flood

ಬೆಂಗಳೂರು ಮಳೆ: ಐಟಿ ಸಿಟಿ ಬಂಡವಾಳ ಬಹಿರಂಗಪಡಿಸಿದ ದಾಖಲೆ ಮಳೆ; ಜಲಾವೃತಗೊಂಡ ಮನೆಯಲ್ಲಿ ಸಿಲುಕಿ ವೃದ್ಧ ಸಾವು
ಸಿಲಿಕಾನ್ ಸಿಟಿ ಬೆಂಗಳೂರಿನ ಬಣ್ಣವನ್ನು ದಾಖಲೆಯ ಮಳೆ ಬಹಿರಂಗಪಡಿಸಿದೆ. ಪ್ರವಾಹದಿಂದ ಜಲಾವೃತಗೊಂಡಿರುವ ರಸ್ತೆಗಳಲ್ಲಿ ತಾಳ್ಮೆಯಿಂದ ಓಡಾಡುವಂತಾಗಿದೆ. ಇನ್ನು ಜಲಾವೃತಗೊಂಡಿದ್ದ ಮನೆಯಲ್ಲಿ ಸಿಲುಕಿದ್ದ 86 ವರ್ಷದ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆಂದು ವರದಿಯಾಗಿದೆ.

ಬೆಂಗಳೂರಿನಲ್ಲಿ ಭಾರಿ ಮಳೆ: ಚರಂಡಿಗಳನ್ನು ಅತಿಕ್ರಮಿಸಿರುವುದೇ ಮಾರತ್ತಹಳ್ಳಿ ಹೊರ ವರ್ತುಲ ರಸ್ತೆಯ ಪ್ರವಾಹಕ್ಕೆ ಕಾರಣ
ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರಿನ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಹರಿದು ಬಂದಿದೆ. ಹಲವು ಕೆರೆಗಳು ತುಂಬಿ ಹರಿದಿದ್ದು, ಮಹದೇವಪುರ ವಲಯದಾದ್ಯಂತ ಪ್ರವಾಹ ಉಂಟಾಗಿದೆ.

ರಾಜ್ಯಾದ್ಯಂತ ಮಳೆ ಮುಂದುವರಿಕೆ, ಹಾನಗಲ್ ನಲ್ಲಿ ಮಹಿಳೆ ಸಾವು, ಯಲ್ಲೋ ಅಲರ್ಟ್ ಘೋಷಣೆ
ಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಳೆ ಆರ್ಭಟ ಮುಂದುವರಿದಿದೆ. ಕಳೆದ ರಾತ್ರಿಯಿಡೀ ಸುರಿದ ಮಳೆಗೆ ಸಿಲಿಕಾನ್ ಸಿಟಿ ಮಂದಿ ಹೈರಾಣಾಗಿದ್ದಾರೆ.

ಭಾರೀ ಮಳೆ: ಕೆರೆ ಒಡೆದು ಹೆದ್ದಾರಿ, ರೈಲು ಹಳಿ ತುಂಬೆಲ್ಲ ಪ್ರವಾಹ; ನಲುಗಿಹೋದ ರಾಮನಗರ
ಬೆಂಗಳೂರು-ಮೈಸೂರು ಹೆದ್ದಾರಿ, ರಾಮನಗರ ಜಿಲ್ಲೆ ನಿನ್ನೆ ಸೋಮವಾರ ಅಕ್ಷರಶಃ ಭಾರೀ ಮಳೆ-ಪ್ರವಾಹಕ್ಕೆ ನಲುಗಿ ಹೋಗಿತ್ತು.

ಮಳೆಯಿಂದ ಹಾನಿಗೊಳಗಾದ ಮನೆಗಳ ದುರಸ್ತಿಗೆ ತಕ್ಷಣ 10 ಸಾವಿರ ರೂ. ಪರಿಹಾರ: ಸಿಎಂ ಬೊಮ್ಮಾಯಿ
ರಾಜ್ಯದೆಲ್ಲೆಡೆ ಮತ್ತೆ ಪ್ರವಾಹ ರೀತಿಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಹಲವು ಕಡೆಗಳಲ್ಲಿ ಅವಾಂತರಗಳು ಆಗಿವೆ. ಈ ಬಗ್ಗೆ 16 ಜಿಲ್ಲೆಗಳಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಸ್ಥಿತಿಯನ್ನು ಸರಿಪಡಿಸಲು ಸೂಚನೆ ನೀಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Photos: ಹಿಮಾಚಲ ಪ್ರದೇಶದಲ್ಲಿ ನಿಲ್ಲದ ಮಳೆ; ಹಲವೆಡೆ ಭೂಕುಸಿತ, ಈವರೆಗೂ ಕನಿಷ್ಠ 30 ಜನರು ಸಾವು
ಹಿಮಾಚಲ ಪ್ರದೇಶದಲ್ಲಿ ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಮಂಗಳವಾರದ ಹೊತ್ತಿಗೆ ಹಿಮಾಚಲ ಪ್ರದೇಶದಾದ್ಯಂತ ಕನಿಷ್ಠ 30 ಜನರು ಸಾವಿಗೀಡಾಗಿದ್ದು, 36 ಭೂಕುಸಿತಗಳು ವರದಿಯಾಗಿವೆ. ಕಾಂಗ್ರಾ ಜಿಲ್ಲೆಯಲ್ಲಿ ಸುಮಾರು 500 ಜನರನ್ನು ಸ್ಥಳಾಂತರಿಸಲಾಗಿದೆ.

ಹಿಮಾಚಲ ಪ್ರದೇಶ: ಪ್ರವಾಹ, ಭೂ ಕುಸಿತದಲ್ಲಿ ಆರು ಜನರ ಸಾವು, 14 ಮಂದಿ ಕಣ್ಮರೆ
ಹಿಮಾಚಲ ಪ್ರದೇಶದ ವಿವಿಧೆಡೆ ಧಾರಾಕಾರ ಮಳೆಯಾಗುತ್ತಿದ್ದು, ಪ್ರವಾಹ ಮತ್ತು ಭೂ ಕುಸಿತದಲ್ಲಿ ಆರು ಜನರು ಸಾವನ್ನಪ್ಪಿದ್ದು, 13 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಚಿಕ್ಕಮಗಳೂರು: ಕಾರು ಸಮೇತ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಇಬ್ಬರನ್ನು ರಕ್ಷಿಸಿದ ಸ್ಥಳೀಯರು!
ಚಿಕ್ಕಮಗಳೂರು ಜಿಲ್ಲೆಯ ಅಯ್ಯನಕೆರೆ ಕೆರೆಯಲ್ಲಿ ಕಾರೊಂದು ಕೊಚ್ಚಿಹೋಗಿದ್ದು, ಸ್ಥಳೀಯರ ಸಮಯ ಪ್ರಜ್ಞೆಯಿಂದಾಗಿ ಕಾರಿನ ಕಿಟಕಿ ಗಾಜು ಒಡೆದು ಇಬ್ಬರನ್ನು ರಕ್ಷಣೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಮನೆಗಳು, ರಸ್ತೆಗಳು ಜಲಾವೃತ; ಜನರಿಗೆ ಸಂಕಷ್ಟ
ರಾಜ್ಯದಾದ್ಯಂತ ಮಳೆ ಮುಂದುವರಿದಿದ್ದು, ಬೆಂಗಳೂರಿನಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ಭಾರಿ ಮಳೆಯಿಂದಾಗಿ ಕೆಲ ಮನೆಗಳಿಗೆ ನೀರು ನುಗ್ಗಿದ್ದರೆ, ಹಲವು ರಸ್ತೆಗಳು ಜಲಾವೃತವಾಗಿವೆ. ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಯಿತು.

