flex

ಅನಧಿಕೃತ ಬ್ಯಾನರ್-ಫ್ಲೆಕ್ಸ್'ಗಳಿಗೆ BBMP ಬ್ರೇಕ್: ಪರಿಷ್ಕೃತ ಮಾರ್ಗಸೂಚಿ ಪ್ರಕಟ
ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಿದ್ದಾರೆ.

ನಗರದ ಅನಧಿಕೃತ ಫ್ಲೆಕ್ಸ್-ಬ್ಯಾನರ್ ತೆರವುಗೊಳಿಸಿ, ಆದೇಶ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಿ: ಡಿ.ಕೆ ಶಿವಕುಮಾರ್
ಮಾರ್ಚ್ 17 ರಂದು ಸೋಮವಾರ ಅರಮನೆ ಮೈದಾನದಲ್ಲಿ (ಸೋಮವಾರ) ಯುವ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ.

ದಿನೇಶ್ ಗುಂಡೂರಾವ್, ಹ್ಯಾರಿಸ್ ಬೆಂಬಲಿಗರಿಂದ ಅನಧಿಕೃತ ಫ್ಲೆಕ್ಸ್-ಬ್ಯಾನರ್ ಅಳವಡಿಕೆ: ಕ್ರಮಕ್ಕೆ JDS ಆಗ್ರಹ
ರಾಜಕೀಯ ಮುಖಂಡರ ಬೆಂಬಲಿಗರು ಜಾಹೀರಾತು ಫಲಕ, ಕಟೌಟ್, ಬ್ಯಾನರ್ ಹಾಕುತ್ತಿದ್ದಾರೆ ಎಂದು ಆರೋಪಿಸಿ ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ನಾಗೇಶ್ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ.

ಕಾಂಗ್ರೆಸ್'ನಿಂದಲೂ ನಿಯಮ ಉಲ್ಲಂಘನೆ: ನಗರದಲ್ಲಿ ರಾರಾಜಿಸುತ್ತಿವೆ ಅನಧಿಕೃತ ಫ್ಲೆಕ್ಸ್, ಬ್ಯಾನರ್'ಗಳು!
ಅನಧಿಕೃತ ಫ್ಲೆಕ್ಸ್, ಬ್ಯಾನರ್ ಕುರಿತು ಹೈಕೋರ್ಟ್ ನಿರ್ದೇಶನ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿಯಮಗಳ ನಡುವೆಯೂ ರಾಜಕೀಯ ನಾಯಕ ನಿರ್ಲಕ್ಷ್ಯಯುತ ನಡೆಗಳು ಎಂದಿನಂತೆ ಮುಂದುವರೆದಿವೆ.

ನಗರದಲ್ಲಿ ರಾರಾಜಿಸುತ್ತಿರುವ ಫ್ಲೆಕ್ಸ್‌ಗಳು: ಹೈಕೋರ್ಟ್ ಆದೇಶಕ್ಕೆ ಕ್ಯಾರೆ ಎನ್ನದ ರಾಜಕಾರಣಿಗಳ ಬೆಂಬಲಿಗರು!
ಫ್ಲೆಕ್ಸ್‌ಗಳು, ಬ್ಯಾನರ್‌ಗಳು ಮತ್ತು ಬಂಟಿಂಗ್ಸ್‌ಗಳ ವಿರುದ್ಧ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದ್ದು, ಈ ಆದೇಶದ ಹೊರತಾಗಿಯೂ ರಾಜಕೀಯ ಮುಖಂಡರ ಬೆಂಬಲಿಗರು ಸಾರ್ವಜನಿಕರಿಗೆ ಕ್ರಿಸ್ಮಸ್, ಹೊಸ ವರ್ಷ ಮತ್ತು ಮುಂಬರುವ ಸಂಕ್ರಾಂತಿಯ ಶುಭಾಶಯಗಳನ್ನು ತಿಳಿಸುವ ಮೂಲಕ ನಗರದಾದ್ಯಂತ ಪೋಸ್ಟರ್‌ಗಳನ್ನು ಹಾಕಿದ್ದಾರೆ.

ತುಮಕೂರು: ಪೋಸ್ಟರ್ ನಲ್ಲಿ ಮಹಾತ್ಮಾ ಗಾಂಧಿ- ನಾಥೂರಾಮ್ ಗೋಡ್ಸೆ ಫೋಟೋ; ಉದ್ವಿಗ್ನ ಸ್ಥಿತಿಯನ್ನು ತಪ್ಪಿಸಿದ ಪೊಲೀಸರು
ವೀರ ಸಾವರ್ಕರ್ ಫ್ಲೆಕ್ಸ್ ವಿವಾದ ತುಮಕೂರಿನಲ್ಲಿ ಮಹಾತ್ಮಾ ಗಾಂಧಿ ಮತ್ತು ಅವರನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆಯ ಭಾವಚಿತ್ರವಿರುವ ಫ್ಲೆಕ್ಸ್ ನ್ನು ಹಾಕಿ ವಿವಾದಕ್ಕೆ ಎಡೆಮಾಡಿದೆ. ಕೊನೆಗೆ ಪೊಲೀಸರು ಮಧ್ಯೆ ಪ್ರವೇಶಿಸಿ ಫ್ಲೆಕ್ಸ್ ತೆಗೆಸಿ ಆಗಬಹುದಾಗಿದ್ದ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ವಿಧಾನಸೌಧ ಬಳಿ ಸಿದ್ದರಾಮೋತ್ಸವ ಫ್ಲೆಕ್ಸ್ ಹಾಕಿದ್ದಕ್ಕೆ ಇಬ್ಬರು ನಾಯಕರ ವಿರುದ್ಧ ಕೇಸು ಬಿಜೆಪಿ ಕುತಂತ್ರ: ಕಾಂಗ್ರೆಸ್ ಆರೋಪ
ಸರ್ಕಾರದ ನಿರ್ದೇಶನ ಪ್ರಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿರೋಧ ಪಕ್ಷದವರಿಗೆ ಸಂಬಂಧಿಸಿದ ಫ್ಲೆಕ್ಸ್, ಬ್ಯಾನರ್ ಗಳನ್ನು ಮಾತ್ರ ತೆಗೆದುಹಾಕುತ್ತದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ರಾಜಕೀಯ ನೇತಾರರಿಂದ ಪದೇ ಪದೇ ನಿಯಮ ಉಲ್ಲಂಘನೆ: ಒಂದೇ ಒಂದು ದೂರು ದಾಖಲಿಸದ ಬಿಬಿಎಂಪಿ!
ಹೈಕೋರ್ಟ್ ಮತ್ತು ಬಿಬಿಎಂಪಿ ಆದೇಶಗಳನ್ನು ಒಂದು ತಿಂಗಳಲ್ಲಿ ಮೂರನೇ ಬಾರಿ ಫ್ಲೆಕ್ಸ್ ನಿಯಮ ಉಲ್ಲಂಘಿಸಲಾಗಿದೆ. ಆದರೆ ಬಿಬಿಎಂಪಿ ಇನ್ನೂ ಒಂದೇ ಒಂದು ಪ್ರಕರಣ ದಾಖಲಿಸಿಲ್ಲ.

ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಮಿತಿ ಮೀರಿದ ಪ್ಲಾಸ್ಟಿಕ್ ಬಳಕೆ!
ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ವಿಶೇಷವಾಗಿ ಹೊಸಕೋಟೆ ಮತ್ತಿತರ ಕಡೆಗಳಲ್ಲಿ ಕಾರ್ಪೋರೇಟರ್, ಮತ್ತು ರಾಜಕಾರಣಿಗಳ ಜಾಹಿರಾತು ವಿರುದ್ದ ಈಗಲೂ ಹೋರಾಡುವಂತಾಗಿದೆ.

