Found Dead

ಖ್ಯಾತ ಅರ್ಥಶಾಸ್ತ್ರಜ್ಞ, ದಲಿತ ಚಿಂತಕ ಕುನ್ಹಮಾನ್ ಮನೆಯಲ್ಲಿ ಶವವಾಗಿ ಪತ್ತೆ
ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ದಲಿತ ಚಿಂತಕ ಎಂ. ಕುನ್ಹಮಾನ್ ಅವರ 74 ನೇ ಹುಟ್ಟುಹಬ್ಬದ ದಿನವಾದ ಭಾನುವಾರ ಸಂಜೆ ಶ್ರೀಕಾರ್ಯಂ ಬಳಿಯ ಅವರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಲಂಡನ್: ಕಳೆದ ತಿಂಗಳು ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿಯ ಮೃತದೇಹ ಥೇಮ್ಸ್ ನದಿಯಲ್ಲಿ ಪತ್ತೆ!
ನವೆಂಬರ್ 17ರಿಂದ ಆತ ಕಾಣೆಯಾಗಿದ್ದ. ಪೂರ್ವ ಲಂಡನ್‌ನ ಕ್ಯಾನರಿ ವಾರ್ಫ್ ಪ್ರದೇಶದ ಬಳಿಯ ಥೇಮ್ಸ್ ನದಿಯಲ್ಲಿ ಪತ್ತೆಯಾದ ಮೃತದೇಹವನ್ನು ಪೊಲೀಸರು ಹೊರತೆಗೆದಿದ್ದಾರೆ. ಸಾವು ಸಂಶಯಾಸ್ಪದವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕೇರಳ: 36 ವರ್ಷದ ಇಸ್ರೇಲಿ ಮಹಿಳೆ ಶವ ಪತ್ತೆ; ಲಿವ್ ಇನ್ ಪಾರ್ಟ್ನರ್ ಕೊಲೆ ಮಾಡಿರುವ ಶಂಕೆ
36 ವರ್ಷದ ಇಸ್ರೇಲಿ ಮಹಿಳೆ ಗುರುವಾರ ದಕ್ಷಿಣ ಕೇರಳ ಜಿಲ್ಲೆಯ ತನ್ನ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯ 70 ವರ್ಷದ ಲಿವ್-ಇನ್ ಪಾರ್ಟ್ನರ್ ಆಕೆಯನ್ನು ಕೊಂದಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.

ಉಡುಪಿ: ನಾಪತ್ತೆಯಾಗಿದ್ದ ಕಾರ್ಕಳ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಶವವಾಗಿ ಪತ್ತೆ
ಕಾರ್ಕಳ ನಗರ ಪೊಲೀಸ್ ಠಾಣೆಯಿಂದ ನಾಪತ್ತೆಯಾಗಿದ್ದ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಸೋಮವಾರ ಶವವಾಗಿ ಪತ್ತೆಯಾಗಿದ್ದಾರೆ. ಕಾರ್ಕಳದ ಲಕ್ಷ್ಮೀದೇವಿ ಕಲ್ಯಾಣ ಮಂಟಪದ ಬಳಿ ಶೃತಿನ್ ಶೆಟ್ಟಿ (35) ಅವರ ಮೃತದೇಹ ಪತ್ತೆಯಾಗಿದೆ.

ತೆಲಂಗಾಣ: ಹಳ್ಳಿಯೊಂದರಲ್ಲಿ ನೂರಾರು ಕೋತಿಗಳ ಮೃತದೇಹ ಪತ್ತೆ!
ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ಹಳ್ಳಿಯೊಂದರಲ್ಲಿ ಸುಮಾರು 100 ಮಂಗಗಳ ಮೃತದೇಹಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈ: ಕುತ್ತಿಗೆ ಸೀಳಿದ ಗಗನಸಖಿಯ ಶವ ಪತ್ತೆ!
ವಾಣಿಜ್ಯ ನಗರಿ ಮುಂಬೈನ ಅಪಾರ್ಟ್‌ಮೆಂಟ್ ಒಂದರಲ್ಲಿ ಕುತ್ತಿಗೆ ಸೀಳಿದ 24 ವರ್ಷದ ಗಗನಸಖಿಯೊಬ್ಬರ ಶವ ಪತ್ತೆಯಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಮದುರೈ: ತಮಿಳು ಹಾಸ್ಯ ನಟ ನಿಧನ; ಬೀದಿಯಲ್ಲಿ ಶವವಾಗಿ ಪತ್ತೆ!
80-90ರ ದಶಕದಲ್ಲಿ ಪೋಷಕ ಪಾತ್ರದಲ್ಲಿ ಮಿಂಚಿದ್ದ ಖ್ಯಾತ ಹಾಸ್ಯ ನಟ ಮೋಹನ್ (60 ವರ್ಷ) ನಿಗೂಢವಾಗಿ ಸಾವನ್ನಪ್ಪಿದ್ದು, ಅವರ ಮೃತದೇಹ ತಮಿಳುನಾಡಿನ ಮದುರೈನ ತಿರುಪರಂಕುಂದ್ರಂನ ಬೀದಿಯಲ್ಲಿ ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.

ಯುದ್ದ ನೌಕೆ 'ಐಎನ್‌ಎಸ್ ವಿಕ್ರಾಂತ್' ನಲ್ಲಿ ನಾವಿಕನ ಶವ ಪತ್ತೆ
ಯುದ್ಧ ವಿಮಾನ ವಾಹಕ ಐಎನ್‌ಎಸ್ ವಿಕ್ರಾಂತ್ ನಲ್ಲಿ ಗುರುವಾರ ಮುಂಜಾನೆ 19 ವರ್ಷದ ನೌಕಾ ಪಡೆಯ ನಾವಿಕರೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ರಕ್ಷಣಾ ಇಲಾಖೆ ಪ್ರಕಟಣೆ ತಿಳಿಸಿದೆ.

ಮಂಗಳೂರು: ನಿವೃತ್ತ ಕಸ್ಟಮ್ಸ್ ಅಧಿಕಾರಿ ಶವವಾಗಿ ಪತ್ತೆ
ಉಡುಪಿ ಜಿಲ್ಲೆಯ ಮಣಿಪಾಲದ ನರಸಿಂಗೇ ದೇವಸ್ಥಾನದ ಬಳಿ ಒಂಟಿಯಾಗಿ ವಾಸಿಸುತ್ತಿದ್ದ ನಿವೃತ್ತ ಕಸ್ಟಮ್ಸ್ ಅಧಿಕಾರಿಯೊಬ್ಬರು ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

