GDP growth

4ನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಸಕಾರಾತ್ಮಕವಾಗಿರಲಿದೆ: ನೀತಿ ಆಯೋಗದ ಉಪಾಧ್ಯಕ್ಷ
ಕೊರೋನಾ ಲಾಕ್ ಡೌನ್ ನಂತರ ಭಾರತದ ಆರ್ಥಿಕತೆ ಚೇತರಿಸಿಕೊಳ್ಳುತ್ತಿದ್ದು, ಜಿಡಿಪಿ ಬೆಳವಣಿಗೆ ಈ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಸಕಾರಾತ್ಮಕವಾಗಿರಲಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರು ಬುಧವಾರ ಹೇಳಿದ್ದಾರೆ.

ಭಾರತದ 21-22 ನೇ ಸಾಲಿನ ಜಿಡಿಪಿ ಶೇ.9.5 ಕ್ಕೆ ಪುಟಿದೇಳಲಿದೆ: ಫಿಚ್
20-21 ನೇ ಸಾಲಿನ ಆರ್ಥಿಕ ವರ್ಷದ ಕುಸಿತದ ನಡುವೆಯೇ ಭಾರತೀಯರಿಗೆ ಸಂತಸ ವಿಷಯವೊಂದು ಬಹಿರಂಗಗೊಂಡಿದ್ದು, 21-22 ನೇ ಆರ್ಥಿಕ ವರ್ಷದಲ್ಲಿ ಜಿಡಿಪಿ ಶೇ.9.5 ಕ್ಕೆ ಪುಟಿದೇಳಲಿದೆ ಎಂದು ಫಿಚ್ ರೇಟಿಂಗ್ಸ್ ಹೇಳಿದೆ.

ಪ್ರಸಕ್ತ ಸಾಲಿನಲ್ಲಿ ಜಿಡಿಪಿ ಶೂನ್ಯಕ್ಕೆ ಕುಸಿತ!
ಕೊರೊನ ಹಾವಳಿ, ಲಾಕ್‌ಡೌನ್ ಪರಿಣಾಮ ಪ್ರಸಕ್ತ ಹಣಕಾಸು ವರ್ಷ 2020-21ರಲ್ಲಿ ದೇಶದ ಜಿಡಿಪಿ ಯಾವುದೇ ಬೆಳವಣಿಗೆ ಕಾಣದೇ, ಶೂನ್ಯಕ್ಕೆ ಕುಸಿಯಲಿದೆ ಎಂದು ಅಮೆರಿಕಾ ಮೂಲದ ಹಣಕಾಸು ಮೌಲ್ಯಮಾಪನ ಸಂಸ್ಥೆ ದ ಮೂಡಿಸ್ ಹೇಳಿದೆ.

ಭಾರತದ ಜಿಡಿಪಿ ಮುನ್ನೋಟ ಶೇ.1.9ಕ್ಕೆ, 29 ವರ್ಷಗಳಲ್ಲೇ ಅತ್ಯಧಿಕ ಕುಸಿತ!
ಕೊರೋನಾ ವೈರಸ್, ಲಾಕ್ ಡೌನ್ ನ ಪರಿಣಾಮ ಭಾರತದ 2021 ನೇ ಸಾಲಿನ ಜಿಡಿಪಿ ಬೆಳವಣಿಗೆ ದರವನ್ನು ಇಂಡಿಯಾ ರೇಟಿಂಗ್ಸ್ ಆಂಡ್ ರಿಸರ್ಚ್ (ಇಂಡ್-ರಾ) ಶೇ.1.9 ಕ್ಕೆ ಅಂದಾಜಿಸಿದೆ.

2019ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕ ಭಾರತದ ಜಿಡಿಪಿ ಶೇ. 4.7!
2019ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ದೇಶೀಯ ಉತ್ಪನ್ನ(ಜಿಡಿಪಿ) 4.7ರಷ್ಟಿದೆ ಎಂದು ಅಂಕಿ-ಅಂಶಗಳು ತಿಳಿಸಿವೆ.

ಜಿಡಿಪಿ ಅಭಿವೃದ್ಧಿ ದರ ಕನಿಷ್ಠ ಮಟ್ಟಕ್ಕೆ ಕುಸಿತ: ಕೇಂದ್ರ ಸರ್ಕಾರ ಹೇಳಿದ್ದೇನು ಗೊತ್ತಾ?
ಆರ್ಥಿಕ ಬಿಕ್ಕಟ್ಟು ಮತ್ತು ಜಿಡಿಪಿ ಅಭಿವೃದ್ಧಿ ದರ ಕುಸಿತಕ್ಕೆ ಸಂಬಂಧಿಸಿದ ವರದಿ ಬಹಿರಂಗವಾದ ಬೆನ್ನಲ್ಲೇ ಈ ಸಂಬಂಧ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದ್ದು, ಜಿಡಿಪಿ ದರ ಕುಸಿತಕ್ಕೆ ಆಂತರಿಕ ಮತ್ತು ಜಾಗತಿಕ ವಹಿವಾಟಿನ ಅಂಶಗಳೇ ಕಾರಣ ಎಂದು ಹೇಳಿದೆ.

ಕಳೆದ 7 ವರ್ಷಗಳಲ್ಲೇ ಭಾರತದ ಜಿಡಿಪಿ ಬೆಳವಣಿಗೆ ದರ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿತ!
ಭಾರತೀಯ ರಿಸರ್ವ್ ಬ್ಯಾಂಕಿನಿಂದ ಕೇಂದ್ರ ಸರ್ಕಾರ ಭಾರಿ ಮೊತ್ತದ ಹಣ ಪಡೆದ ವಿಚಾರವಾಗಿ ವಿಪಕ್ಷಗಳು ಆರ್ಥಿಕ ಕುಸಿತದ ಕುರಿತು ವಾಗ್ದಾಳಿ ನಡೆಸುತ್ತಿರುವ ಬೆನ್ನಲ್ಲೇ ಇದೀಗ ಭಾರತದ ಜಿಡಿಪಿ ಬೆಳವಣಿಗೆ ದರ ಕಳೆದ 7 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ಭಾರತದ ಜಿಡಿಪಿ ದರ ಶೇ.7ಕ್ಕೆ ನಿಗದಿ: 2019-20 ಆರ್ಥಿಕ ಸಮೀಕ್ಷೆ ವರದಿ ಬಹಿರಂಗ
ಎರಡನೇ ಅವಧಿಗೆ ಆಯ್ಕೆಯಾಗಿರುವ ಮೋದಿ ನೇತೃತ್ವದ ಸರ್ಕಾರದ ಸಂಸತ್ತಿನ ಮೊದಲ ಅಧಿವೇಶನದಲ್ಲಿಂದು ಆರ್ಥಿಕ ಸಮೀಕ್ಷೆ ಮಂಡನೆಯಾಗುತ್ತಿದೆ.

ಕಳೆದ ಐದು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದ ಜಿಡಿಪಿ, ಶೇ.5.8ರಷ್ಟು ದಾಖಲು
ಕಳೆದ ಜನವರಿಯಿಂದ ಮಾರ್ಚ್ ಅವಧಿಯಲ್ಲಿ ಭಾರತದ ಆರ್ಥಿಕ ಅಭಿವೃದ್ಧಿ ದರ(ಜಿಡಿಪಿ) ಶೇ.5.8ರಷ್ಟು ದಾಖಲಾಗಿದ್ದು, ಇದು ಕಳೆದ ಐದು ವರ್ಷಗಳಲ್ಲೇ...

