fraud

ಮಹಾರಾಷ್ಟ್ರ: ಸಹಸ್ರಾರು ಜನರಿಗೆ 300 ಕೋಟಿ ರೂ ವಂಚನೆ; ಸ್ವಾಮೀಜಿ ಸೋಗಿನಲ್ಲಿದ್ದ ವ್ಯಕ್ತಿಯ ಬಂಧನ!
ವೃಂದಾವನದ ಕೃಷ್ಣ ಬಲರಾಮ ದೇವಸ್ಥಾನದ ಬಳಿ ವೃಂದಾವನ ಮತ್ತು ಬೀಡ್ ಜಿಲ್ಲಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಬನ್ ವಿಶ್ವನಾಥ್ ಶಿಂಧೆ ಅವರನ್ನು ಬಂಧಿಸಿದ್ದಾರೆ.

ಭೂ ಅಕ್ರಮಗಳಿಗೆ ಸಂಪೂರ್ಣ ಕಡಿವಾಣಕ್ಕೆ ಸರ್ಕಾರ ಕ್ರಮ: RTCಗೆ ಆಧಾರ್ ಜೋಡಿಸುವ ಕಾರ್ಯಕ್ಕೆ ಅಧಿಕೃತ ಚಾಲನೆ
ಅಮಾಯಕರ ಜಮೀನುಗಳನ್ನು ವ್ಯವಸ್ಥಿತವಾಗಿ ದೋಚುವ ಕೆಲಸವಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ಸತ್ತವರ ಜಮೀನುಗಳನ್ನೂ ಸಹ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿರುವ ಕುರಿತು ರಾಜ್ಯದ ಮೂಲೆ ಮೂಲೆಯಿಂದ ದೂರುಗಳು ಕೇಳಿ ಬರುತ್ತಿವೆ.

ಷೇರು ಮಾರುಕಟ್ಟೆ ಹೂಡಿಕೆ ಆಮಿಷ, ವಂಚನೆ: 4 ತಿಂಗಳಲ್ಲಿ 197 ಕೋಟಿ ರು. ಹಣ ಕಳೆದುಕೊಂಡ ಬೆಂಗಳೂರಿಗರು!
ಕೇವಲ ನಾಲ್ಕು ತಿಂಗಳಲ್ಲಿ, ಬೆಂಗಳೂರಿಗರು ಮೋಸದ ಹೂಡಿಕೆ ಯೋಜನೆಗಳಿಂದ 197 ಕೋಟಿ ರೂ. ಹಣ ಕಳೆದುಕೊಂಡಿದ್ದಾರೆ. ಒಟ್ಟು 735 ಪ್ರಕರಣಗಳು ದಾಖಲಾಗಿದ್ದು, ಶೇ.10ರಷ್ಟು ಬ್ಯಾಂಕ್ ಖಾತೆಗಳನ್ನು ಮಾತ್ರ ಸ್ಥಗಿತಗೊಳಿಸಲಾಗಿದೆ.

ಮಂಗಳೂರು: ಸಿಬಿಐ ತನಿಖೆಯ ಭಯ ಹುಟ್ಟಿಸಿ ನಿವೃತ್ತ ಎಂಜಿನಿಯರ್‌ಗೆ 1.6 ಕೋಟಿ ರೂ. ವಂಚನೆ
ಕೇಂದ್ರ ತನಿಖಾ ಸಂಸ್ಥೆಯಿಂದ ಸಂಭವನೀಯ ತನಿಖೆಯನ್ನು ತಪ್ಪಿಸಿಕೊಳ್ಳಬೇಕಾದರೆ ಹಣ ನೀಡಬೇಕು ಎಂದು ಹೇಳಿ ನಿವೃತ್ತ ಎಂಜಿನಿಯರ್‌ಗೆ 1.6 ಕೋಟಿ ರೂಪಾಯಿ ವಂಚಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಮಂಗಳೂರು: ಸಿಬಿಐ ಅಧಿಕಾರಿ ಸೋಗಿನಲ್ಲಿ ಗುತ್ತಿಗೆದಾರರಿಗೆ 15 ಲಕ್ಷ ರೂ. ವಂಚನೆ
ಸಿಬಿಐ ಅಧಿಕಾರಿಯ ಸೋಗಿನಲ್ಲಿ ಗುತ್ತಿಗೆದಾರರೊಬ್ಬರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹೇಳಿ 15 ಲಕ್ಷ ರೂ.ಗೂ ಅಧಿಕ ಹಣವನ್ನು ದೋಚಿರುವ ಘಟನೆ ಭಾನುವಾರ ನಡೆದಿದೆ. ಕೊಟ್ಟಾರ ನಿವಾಸಿಯಾದ ಸಂತ್ರಸ್ತರಿಗೆ ಏಪ್ರಿಲ್ 25 ರಂದು ಕರೆ ಬಂದಿದೆ. ಬಳಿಕ ಈ ವಂಚನೆಯಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಅವರು ಹೇಳಿದರು.

ಸಾಲ ಪಡೆದು 439.7 ಕೋಟಿ ರೂಪಾಯಿ ವಂಚನೆ ಆರೋಪ: ರಮೇಶ್ ಜಾರಕಿಹೊಳಿ ವಿರುದ್ಧ ಎಫ್‌ಐಆರ್ ದಾಖಲು
ಸಹಕಾರಿ ಬ್ಯಾಂಕ್‌ನಿಂದ 439.7 ಕೋಟಿ ರೂಪಾಯಿ ಸಾಲ ಪಡೆದು ಮರುಪಾವತಿ ಮಾಡದೆ ವಂಚಿಸಿದ ಆರೋಪದ ಮೇಲೆ ಮಾಜಿ ಸಚಿವ, ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಬೆಂಗಳೂರು: ಜೀವಿತ ಪ್ರಮಾಣಪತ್ರ ನವೀಕರಿಸಲು ಹೋಗಿ 1.2 ಲಕ್ಷ ರೂ. ಹಣ ಕಳೆದುಕೊಂಡ ನಿವೃತ್ತ ಪೊಲೀಸ್ ಅಧಿಕಾರಿ!
ತಮ್ಮ ಜೀವಿತ ಪ್ರಮಾಣಪತ್ರವನ್ನು ನವೀಕರಿಸಲು ಸರ್ಕಾರಿ ದಾಖಲೆಗಳನ್ನು ಹಂಚಿಕೊಂಡ ನಂತರ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರಿಗೆ 1.27 ಲಕ್ಷ ರೂ. ಗಳನ್ನು ವಂಚಿಸಲಾಗಿದೆ.

ಬೋವಿ ನಿಗಮದ ಮಾಜಿ ಎಂಡಿ, ಸಿಬ್ಬಂದಿಗಳಿಂದ 97 ಕೋಟಿ ರೂಪಾಯಿ ದುರುಪಯೋಗ: ಸಿಐಡಿ ವರದಿ ಸಲ್ಲಿಕೆ
ಕರ್ನಾಟಕ ಬೋವಿ ಅಭಿವೃದ್ಧಿ ನಿಗಮಕ್ಕೆ (KBDC) ಉದ್ಯೋಗ ಯೋಜನೆಯಡಿ ರಾಜ್ಯ ಸರ್ಕಾರ ನೀಡಿದ್ದ 97 ಕೋಟಿ ರೂಪಾಯಿಗೂ ಅಧಿಕ ಮೊತ್ತ ಹಣವನ್ನು 500 ಮಂದಿ ಫಲಾನುಭವಿಗಳ ಹೆಸರಿನಲ್ಲಿ ಅಕ್ರಮವಾಗಿ ಬಳಕೆ ಮಾಡಲಾಗಿದೆ ಎಂದು ಅಪರಾಧ ತನಿಖಾ ಇಲಾಖೆ (CID) ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.

ಶಿವಮೊಗ್ಗ: ಅನುಮಾನಾಸ್ಪದ ಬಾಕ್ಸ್ ಪತ್ತೆ ಪ್ರಕರಣದ ತನಿಖೆಯಿಂದ ನಕಲಿ ಸಾಲ ದಂಧೆ ಬಯಲಿಗೆ!
ಶಿವಮೊಗ್ಗ ಪೊಲೀಸ್ ಠಾಣಾ ಬಳಿ ಎರಡು ಅನುಮಾನಾಸ್ಪದ ಪೆಟ್ಟಿಗೆಗಳು ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸಿದಾಗ ನಕಲಿ ಸಾಲದ ದಂಧೆ ಬಯಲಿಗೆ ಬಂದಿದೆ. ಈ ಸಂಬಂಧ ಬಾಬಾ ಅಲಿಯಾಸ್ ನಜ್ರುಲ್ಲಾ ಮತ್ತು ಮೊಹಮ್ಮದ್ ಜಬೀವುಲ್ಲಾ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

