Ganesh

ಸವಾಲುಗಳಿಗೆ ಬೆನ್ನು ತೋರಿಸಿ ಓಡಿಹೋಗಲಾರೆ; ಯಶಸ್ಸಿಗೆ ಶ್ರಮಿಸಲು ಸಿದ್ದ: ಶರಣ್ಯ ಶೆಟ್ಟಿ
ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ತೆರೆ ಹಂಚಿಕೊಳ್ಳುವುದು ಪ್ರತಿಯೊಬ್ಬ ನಟಿಯ ಕನಸಾಗಿರುತ್ತದೆ. ಅಂತಹ ಕೆಲವೇ ಕೆಲವು ಅದೃಷ್ಟಶಾಲಿಗಳಲ್ಲಿ ನಾನು ಒಬ್ಬಳು ಎಂದಿದ್ದಾರೆ ಶರಣ್ಯ ಶೆಟ್ಟಿ.

ಪನ್ನಗಾಭರಣ ಜೊತೆ ಔಟ್-ಅಂಡ್-ಔಟ್ ಕಾಮಿಡಿ ಕಥೆಗೆ ಕೈಜೋಡಿಸಲಿದ್ದಾರೆ ಗಣೇಶ್!
ಗಣೇಶ್ ಫ್ರೆಂಚ್ ಬಿರಿಯಾನಿ ನಿರ್ದೇಶಕ ಪನ್ನಗಾ ಭರಣ ಅವರೊಂದಿಗೆ ಔಟ್-ಅಂಡ್-ಔಟ್ ಕಾಮಿಡಿ ಪ್ರಾಜೆಕ್ಟ್‌ಗಾಗಿ ಜೊತೆಯಾಗಲಿದ್ದಾರೆ.

'ಕೃಷ್ಣಂ ಪ್ರಣಯ ಸಖಿ' ನನ್ನ ವೃತ್ತಿಜೀವನದ ಅತಿ ದೊಡ್ಡ ಬಜೆಟ್ ಚಿತ್ರ: ನಟ ಗಣೇಶ್
ಚಿತ್ರದಲ್ಲಿ ಅರ್ಜುನ್ ಜನ್ಯ ಸಂಯೋಜಿಸಿರುವ ಆರು ಹಾಡುಗಳಿವೆ. ಎರಡು ಹಾಡು ಈಗಾಗಲೇ ಬಿಡುಗಡೆಯಾಗಿದೆ ಮತ್ತು ಚಿನ್ನಮ್ಮ ಟ್ರ್ಯಾಕ್ ಪ್ರೇಕ್ಷಕರ ಗಮನ ಸೆಳೆದಿದೆ.

ಗಣೇಶ್ ನಟನೆಯ 41ನೇ ಚಿತ್ರ 'ಕೃಷ್ಣಂ ಪ್ರಣಯ ಸಖಿ' ಸ್ವಾತಂತ್ರ್ಯ ದಿನಾಚರಣೆಗೆ ರಿಲೀಸ್!
ಗೋಲ್ಡನ್ ಸ್ಟಾರ್ ಗಣೇಶ್ ಬಾನ ದಾರಿಯಲ್ಲಿ ಸಿನಿಮಾ ನಂತರ ಮತ್ತೆ ಯಾವುದೇ ಚಿತ್ರಗಳು ರಿಲೀಸ್ ಆಗಿರಲಿಲ್ಲ, ಈಗ ತಮ್ಮ 41ನೇ ಸಿನಿಮಾ ರಿಲೀಸ್ ಗಾಗಿ ಗಣೇಶ್ ಸಜ್ಜಾಗಿದ್ದಾರೆ.

ವಿಯೆಟ್ನಾಂನಲ್ಲಿ ಅಂತಿಮ ಹಂತದ ಚಿತ್ರೀಕರಣಕ್ಕೆ 'ಕೃಷ್ಣಂ ಪ್ರಣಯ ಸಖಿ' ಚಿತ್ರತಂಡ ಸಜ್ಜು
ಶ್ರೀನಿವಾಸ್ ರಾಜು ನಿರ್ದೇಶನದ ಗಣೇಶ್ ನಟನೆಯ ಮುಂಬರುವ ಚಿತ್ರ 'ಕೃಷ್ಣಂ ಪ್ರಣಯ ಸಖಿ' ಚಿತ್ರೀಕರಣ ಮುಕ್ತಾಯದ ಹಂತದಲ್ಲಿದ್ದು, ವಿಯೆಟ್ನಾಂನಲ್ಲಿ ಅಂತಿಮ ಹಂತದ ಚಿತ್ರೀಕರಣಕ್ಕೆ ಚಿತ್ರತಂಡವು ತಯಾರಿ ನಡೆಸುತ್ತಿದೆ.

ಸರಳವಾದ ಕಥೆಗಳನ್ನು ನೇರವಾಗಿ ಹೇಳುವುದೂ ಒಂದು ಚಾತುರ್ಯ; ಅದು ಸಿಂಪಲ್ ಸುನಿಗೆ ಇದೆ: ನಟ ಗಣೇಶ್
ಈ ಹಿಂದೆ ಗಣೇಶ್ ಜೊತೆ 'ಸಕತ್' ಎಂಬ ಸಿನಿಮಾ ಮಾಡಿದ್ದ 'ಸಿಂಪಲ್ ಆಗಿ ಒಂದು ಲವ್ ಸ್ಟೋರಿ' ಚಿತ್ರದ ನಿರ್ದೇಶಕ ಸುನಿ ತಮ್ಮ ಮುಂದಿನ ಪ್ರಾಜೆಕ್ಟ್‌ನೊಂದಿಗೆ ಮರಳಿದ್ದಾರೆ.

ಗಣೇಶ್- ಅಮೂಲ್ಯ ನಟನೆಯ 'ಶ್ರಾವಣಿ ಸುಬ್ರಮಣ್ಯ'ಗೆ 10 ವರ್ಷಗಳ ಸಂಭ್ರಮಾಚರಣೆ, ಬರಲಿದೆ ಸೀಕ್ವೆಲ್!
ಮಂಜು ಸ್ವರಾಜ್ ನಿರ್ದೇಶನದ ಗಣೇಶ್ ಮತ್ತು ಅಮೂಲ್ಯ ಅಭಿನಯದ ಶ್ರಾವಣಿ ಸುಬ್ರಮಣ್ಯ 2013ರ ಡಿಸೆಂಬರ್ 27 ರಂದು ಬಿಡುಗಡೆಯಾಯಿತು. ಚಿತ್ರ ಬಿಡುಗಡೆಯಾಗಿ 10 ವರ್ಷ ಕಳೆದಿದ್ದು, ನೆನ್ನೆಯಷ್ಟೇ ಹತ್ತನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಚಿತ್ರತಂಡ ಶ್ರಾವಣಿ ಸುಬ್ರಹ್ಮಣ್ಯ ಶೀರ್ಷಿಕೆಯ ಸೀಕ್ವೆಲ್ ಅನ್ನು ಘೋಷಿಸಿದೆ.

ಗಣೇಶ್, ರುಕ್ಮಿಣಿ ವಸಂತ್, ರೀಷ್ಮಾ ನಾಣಯ್ಯ ನಟನೆಯ 'ಬಾನದಾರಿಯಲ್ಲಿ' ಒಟಿಟಿಯಲ್ಲಿ ಬಿಡುಗಡೆ
ಸೆಪ್ಟೆಂಬರ್ 15 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಬಾನದರಿಯಲ್ಲಿ' ಸಿನಿಮಾ ಇದೀಗ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಪ್ರೀತಂ ಗುಬ್ಬಿ ನಿರ್ದೇಶನದ ಈ ಸಿನಿಮಾ ಸಿನಿಪ್ರಿಯರಿಂದ ಸಕಾರಾತ್ಮಕ ಮೆಚ್ಚುಗೆಗೆ ಪಾತ್ರವಾಯಿತು.

ನನ್ನ ಕಥೆಗೆ ಗಣೇಶ್ ಚೆನ್ನಾಗಿ ಹೊಂದಿಕೊಳ್ಳುತ್ತಾರೆ: ನಿರ್ದೇಶಕ ಪ್ರೀತಂ ಗುಬ್ಬಿ
ಕನ್ನಡದ ನಿರ್ದೇಶಕ ಪ್ರೀತಂ ತಮ್ಮ ಸೀಮಿತ ಚಿತ್ರಕಥೆಗೆ ಹೆಸರುವಾಸಿಯಾಗಿದ್ದಾರೆ. ಹೆಚ್ಚಾಗಿ ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೆ ಚಿತ್ರ ಮಾಡಲು ಆದ್ಯತೆ ನೀಡುತ್ತಾರೆ.

