flood relief

ಕಂಬಳಿ ಕೇಳಿದರೆ ಕರ್ಚಿಫ್ ನೀಡಿದ್ದಾರೆ: ಮಧ್ಯಂತರ ಪರಿಹಾರ ಬಿಡುಗಡೆ ಕುರಿತು ಪ್ರಕಾಶ್ ರಾಜ್ ವ್ಯಂಗ್ಯ
ರಾಜ್ಯದಲ್ಲಿ ಉಂಟಾಗಿರುವ ನೆರೆ ಪರಿಹಾರಕ್ಕಾಗಿ ಕೇವಲ ರೂ.1,200 ಕೋಟಿ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ವ್ಯಂಗ್ಯವಾಡಿದ್ದಾರೆ.

ಪ್ರವಾಹದಿಂದ ಒಟ್ಟಾರೆ ರೂ.35,000 ಕೋಟಿ ನಷ್ಟವಾಗಿದೆ, ಕೇಂದ್ರದ ಬಳಿ ಮತ್ತಷ್ಟು ಪರಿಹಾರ ಕೇಳುತ್ತೇವೆ: ಸಿಎಂ
ಪ್ರವಾಹದಿಂದ ರಾಜ್ಯದೆಲ್ಲೆಡೆ ಒಟ್ಟಾರೆಯಾಗಿ ರೂ.35,000 ಕೋಟಿ ನಷ್ಟವುಂಟಾಗಿದ್ದು, ಕೇಂದ್ರ ಸರ್ಕಾರದ ಬಳಿ ಮತ್ತಷ್ಟು ಪರಿಹಾರ ಕೇಳಲಾಗುತ್ತೆದ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ಹೇಳಿದ್ದಾರೆ.

ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಪರಿಹಾರ ಕೊಟ್ಟಿದ್ದಾರೆ: ಮಾಜಿ ಸಿಎಂ ಸಿದ್ದರಾಮಯ್ಯ
ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಕೇಂದ್ರ ಸರ್ಕಾರ ಪರಿಹಾರ ನೀಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವ ಮೂಲಕ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಪರಿಹಾರ ಪಡೆಯೋಕೆ ಜನರೇ ಬರದಿದ್ದರೆ ನಾವೇನು ಮಾಡೋಣ: ಸಚಿವ ಮಾಧುಸ್ವಾಮಿ ಪ್ರಶ್ನೆ
ನೆರೆಪರಿಹಾರ ಪಡೆಯಲು ಸಂತ್ರಸ್ಥರೆ ಮುಂದೆ ಬರುತ್ತಿಲ್ಲ. ಜನರೇ ಮುಂದೆ ಬರದಿದ್ದರೆ ನಾವೇನು ಮಾಡುವುದಕ್ಕೆ ಆಗುತ್ತದೆ ಎಂದು ಸಚಿವ ಮಾಧುಸ್ವಾಮಿ ಸಂತ್ರಸ್ತರ ಮೇಲೆ ಗೂಬೆ ಕೂರಿಸಿದ್ದಾರೆ.

ನೆರೆ ಪರಿಹಾರ ವಿಳಂಬ: ಅನಂತ್ ಕುಮಾರ್ ಪುತ್ರಿಯರ ಹೇಳಿಕೆಗೆ ಬಿಜೆಪಿ ನಾಯಕರು ದಿಗ್ಭ್ರಾಂತ!
ರಾಜ್ಯ ರಾಜಕೀಯ ವಿಚಾರದಲ್ಲಿ ಎಂದಿಗೂ ಮಧ್ಯೆಪ್ರವೇಶಿಸದೇ ಇದ್ದ ದಿವಂಗತ ಬಿಜೆಪಿ ಹಿರಿಯ ನಾಯಕ ಅನಂತ್ ಕುಮಾರ್ ಅವರ ಪುತ್ರಿಯರು, ರಾಜ್ಯ ನೆರೆ ಪರಿಹಾರ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ದನಿ ಎತ್ತಿರುವುದು ಇದೀಗ ಬಿಜೆಪಿ ನಾಯಕರಲ್ಲಿ ದಿಗ್ಭ್ರಾಂತ ಮೂಡಿಸಿದೆ.

ನೆರೆ ಪರಿಹಾರ ಕುರಿತು ಟೀಕೆ: ಶಾಸಕ ಯತ್ನಾಳ್'ಗೆ ಬಿಜೆಪಿ ಶೋಕಾಸ್ ನೋಟಿಸ್
ನೆರೆ ಪರಿಹಾರ ವಿಳಂಬ ನೀತಿ ಕುರಿತಂತೆ ಸ್ವಪಕ್ಷದ ವಿರುದ್ಧವೇ ಟೀಕೆ ಮಾಡಿದ್ದ ಹಿನ್ನಲೆಯಲ್ಲಿ ವಿಜಯಪುರ ನಗರ ಕ್ಷೇತ್ರದ ಶಾಸಕ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ಶುಕ್ರವಾರ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.

ನೆರೆ ಪರಿಹಾರ ಒತ್ತಾಯಿಸಿ ಸಿಎಂಗೆ ಘೇರಾವ್ ಯತ್ನ: ರೈತರ ಬಂಧನ
ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಘೇರಾವ್ ಹಾಕಲು ಮುಂದಾಗಿದ್ದ ಹಲವು ರೈತರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ನಂತರ ಬಿಡುಗಡೆ ಮಾಡಿದ್ದಾರೆ.

ಕೊನೆಗೂ ನೆರೆ ಪರಿಹಾರ ಬಿಡುಗಡೆ ಮಾಡಿದ ಕೇಂದ್ರ: ಬಿಎಸ್'ವೈ ಸರ್ಕಾರ ನಿರಾಳ
ಕೇಂದ್ರ ಸರ್ಕಾರದಿಂದ ಪ್ರವಾಹ ಪರಿಹಾರ ಬಾರದೆ ಇಕ್ಕಟ್ಟು ಅಧಿವೇಶನ ಎದುರಿಸುವ ಚಿಂತೆಯಲ್ಲಿದ್ದ ರಾಜ್ಯ ಸರ್ಕಾರಕ್ಕೆ ಕೊನೆಗೂ ಕೊಂಚ ನಿರಾಳ ಸಿಕ್ಕಂತಾಗಿದೆ.

ಕೇಂದ್ರ, ರಾಜ್ಯ ಸರ್ಕಾರಗಳ ಧೋರಣೆ ಖಂಡಿಸಿ ಅ.10ಕ್ಕೆ ವಿಧಾನಸೌಧ ಮುತ್ತಿಗೆ
ಪ್ರವಾಹ ಸಂತ್ರಸ್ತ ನಿರಾಶ್ರಿತರ ಕುರಿತು ಉದಾಸೀನ ತೋರುತ್ತಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಧೋರಣೆಯನ್ನು ಖಂಡಿಸಿ ಅ.10 ರಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಿರ್ಧರಿಸಿದೆ.

