Forest Department

ಸಿಬ್ಬಂದಿ ಕೊರತೆ: ಸೊರಗಿದ ಅರಣ್ಯ ಇಲಾಖೆ
ಪಶುವೈದ್ಯರ ತೀವ್ರ ಕೊರತೆಯಿಂದಾಗಿ ಮಾನವ-ಪ್ರಾಣಿ ಸಂಘರ್ಷದ ಪ್ರಕರಣಗಳನ್ನು ನಿಭಾಯಿಸುವುದು ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುವಲ್ಲಿ ಅರಣ್ಯ ಇಲಾಖೆ ಸಂಕಷ್ಟವನ್ನು ಎದುರಿಸುತ್ತಿದೆ.

ಅರಣ್ಯ ಇಲಾಖೆ ಒಪ್ಪಿಗೆ ಇಲ್ಲದೆ ವಿಂಡ್‌ಮಿಲ್‌ಗೆ ಅನುಮತಿ ನೀಡಿದ್ದ ಆದೇಶ ರದ್ದುಗೊಳಿಸಿದ ಹೈಕೋರ್ಟ್
ಮುಂಬೈ ಮೂಲದ ವಿಂಡ್ ವರ್ಲ್ಡ್(ಇಂಡಿಯಾ) ಲಿಮಿಟೆಡ್‌ನ ಗುತ್ತಿಗೆ ಅವಧಿ ಮುಗಿದ ನಂತರ ಅರಣ್ಯ ಇಲಾಖೆ ಅನುಮತಿ ಪಡೆಯದೆ 221.80 ಹೆಕ್ಟೇರ್‌ನಲ್ಲಿ ವಿಂಡ್‌ಮಿಲ್ ಕಾರ್ಯನಿರ್ವಹಿಸಲು ಅನುಮತಿ ನೀಡಿದ್ದ ಅಹಮದಾಬಾದ್ ವಿಭಾಗದ...

ಹೊನ್ನಾವರದಲ್ಲಿ ಬ್ಲಾಕ್ ಪ್ಯಾಂಥರ್ ಸೆರೆ, ಸುರಕ್ಷಿತ ಸ್ಥಳದಲ್ಲಿ ಬಿಡುಗಡೆ
ಹೊನ್ನಾವರ ಅರಣ್ಯ ಇಲಾಖೆ ಅಧಿಕಾರಿಗಳು ಕೊನೆಗೂ ಕರಿ ಚಿರತೆಯನ್ನು ಸೆರೆ ಹಿಡಿದಿದ್ದು, ಇಲಾಖೆ ಅಧಿಕಾರಿಗಳು ಈ ಪ್ರದೇಶದಲ್ಲಿ ಮೊದಲ ಬಾರಿಗೆ ಈ ಬ್ಲಾಕ್ ಪ್ಯಾಂಥರ್ ಅನ್ನು ನೋಡಿದ್ದಾರೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಪ್ರವೇಶಿಸಲು ಇನ್ಮುಂದೆ ಎಲ್ಲಾ ವಾಹನಗಳು ಹಣ ಪಾವತಿಸಬೇಕು
ಕೇವಲ ಅಂತರರಾಜ್ಯ ಮಾತ್ರವಲ್ಲದೆ, ಈಗ ಇತರ ಜಿಲ್ಲೆಯ ವಾಹನಗಳು ಕೂಡ ಕೊಡಗಿನ ನಾಗರಹೊಳೆ ಅರಣ್ಯದ ದ್ವಾರಗಳಲ್ಲಿ ಪ್ರವೇಶ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಕಸದ ರಾಳಿ ಮತ್ತು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಎಲ್ಲೆಂಡರಲ್ಲಿ ಉಗಿಯುವುದಕ್ಕೆ ಕಡಿವಾಣ ಹಾಕಲು ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದೆ.

ಗಾಯಗೊಂಡಿದ್ದ ಸರಸ್ ಕೊಕ್ಕರೆಗೆ ಆಸರೆ; ಅರಣ್ಯ ಇಲಾಖೆ ಕರೆದೊಯ್ದಿದ್ದ ಕೊಕ್ಕರೆ ಮತ್ತು ಆರಿಫ್ ಮತ್ತೆ ಒಂದಾಗಬೇಕು ಎಂದ ವರುಣ್ ಗಾಂಧಿ
ಸರಸ್ ಕೊಕ್ಕರೆಯನ್ನು ಮೃಗಾಲಯದಿಂದ ಬಿಡುಗಡೆ ಮಾಡಲು ಮತ್ತು ಅದನ್ನು ಆರೀಫ್ ಖಾನ್ ಅವರೊಂದಿಗೆ ಮತ್ತೆ ಸೇರಿಸಲು ಬಿಜೆಪಿ ಸಂಸದ ವರುಣ್ ಗಾಂಧಿ ಅವರು ಬುಧವಾರ ಒತ್ತಾಯಿಸಿದರು. ಕಾನೂನುಗಳನ್ನು ಉಲ್ಲೇಖಿಸಿ ಅರಣ್ಯ ಇಲಾಖೆಯು ಕೊಕ್ಕರೆಯನ್ನು ಕೊಂಡೊಯ್ಯುವ ಸುಮಾರು ಒಂದು ವರ್ಷ ಆರಿಫ್ ಅವರು ಪಕ್ಷಿಗೆ ಶುಶ್ರೂಷೆ ಮಾಡಿದ್ದರು.

ಗಾಯಗೊಂಡು ಬಳಲುತ್ತಿದ್ದ ಕೊಕ್ಕರೆಯನ್ನು ರಕ್ಷಿಸಿ, ಆರೈಕೆ ಮಾಡಿದ ವ್ಯಕ್ತಿಗೆ ಅರಣ್ಯ ಇಲಾಖೆ ನೋಟಿಸ್
ಕೊಕ್ಕರೆ (ಸರಸ್ ಕ್ರೇನ್) ಅನ್ನು ರಕ್ಷಿಸಿ ಒಂದು ವರ್ಷ ಆರೈಕೆ ಮಾಡಿದ ಉತ್ತರ ಪ್ರದೇಶದ ವ್ಯಕ್ತಿಗೆ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿ, ನೋಟಿಸ್ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಡಿಕೇರಿ: ಕಾಡ್ಗಿಚ್ಚು ತಡೆಯಲು ಹೆಚ್ಚುವರಿ ಅರಣ್ಯ ವೀಕ್ಷಕರ ನೇಮಕ
ಒಣಹವೆಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬೆಂಕಿ ಅವಘಡಗಳು ಹೆಚ್ಚಾಗುತ್ತಿವೆ. ಹೀಗಾಗಿ ಈ ಬಾರಿಯ ಬರಗಾಲದಲ್ಲಿ ಅರಣ್ಯ ಪ್ರದೇಶಗಳನ್ನು ಸಂರಕ್ಷಿಸಲು ಜಿಲ್ಲೆಯಲ್ಲಿ ಅರಣ್ಯ ಇಲಾಖೆ ವಿವಿಧ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಅಪರೂಪದ ಪಕ್ಷಿಗಳನ್ನು ಸಾಕಿದ್ದಕ್ಕಾಗಿ ನಟ ದರ್ಶನ್, ಪತ್ನಿ ವಿಜಯ ಲಕ್ಷ್ಮಿ ವಿರುದ್ಧ ಪ್ರಕರಣ ದಾಖಲು
ವಲಸೆ ಹಕ್ಕಿಗಳಾದ ಬಾರ್ ಹೆಡೆಡ್ ಹೆಬ್ಬಾತುಗಳನ್ನು ಅಕ್ರಮವಾಗಿ ಸಾಕಿದ್ದಕ್ಕಾಗಿ ರಾಜ್ಯ ಅರಣ್ಯ ಇಲಾಖೆಯು ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ, ಅವರ ಪತ್ನಿ ವಿಜಯ ಲಕ್ಷ್ಮಿ ಮತ್ತು ಫಾರ್ಮ್‌ಹೌಸ್ ಮ್ಯಾನೇಜರ್ ನಾಗರಾಜ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ಪ್ರಕರಣ ದಾಖಲಿಸಿದೆ.

ನಾಗರಹೊಳೆ ಹುಲಿ ಸಂರಕ್ಷಿತಾರಣ್ಯದಿಂದ ಬಲವಂತದಿಂದ ತೆರವು: ಅರಣ್ಯಾಧಿಕಾರಿಗಳ ವಿರುದ್ಧ ಪ್ರತಿಭಟಿಸಿದ ಜೇನು ಕುರುಬರು
ನಾಗರಹೊಳೆ ಹುಲಿ ಸಂರಕ್ಷಿತಾರಣ್ಯದಿಂದ ಬಲವಂತದಿಂದ ತಮ್ಮನ್ನು ತೆರವುಗೊಳಿಸುತ್ತಿರುವ ಅರಣ್ಯ ಇಲಾಖೆ ವಿರುದ್ಧ ಜೇನು ಕುರುಬ ಜನಾಂಗದವರು ಭಾನುವಾರ ಪ್ರತಿಭಟನೆ ನಡೆಸಿದರು.

