Flight

ಎಂಜಿನ್ ನಲ್ಲಿ ಬೆಂಕಿ: ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಅಬುಧಾಬಿಗೆ ವಾಪಸ್, ಪ್ರಯಾಣಿಕರು ಸುರಕ್ಷಿತ
ಅಬುಧಾಬಿಯಿಂದ ಕೇರಳದ ಕಲ್ಲಿಕೋಟೆಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಎಂಜಿನ್ ನಲ್ಲಿ ಬೆಂಕಿ ಜ್ವಾಲೆ ಕಾಣಿಸಿಕೊಂಡು ಮತ್ತೆ ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಇಳಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ತೇಜಸ್ವಿ ಸೂರ್ಯ ಎಲ್ಲಾ ಕಡೆಯೂ ತನ್ನ ಮಕ್ಕಳಾಟ ಆಡಲು ಹೋಗುವುದೇಕೆ?: ಕಾಂಗ್ರೆಸ್ ಟೀಕೆ
ಆಡೋ ಮಕ್ಕಳಿಗೆ ಯಜಮಾನಿಕೆ ಕೊಟ್ರೆ ಏನಾಗಲಿದೆ ಎಂಬುದಕ್ಕೆ ತೇಜಸ್ವಿ ಸೂರ್ಯ ನಿದರ್ಶನ ಎಂದು ಇಂಡಿಗೋ ವಿಮಾನದ ತುರ್ತು ನಿರ್ಗಮನದ ಬಾಗಿಲು ತೆರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಟೀಕೆ ಬುಧವಾರ ಟೀಕೆ ಮಾಡಿದೆ

ಪ್ರಯಾಣಿಕರ ಸೇವೆಗೆ ಸಿದ್ದವಾದ ಕೆಐಎ ಟರ್ಮಿನಲ್ 2: ಜನವರಿ 15ಕ್ಕೆ ಮೊದಲ ವಿಮಾನ ಕಲಬುರಗಿಗೆ!
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಣವಾಗಿರುವ ಟರ್ಮಿನಲ್ 2 ಪ್ರಯಾಣಿಕರ ಸೇವೆಗೆ ಸಿದ್ದವಾಗಿದ್ದು, ಇದರ ಮೊದಲ ವಿಮಾನ ಜನವರಿ 15ಕ್ಕೆ ಕಲಬುರಗಿಗೆ ಹಾರಾಟ ನಡೆಸಲಿದೆ.

ದೆಹಲಿ ಸೇರಿ ಉತ್ತರ ಭಾರತದಲ್ಲಿ ದಟ್ಟ ಮಂಜು, ಕತ್ತಲೆ ವಾತಾವರಣ: ರೈಲು, ವಿಮಾನ ಸೇವೆಗಳಲ್ಲಿ ವ್ಯತ್ಯಯ
ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದಾದ್ಯಂತ ಮಂಗಳವಾರ ನಸುಕಿನ ಜಾವದಿಂದಲೇ ವ್ಯಾಪಕ ಶೀತಗಾಳಿ, ಚಳಿಯಿದೆ. ದೆಹಲಿಯ ಸಫ್ದರ್ಜಂಗ್ ನಲ್ಲಿ ಅತ್ಯಂತ ಕನಿಷ್ಠ 6.4 ಡಿಗ್ರಿ ಸೆಲ್ಸಿಯಸ್ ಇಂದು ಮುಂಜಾನೆ ದಾಖಲಾಗಿದೆ. ಪಲಮ್ ನಲ್ಲಿ ಇಂದು ಬೆಳಗ್ಗೆ 8.30ಕ್ಕೆ 7.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಮಾಸ್ಕೋದಿಂದ ಗೋವಾಕ್ಕೆ ಬರುತ್ತಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ: ಗುಜರಾತ್‌ನಲ್ಲಿ ತುರ್ತು ಭೂಸ್ಪರ್ಶ
ಮಾಸ್ಕೋದಿಂದ ಗೋವಾಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಇ-ಮೇಲ್ ಬಂದ ಕಾರಣ ಗುಜರಾತ್‌ನ ಜಾಮ್‌ನಗರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಭೀಕರ ಚಳಿಗೆ ಉತ್ತರ ಭಾರತ ತತ್ತರ: ರೈಲು, ವಿಮಾನ ಹಾರಾಟದಲ್ಲಿ ವ್ಯತ್ಯಯ, ದೆಹಲಿಯಲ್ಲಿ ಜ.15ರವರೆಗೆ ಶಾಲೆಗಳಿಗೆ ರಜೆ ಘೋಷಣೆ
ಕಳೆದ 15 ದಿನಗಳಿಂದ ಭೀಕರ ಚಳಿಗೆ ಉತ್ತರ ಭಾರತ ತತ್ತರಗೊಂಡಿದ್ದು, ಭಾರಿ ಚಳಿ ಹಾಗೂ ಮಂಜು ಮುಸುಕಿದ ವಾತಾವರಣವು ಸದ್ದಿಲ್ಲದೆ ನೂರಾರು ಜನರನ್ನು ಬಲಿಪಡೆದುಕೊಂಡಿದೆ. ಮಂಜು ಮುಸುಕಿದ ವಾತಾವರಣ ಹಿನ್ನೆಲೆಯಲ್ಲಿ ಹಲವೆಡೆ ರೈಲು ಸಂಚಾರ ಹಾಗೂ ವಿಮಾನಗಳ ಹಾರಾಟದಲ್ಲಿ ವ್ಯತ್ಯಯಗಳು ಕಂಡು ಬಂದಿದೆ.

ಹುಬ್ಬಳ್ಳಿ-ದೆಹಲಿ ನಡುವೆ ನೇರ ವಿಮಾನ ಸೇವೆ ಆರಂಭ
ಬಹುದಿನಗಳ ಬೇಡಿಕೆಯಾದ ಹುಬ್ಬಳ್ಳಿಯಿಂದ ದೆಹಲಿಗೆ ಇಂಡಿಗೋ ವಿಮಾನಯಾನ ಸೇವೆ ಸೋಮವಾರದಿಂದ ಆರಂಭವಾಗಿದ್ದು, ಇನ್ನು ಮುಂದೆ ಹುಬ್ಬಳ್ಳಿ ಹಾಗೂ ನೆರೆಯ ಜಿಲ್ಲೆಗಳ ಜನರು ನೇರವಾಗಿ ದೆಹಲಿಗೆ ಹಾರಬಹುದಾಗಿದೆ.

ಮ್ಯಾನ್ಮಾರ್: ವಿಮಾನಕ್ಕೆ ಹಾರಿದ ಬುಲೆಟ್, ಪ್ರಯಾಣಿಕನಿಗೆ ಗಾಯ
ನೆಲದಿಂದ ಹಾರಿಸಿದ ಬುಲೆಟ್ ಗಾಳಿಯ ಮಧ್ಯದಲ್ಲಿ ವಿಮಾನಕ್ಕೆ ಬಡಿದಿದ್ದು ವಿಮಾನ ಪ್ರಯಾಣಿಕರೊಬ್ಬರು ಗಾಯಗೊಂಡಿರೋ ಘಟನೆ ನಡೆದಿದೆ.

ಮಂಗಳೂರು ವಿಮಾನ ನಿಲ್ದಾಣ: ಇಬ್ಬರು ವ್ಯಕ್ತಿಗಳ ಚಾಟ್ ನಿಂದ ವಿಮಾನ ಟೇಕ್ ಆಫ್ ಗೆ ತಡೆ!
ಓರ್ವ ಪುರುಷ ಹಾಗೂ ಮಹಿಳೆ ಇಬ್ಬರ ನಡುವಿನ ವಾಟ್ಸ್ ಆಪ್ ಚಾಟ್ ನ ಪರಿಣಾಮ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಬೇಕಿದ್ದ ವಿಮಾನವನ್ನು ತಡೆಯಲಾಯಿತು.

