G20

ಜಿ-20 ಶೃಂಗಸಭೆ ಔತಣಕೂಟದಲ್ಲಿ ಪಾಲ್ಗೊಳ್ಳುತ್ತಿಲ್ಲ: ಹೆಚ್.ಡಿ. ದೇವೇಗೌಡ
ರಾಷ್ಟ್ರಪತಿ ದ್ರೌಪದಿ ಮುರ್ಮು ನಾಳೆ ಆಯೋಜಿಸಿರುವ ಜಿ-20 ಶೃಂಗಸಭೆಯ ಔತಣಕೂಟಕ್ಕೆ ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ ಹಾಗೂ ಹೆಚ್. ಡಿ. ದೇವೇಗೌಡ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಆರೋಗ್ಯದ ಕಾರಣದಿಂದ ಜಿ20 ಔತಣಕೂಟದಲ್ಲಿ ಭಾಗವಹಿಸುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಶುಕ್ರವಾರ ಹೇಳಿದ್ದಾರೆ.

‘ಇದು ವಿಭಿನ್ನ ಜಗತ್ತು, ವಿಭಿನ್ನ ಭಾರತ, ವಿಭಿನ್ನ ಪ್ರಧಾನಿ’, ಜಿ20ಯಲ್ಲಿ ನವ ಭಾರತ ಭಿನ್ನತೆ ತಂದಿದೆ: ಎಸ್ ಜೈಶಂಕರ್
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಬದಲಾದ ಮನೋಭಾವಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮನ್ನಣೆ ನೀಡಿದ್ದಾರೆ, ಭಾರತವು ರಾಜತಾಂತ್ರಿಕತೆಯ ಉನ್ನತ ಕೋಷ್ಟಕದಲ್ಲಿ ತನ್ನ ಸ್ಥಾನವನ್ನು ಕಂಡುಕೊಳ್ಳಲು ಕಾರಣವಾಗಿದೆ ಎಂದಿದ್ದಾರೆ.

ಆಫ್ರಿಕನ್ ಒಕ್ಕೂಟದ ಸೇರ್ಪಡೆಯೊಂದಿಗೆ G20 ಇನ್ಮುಂದೆ G21!
ಜಿ20 ಶೃಂಗಸಭೆಯು ಈ ಬಾರಿ ಐತಿಹಾಸಿಕವಾಗಲಿದ್ದು, ಮುಕ್ತಾಯದ ವೇಳೆಗೆ ಆಫ್ರಿಕನ್ ಯೂನಿಯನ್(AU) ಹೊಸ ಸದಸ್ಯತ್ವದೊಂದಿಗೆ ಜಿ21 ಆಗಿ ಬದಲಾಗಲಿದೆ. ಆಫ್ರಿಕನ್ ಯೂನಿಯನ್ ಅನ್ನು ಜಿ20ಗೆ ಸೇರ್ಪಡೆಗೆ ಭಾರತ ಪ್ರಸ್ತಾಪಿಸಿದೆ.

ಬೆಂಗಳೂರಿನಲ್ಲಿ UPI ಮೂಲಕ ರಸ್ತೆ ಬದಿ ತರಕಾರಿ ಖರೀದಿಸಿದ ಜರ್ಮನಿ ಸಚಿವ, ಭಾರತದ ಡಿಜಿಟಲ್ ಪೇಮೆಂಟ್ ಕ್ರಾಂತಿಗೆ ಶ್ಲಾಘನೆ!
ಜಿ-20 ಶೃಂಗಸಭೆಗಾಗಿ ಬೆಂಗಳೂರಿಗೆ ಆಗಮಿಸಿರುವ ಜರ್ಮನಿಯ ಸಚಿವರೊಬ್ಬರು ರಸ್ತೆಬದಿ ತರಕಾರಿ ಖರೀದಿ ಮಾಡಿ ಯುಪಿಐ ಮೂಲಕ ಹಣ ಪಾವತಿ ಮಾಡಿದ್ದಾರೆ.

ಸೈಬರ್ ಅಪರಾಧ ನಿಯಂತ್ರಣದತ್ತ ಕೇಂದ್ರ ಗಮನಹರಿಸುತ್ತಿದೆ: ಜಿ20 ಡಿಜಿಟಲ್ ಎಕಾನಮಿ ಸಚಿವರ ಸಭೆಯಲ್ಲಿ ಅಶ್ವಿನಿ ವೈಷ್ಣವ್
ಕೇಂದ್ರ ಸರ್ಕಾರ ಸೈಬರ್ ವಂಚನೆ ಚಟುವಟಿಕೆಗಳನ್ನು ನಿಯಂತ್ರಿಸುವತ್ತ ಗಮನಹರಿಸುತ್ತಿದೆ ಎಂದು ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಕೇಂದ್ರ ಸರ್ಕಾರ ಜಿ20ಯನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ: ಕಾಂಗ್ರೆಸ್
ಮುಂಬರುವ ಜಿ 20 ಶೃಂಗಸಭೆಯನ್ನು ಕೇಂದ್ರ ಸರ್ಕಾರ 'ಚುನಾವಣಾ ಪ್ರಚಾರ'ಕ್ಕೆ ಬಳಸಿಕೊಳ್ಳುತ್ತಿದೆ ಮತ್ತು ಜನರ ಗಮನವನ್ನು ನೈಜ ಸಮಸ್ಯೆಗಳಿಂದ ಬೇರೆಡೆಗೆ ಸೆಳೆಯಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ.

ಕಳೆದ 9 ವರ್ಷಗಳಲ್ಲಿ ಭಾರತದಲ್ಲಿ ಅಭೂತಪೂರ್ವ ಡಿಜಿಟಲ್ ರೂಪಾಂತರ: ಪ್ರಧಾನಿ ನರೇಂದ್ರ ಮೋದಿ
ಭಾರತ ದೇಶದಲ್ಲಿ ಯಶಸ್ವಿಯಾಗುವ ಪರಿಹಾರಗಳು ಜಗತ್ತಿನ ಯಾವ ಕಡೆಗಳಲ್ಲಿಯೂ ಸಹ ಅನ್ವಯ ಮಾಡಬಹುದು, ಭಾರತ ದೇಶದ ಡಿಜಿಟಲ್ ಸಾರ್ವಜನಿಕ ಮೂಲಭೂತ ಸೌಕರ್ಯಗಳು ಉತ್ತಮವಾಗಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಜಮ್ಮು-ಕಾಶ್ಮೀರ ಪರಿಸ್ಥಿತಿಯ ಬಗ್ಗೆ ಜಿ20 ಗಮನಹರಿಸಬೇಕು: ಕಾಂಗ್ರೆಸ್
'ಜಿ-20 ಸಭೆ ನಡೆಸುವ ಮೂಲಕ ಜಮ್ಮು-ಕಾಶ್ಮೀರದಲ್ಲಿ ಸಹಜ ಸ್ಥಿತಿ ಸ್ಥಾಪನೆಯಾಗಿದೆ ಎಂಬುದನ್ನು ತೋರಿಸಲು ಸರ್ಕಾರ ಬಯಸಿತ್ತು. ಆದರೆ ಕೇಂದ್ರಾಡಳಿತ ಪ್ರದೇಶದಲ್ಲಿ ತುರ್ತು ಪರಿಸ್ಥಿತಿಯಂತಹ ಸ್ಥಿತಿ ಇದೆ ಎಂದು ವಿಪಕ್ಷ ಕಾಂಗ್ರೆಸ್- ಪಿಡಿಪಿ ಆರೋಪಿಸಿವೆ.

ಪಶ್ಚಿಮದ ದೇಶಗಳಿಗೆ ರಷ್ಯಾ ವಿದೇಶಾಂಗ ಸಚಿವರ ತರಾಟೆ, ಅಫ್ಘಾನಿಸ್ತಾನದ ಕಥೆಯೇನು ಎಂದು ಪ್ರಶ್ನೆ
ಜಿ-20 ಸಭೆಗಳಲ್ಲಿ ರಷ್ಯಾ- ಉಕ್ರೇನ್ ವಿಷಯಗಳನ್ನು ಬಿಡದೇ ಪ್ರಸ್ತಾಪಿಸುತ್ತಿರುವ ಪಶ್ಚಿಮದ ದೇಶಗಳ ವಿರುದ್ಧ ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

