Flights

ಕೋಲ್ಕತ್ತಾಗೆ 6 ನಗರಗಳಿಂದ ಜುಲೈ 6-19 ವರೆಗೆ ವಿಮಾನ ಸಂಚಾರ ರದ್ದು
ಕೊರೋನಾ ವೈರಸ್ ದೇಶಾದ್ಯಂತ ವಿವಿಧ ನಗರಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೋಲ್ಕತ್ತಾಗೆ 6 ನಗರಗಳಿಂದ ಜು.6-19 ವರೆಗೆ ಪ್ರಯಾಣಿಕ ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ಆಂಧ್ರ, ಪಶ್ಚಿಮ ಬಂಗಾಳ ಹೊರತುಪಡಿಸಿ ದೇಶಾದ್ಯಂತ ಸೋಮವಾರದಿಂದ ವಿಮಾನ ಸೇವೆ ಪುನರ್ ಆರಂಭ
ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ ಹೊರತುಪಡಿಸಿದಂತೆ ಸೋಮವಾರದಿಂದ ದೇಶಾದ್ಯಂತ ವಿಮಾನ ಸೇವೆ ಪುನರ್ ಆರಂಭಗೊಳ್ಳಲಿದೆ. ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳ ಕ್ರಮವಾಗಿ ಮೇ 26, ಮತ್ತು ಮೇ 28ರವರೆಗೂ ವಿಮಾನ ಸೇವೆ ಪುನರ್ ಆರಂಭವನ್ನು ಮುಂದೂಡಲು ನಿರ್ಧರಿಸಿವೆ.

ಮೇ.03 ರಂದು ವಿಮಾನ, ರೈಲು ಸೇವೆ ಪ್ರಾರಂಭ ಬಹುತೇಕ ಅನುಮಾನ!
ಕೊರೋನಾ ವೈರಸ್ ತಡೆಗಟ್ಟಲು ವಿಧಿಸಲಾಗಿರುವ 40 ದಿನಗಳ ಎರಡನೇ ಸುತ್ತಿನ ಲಾಕ್ ಡೌನ್ ಮೇ.03 ಕ್ಕೆ ಮುಕ್ತಾಯಗೊಳ್ಳಲಿದೆ. ಆದರೆ ರೈಲು ಹಾಗೂ ವಿಮಾನ ಸೇವೆಗಳು ಪ್ರಾರಂಭವಾಗುವುದು ಬಹುತೇಕ ಅನುಮಾನಗೊಂಡಿದೆ

ಜಾಗತಿಕ ಔಷಧ ಸರಬರಾಜಿಗೆ ಚೀನಾದಿಂದ ಹೆಚ್ಚುವರಿ ವಿಮಾನ ಸೇವೆ
ಮಹಾಮಾರಿ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು ಜಾಗತಿಕವಾಗಿ ಔಷಧ ಸೇರಿದಂತೆ ವೈದ್ಯಕೀಯ ಸಾಧನ, ಸಲಕರಣೆಗಳು ಲಭ್ಯವಾಗುವಂತಾಗಲು ಚೀನಾ ತನ್ನ ಅಂತಾರಾಷ್ಟ್ರೀಯ ವೈಮಾನಿಕ ಸೇವೆಯನ್ನು ಹೆಚ್ಚಿಸಿದೆ.

ಬೆಂಗಳೂರಿನಿಂದ ಆಡಿಸ್ ಅಬಾಬಾ ಸೇರಿ 6 ನಗರಗಳಿಗೆ ಹೊಸ ವಿಮಾನ ಸೌಲಭ್ಯ ಶೀಘ್ರ
ಚಳಿಗಾಲದ ಋತು ಪ್ರಾರಂಭವಾಗುತ್ತಿದ್ದು ಪ್ರವಾಸ ಪ್ರಿಯರಿಗಾಗಿ ಇಲ್ಲೊಂದು ಸಿಹಿಸುದ್ದಿ ಇದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ) ನಿಂದ ದೇಶದ ಐದು ಹೊಸ ನಗರಗಳಿಗೆ ಹಾಗೂ ಒಂದು ಅಂತರಾಷ್ಟ್ರೀಯ ನಗರಕ್ಕೆ ನೇರ ವಿಮಾನಯಾನ ಸೇವೆ ಶೀಘ್ರದಲ್ಲಿ ಪ್ರಾರಂಭಗೊಳ್ಳಲಿದೆ.

ಮುಂಬೈಯಲ್ಲಿ ಮಹಾಮಳೆ: ಬೆಂಗಳೂರತ್ತ ಮುಖ ಮಾಡಿದ ವಿಮಾನಗಳು
ವಾಣಿಜ್ಯ ನಗರಿ ಮುಂಬೈಯಲ್ಲಿ ಧಾರಾಕಾರ ಮಳೆಯಿಂದಾಗಿ ವಿಮಾನಗಳ ಹಾರಾಟಕ್ಕೆ ...

ಜೆಟ್ ಏರ್ವೇಸ್ ನ ಎಲ್ಲಾ ವಿಮಾನಗಳು ತಾತ್ಕಾಲಿಕ ಸ್ಥಗಿತ?!
ಸಾಲದ ಸುಳಿಯಲ್ಲಿ ಸಿಲುಕಿರುವ ಜೆಟ್ ಏರ್ವೇಸ್ ನ ಎಲ್ಲಾ ವಿಮಾನಗಳೂ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಬೆಂಗಳೂರಿನಿಂದ ಕಣ್ಣೂರಿಗೆ ವಾರಕ್ಕೆ 6 ವಿಮಾನಗಳ ಹಾರಾಟ
ನೂತನವಾಗಿ ನಿರ್ಮಾಣಗೊಂಡಿರುವ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಗೊಂಡಿದ್ದು, ಬೆಂಗಳೂರಿನಿಂದ ಕಣ್ಣೂರಿಗೆ ವಾರಕ್ಕೆ ಒಟ್ಟು 6 ವಿಮಾನಗಳು ಹಾರಾಟ ನಡೆಸಲಿವೆ...

42 ವಿಮಾನಗಳ ಸಂಚಾರ ರದ್ದುಗೊಳಿಸಿದ ಇಂಡಿಗೋ
ದೇಶಿ ವಿಮಾನಯಾನ ಸಂಸ್ಥೆ ಏರ್ ಇಂಡಿಗೋ 42 ವಿಮಾನಗಳ ಸಂಚಾರವನ್ನು ರದ್ದುಗೊಳಿಸಿದೆ. ಇಂಜಿನ್ ನಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ.

