FSSAI

ಆಹಾರ ಸುರಕ್ಷತಾ ಶ್ರೇಯಾಂಕದಲ್ಲಿ ಮತ್ತೆ ಅಗ್ರಸ್ಥಾನದಲ್ಲಿ ಕೇರಳ, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?
ಆರನೇ ರಾಜ್ಯ ಆಹಾರ ಸುರಕ್ಷತಾ ಸೂಚ್ಯಂಕ (ಎಸ್‌ಎಫ್‌ಎಸ್‌ಐ) 2024ರಲ್ಲಿ ಕೇರಳ ಸತತ ಎರಡನೇ ಬಾರಿಗೆ ಅಗ್ರಸ್ಥಾನದಲ್ಲಿದೆ. ಕಳೆದ ವರ್ಷ ಮೂರನೇ ಸ್ಥಾನಕ್ಕೆ ಕುಸಿದಿದ್ದ ತಮಿಳುನಾಡು ಈ ಬಾರಿ ಎರಡನೇ ಸ್ಥಾನ ಪಡೆದುಕೊಂಡಿದೆ.

ಅಸುರಕ್ಷಿತರ ಆಹಾರಗಳ ವಿರುದ್ಧ FSSAI ಸಮರ: ರಾಜ್ಯಾದ್ಯಂತ 2,800 ಕ್ಕೂ ಹೆಚ್ಚು ತಿನಿಸುಗಳ ಪರಿಶೀಲನೆ
ಮೊದಲ ದಿನ (ಆ.30) ಬೀದಿ ಆಹಾರ ಮಾರಾಟಗಾರರು ಸೇರಿದಂತೆ 753 ಆಹಾರ ಸಂಸ್ಥೆಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ಬೆಂಗಳೂರಿನಲ್ಲಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಬೀದಿ ವ್ಯಾಪಾರ ಮಳಿಗೆಗಳು ಸೇರಿದಂತೆ ಒಟ್ಟು 67 ಆಹಾರ ಮಾರಾಟ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ.

ರಾಜಸ್ಥಾನದಿಂದ ರೈಲಿನಲ್ಲಿ ಬಂದಿದ್ದು ಮೇಕೆ ಮಾಂಸ: FSSAI
ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಸರಬರಾಜು ಆಗುವ ಮಟನ್ ಮಾಂಸದ ಜತೆಗೆ ನಾಯಿ ಮಾಂಸವನ್ನು ತರಲಾಗಿದೆ ಎಂದು ಪುನೀತ್ ಕೆರೆಹಳ್ಳಿ ಆರೋಪ ಮಾಡಿದ್ದರು.

ಬೆಂಗಳೂರು: ರೈಲುಗಳ ಮೂಲಕ ನಾಯಿ ಮಾಂಸ ಸರಬರಾಜು ಪ್ರಕರಣ; ಮಾಂಸ ಮಾದರಿ FSSAI ಮುಂದು!
ಜುಲೈ 26 ರಂದು ಮಾಧ್ಯಮಗಳಲ್ಲಿ ಬೆಂಗಳೂರು ನಗರಕ್ಕೆ ರೈಲುಗಳ ಮುಖಾಂತರ ಕುರಿ ಮತ್ತು ಇತರೆ ಪ್ರಾಣಿಗಳ ಮಾಂಸವು ಸರಬರಾಜು ಆಗುತ್ತಿರುವ ಕುರಿತಂತೆ ಸುದ್ದಿಗಳು ಭಿತ್ತರವಾಗಿರುತ್ತದೆ. ಈ ಕುರಿತಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ವತಿಯಿಂದ ಅಗತ್ಯ ಕ್ರಮಗಳನ್ನು ವಹಿಸಲಾಗಿದೆ.

ಗುಣಮಟ್ಟದ ಬಗ್ಗೆ ಕಳವಳ: MDH ಮತ್ತು Everest ಉತ್ಪನ್ನಗಳ ಪರೀಕ್ಷೆಗೆ FSSAI ಮುಂದು
ಗುಣಮಟ್ಟದ ಉದ್ದೇಶದಿಂದ ದೇಶಾದ್ಯಂತ MDH ಮತ್ತು ಎವರೆಸ್ಟ್ ಸೇರಿದಂತೆ ಎಲ್ಲಾ ಬ್ರಾಂಡ್ ಮಸಾಲೆಗಳ ಮಾದರಿಗಳನ್ನು ಪರೀಕ್ಷಿಸಲು ಆಹಾರ ಸುರಕ್ಷತಾ ನಿಯಂತ್ರಕ (FSSAI) ಮುಂದಾಗಿದೆ.

ರೋಗದ ಅಪಾಯ: ನ್ಯೂಸ್ ಪೇಪರ್ ನಲ್ಲಿ ಆಹಾರ ಪದಾರ್ಥ ನೀಡುವುದನ್ನು ನಿಲ್ಲಿಸಿ; ಮಾರಾಟಗಾರರಿಗೆ FSSAI ಎಚ್ಚರಿಕೆ
ದಿನಪತ್ರಿಕೆ ಹಾಗೂ ಇನ್ನಿತರ ಪತ್ರಿಕೆಗಳಲ್ಲಿ ಆಹಾರ ಪದಾರ್ಥಗಳನ್ನು ಪಾರ್ಸೆಲ್ ಕಟ್ಟಿ ಕೊಡುವುದು, ಸಂಗ್ರಹಿಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಮಾರಾಟಗಾರರಿಗೆ ಶನಿವಾರ ತಾಕೀತು ಮಾಡಿದೆ.

ಮೊಸರು ಪ್ಯಾಕೆಟ್ ಮೇಲೆ ‘ದಹಿ’ ಹೆಸರು ವಿವಾದ; ವಿರೋಧ, ಟೀಕೆ ಬೆನ್ನಲ್ಲೇ ಆದೇಶ ಹಿಂಪಡೆದ ಎಫ್‌ಎಸ್‌ಎಸ್‌ಎಐ
ಮೊಸರು ಪ್ಯಾಕೆಟ್ ಮೇಲೆ ಹಿಂದಿ ಪದ ‘ದಹಿ’ ಎಂದು ನಮೂದಿಸುವಂತೆ ಹೊರಡಿಸಿದ್ದ ನಿರ್ದೇಶನಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ ಬೆನ್ನಲ್ಲೇ, ಯೂಟರ್ನ್ ಹೊಡೆದಿರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ತನ್ನ ಆದೇಶವನ್ನು ಗುರುವಾರ ಹಿಂಪಡೆದುಕೊಂಡಿದೆ.

ಹಿಂದಿಯ 'ದಹಿ' ಬೇಡ, ತಮಿಳಿನ 'ತಯಿರ್' ಸಾಕು; ಎಫ್‌ಎಸ್‌ಎಸ್‌ಎಐ ನಿರ್ದೇಶನದ ವಿರುದ್ಧ ಸಿಎಂ ಸ್ಟಾಲಿನ್ ಕಿಡಿ
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ನಿರ್ದೇಶನದಂತೆ ತನ್ನ ಮೊಸರಿನ ಸ್ಯಾಚೆಟ್‌ಗಳಲ್ಲಿ ಹಿಂದಿ ಪದ 'ದಹಿ'ಯನ್ನು ಬಳಸುವುದಿಲ್ಲ ಮತ್ತು ತಾನು ಕೇವಲ ತಮಿಳು ಪದ 'ತಯಿರ್' ಅನ್ನು ಬಳಸುವುದಾಗಿ ತಮಿಳುನಾಡಿನ ಸರ್ಕಾರಿ ಸ್ವಾಮ್ಯದ ಆವಿನ್ ಹೇಳಿದೆ.

ಶಾಲೆಗಳ ಸುತ್ತಮುತ್ತ ಜಂಕ್ ಫುಡ್ ಗಳ ಜಾಹೀರಾತು ನಿಷೇಧಿಸಿ: ಎಫ್ಎಸ್ಎಸ್ಎಐ
ಅನಾರೋಗ್ಯಕರ ಆಹಾರಗಳ ಜಾಹೀರಾತುಗಳನ್ನು ಶಾಲಾ ಆವರಣದ ಸುತ್ತಮುತ್ತ ಪ್ರಚಾರ ...

