆಸ್‌ನಿಂದ ನಿರ್ಗಮಿಸಿದಾಗಿನಿಂದ ನಾನು ಗೌರವಾನ್ವಿತ ಮೌನವನ್ನು ವಹಿಸಿದ್ದೇನೆ. ಆದರೆ, ಅವರ ನಿರಂತರ ದಾಳಿಯು ಪ್ರತೀಕಾರ ತೀರಿಸಿಕೊಳ್ಳಲು ಒತ್ತಾಯಿಸಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕರು ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶ: ಜೈರಾಂ ರಮೇಶ್
ಕಾಂಗ್ರೆಸ್ ಪಕ್ಷ ಪ್ರಜಾಸತಾತ್ಮಕ, ಒಗ್ಗಟ್ಟಿನ ಪಕ್ಷವಾಗಿದ್ದು, ತನ್ನ ನಾಯಕರು ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶ ನೀಡಲಾಗಿದೆ ಎಂದು ಪಕ್ಷ ಸೋಮವಾರ ಹೇಳುವ ಮೂಲಕ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಮತ್ತು ಬಿಜೆಪಿಯ ಟೀಕೆಗಳನ್ನು ನಿರಾಕರಿಸಿದೆ.

