Free Food

Tirumala: ತಿರುಪತಿ ದೇವಸ್ಥಾನದ ಉಚಿತ ಅನ್ನದಾಸೋಹಕ್ಕೆ ಮುಂಬೈ ವ್ಯಕ್ತಿ 11 ಕೋಟಿ ರೂ ದೇಣಿಗೆ!
ತಿರುಮಲ ತಿರುಪತಿ ದೇವಸ್ಥಾನದ ಶ್ರೀ ವೆಂಕಟೇಶ್ವರ ಅನ್ನಪ್ರಸಾದ ಟ್ರಸ್ಟ್ಗೆ ಮುಂಬೈ ಮೂಲದ ಟ್ರಸ್ಟ್ ಒಂದು 11 ಕೋಟಿ ರೂ. ದೇಣಿಗೆ ನೀಡಿದೆ.

ಕರ್ನಾಟಕ ಚುನಾವಣೆ: ಮತ ಚಲಾಯಿಸಿ ಬಂದವರಿಗೆ ಉಚಿತ ತಿಂಡಿ-ತಿನಿಸುಗಳಿಗೆ ನಿರ್ಬಂಧ ಹೇರಿದ BBMP ಕ್ರಮಕ್ಕೆ ಹೈಕೋರ್ಟ್ ತಡೆ
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಿ ಬಂದವರಿಗೆ ಉಚಿತವಾಗಿ ತಿಂಡಿ-ತಿನಿಸು ನೀಡಲು ಮುಂದಾಗಿದ್ದ ಬೆಂಗಳೂರಿನ ಎರಡು ಹೋಟೆಲ್ಗಳ ನಿರ್ಧಾರಕ್ಕೆ ನಿರ್ಬಂಧ ವಿಧಿಸಿದ್ದ ಬಿಬಿಎಂಪಿ ಕ್ರಮಕ್ಕೆ ಹೈಕೋರ್ಟ್ ತಡೆ ನೀಡಿದೆ.

ಲೋಕಸಭೆ ಚುನಾವಣೆ ಮೇಲೆ ಕಣ್ಣು: ಅಂತ್ಯೋದಯ ಉಚಿತ ಆಹಾರ ಯೋಜನೆ 1 ವರ್ಷ ವಿಸ್ತರಣೆ; ಸಂಪೂರ್ಣ ವೆಚ್ಚ ಭರಿಸಲಿದೆ ಕೇಂದ್ರ ಸರ್ಕಾರ
ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರ್ಕಾರ ಮುಂದಿನ ವರ್ಷದವರೆಗೆ ಉಚಿತ ಆಹಾರ ಯೋಜನೆಯನ್ನು ವಿಸ್ತರಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ.

ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ಪಡೆಯಲು ಗುರುತಿನ ಚೀಟಿ ಬೇಕಿಲ್ಲ: ಬಿಬಿಎಂಪಿ ಆಯುಕ್ತ
ಕೋವಿಡ್-19 ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಬಡವರು, ಕೂಲಿ ಕಾರ್ಮಿಕರ ಮುಂತಾದವರು ಗುರುತಿನ ಚೀಟಿ ಇಲ್ಲದೇ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ಪಡೆಯಬಹುದು ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.

ಬೆಂಗಳೂರು: ಕೋವಿಡ್ ಸೋಂಕಿತರ ಮನೆ ಬಾಗಿಲಿಗೆ ಉಚಿತ ಆಹಾರ ಸೇವೆ!
ಕೋವಿಡ್-19 ಸೋಂಕಿತರು ಹಾಗೂ ಅದರಿಂದ ಚೇತರಿಕೊಂಡ ಅವರ ಕುಟುಂಬದವರಿಗಾಗಿ ಮನೆಯಲ್ಲಿಯೇ ತಯಾರಿಸಿದ ಪೌಷ್ಠಿಕಯುಕ್ತ ಆಹಾರವನ್ನು ಪೂರೈಸುವ ಕೆಲಸದಲ್ಲಿ ಕೆಲ ಸ್ವಯಂಸೇವಕರು ತೊಡಗಿಸಿಕೊಂಡಿದ್ದಾರೆ.

ಕೋವಿಡ್ ಕರ್ಫ್ಯೂ ನಡುವೆ ಆಂಬ್ಯುಲೆನ್ಸ್ ಚಾಲಕರಿಗೆ ಕೊಡಗು ನಿವಾಸಿಯಿಂದ ಉಚಿತ ಆಹಾರ ಸೇವೆ ಆರಂಭ
ಕೋವಿಡ್ ಕರ್ಫ್ಯೂ ಸಮಯದಲ್ಲಿ ಆಂಬುಲೆನ್ಸ್ ಚಾಲಕರಿಗೆ ಸಹಾಯ ಮಾಡಲು ಒಂದು ವಿಶಿಷ್ಟ ಕೆಲಸವನ್ನು ಮಾಡುತ್ತಿದ್ದಾರೆ ಮಡೆನಾಡು ಗ್ರಾಮದ ಅಶೋಕ್ ಬಿಎಸ್. ಹೌದು ಸಮಯಕ್ಕೆ ಸರಿಯಾಗಿ ಊಟ ಸಿಗದೆ ಸಂಕಷ್ಟಕ್ಕೆ ಸಿಲುಕುವ ಆಂಬ್ಯುಲೆನ್ಸ್ ಚಾಲಕರಿಗೆ ಉಚಿತ ಆಹಾರವನ್ನು ನೀಡುತ್ತಿದ್ದಾರೆ.

ಇಂದಿರಾ ಕ್ಯಾಂಟಿನ್ ನಲ್ಲಿ ಉಚಿತ ಊಟವಿಲ್ಲ: ಅಚ್ಚರಿ ಮೂಡಿಸಿದ ಸಿಎಂ ನಿರ್ಧಾರ
ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಊಟ ನೀಡುವುದನ್ನು ನಿಲ್ಲಿಸಲು ಸರ್ಕಾರ ನಿರ್ಧರಿಸಿದೆ.ಆರ್ಥಿಕ ಹೊರೆ ಹೆಚ್ಚುತ್ತಿರುವ ಹಿನ್ನೆಲೆಯೊಳಗೆ ಉಚಿತ ಊಟದ ಬದಲು ಹಿಂದೆ ಜಾರಿಯಲ್ಲಿದ್ದ ರಿಯಾಯಿತಿ ದರದಲ್ಲಿ ಊಟ–ಉಪಾಹಾರ ನೀಡಲು ಸರ್ಕಾರ ತೀರ್ಮಾನಿಸಿದೆ.

ಮನೆ ಬಾಗಿಲಿಗೆ ಉಚಿತ ಊಟದ ವ್ಯವಸ್ಥೆ ಆರಂಭಿಸಿದ ಕೇರಳ ಸರ್ಕಾರ
ಸಮುದಾಯ ಅಡುಗೆ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಅವಶ್ಯ ಇರುವವರ ಮನೆ ಬಾಗಿಲಿಗೆ ಉಚಿತವಾಗಿ ಸಿದ್ಧ ಆಹಾರ ಪೂರೈಸುವ ಯೋಜನೆಯನ್ನು ಕೇರಳ ಸರ್ಕಾರ ಆರಂಭಿಸಿದೆ. ಸದ್ಯ 941 ಪಂಚಾಯತ್ಗಳಲ್ಲಿ ಸಮುದಾಯ ಅಡುಗೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಬೆಂಗಳೂರಿನ ಪೆಟ್ರೋಲ್ ಬಂಕ್ ನೂತನ ಪ್ರಯೋಗ: ಇಂಧನ ಹಾಕಿಸಿಕೊಳ್ಳುವವರಿಗೆ ಉಚಿತ ಊಟ, ತಿಂಡಿ
ಇಂದಿರಾ ನಗರದ ಪೆಟ್ರೋಲ್ ಬಂಕ್ ತನ್ನ ಬಂಕ್ ನಲ್ಲಿ ಇಂಧನ ಹಾಕಿಸಿಕೊಳ್ಳುವವರಿಗೆ ಕಾಫಿ, ತಿಂಡಿ, ಊಟ ನೀಡುವ ಹೊಸ ಯೋಜನೆ ಜಾರಿಗೆ ತಂದಿದೆ. ...

