fire

ಮಂಗಳೂರು ಬ್ಯಾಂಕ್ ದರೋಡೆ ಪ್ರಕರಣ: ಸ್ಥಳ ಮಹಜರು ವೇಳೆ ಪರಾರಿಗೆ ಯತ್ನ, ಆರೋಪಿ ಕಾಲಿಗೆ ಗುಂಡೇಟು
ತಮಿಳುನಾಡಿನಲ್ಲಿ ಬಂಧಿಸಲ್ಪಟ್ಟ ಆರೋಪಿಗಳನ್ನು ಮಂಗಳೂರಿಗೆ ಕರೆತಂದು ಸ್ಥಳ ಮಹಜರು ನಡೆಸುವುದಕ್ಕಾಗಿ ಉಳ್ಳಾಲಕ್ಕೆ ಕರೆದೊಯ್ಯಲಾಗಿತ್ತು.

ದೆಹಲಿ: ಬೆಂಕಿ ಹಚ್ಚಿಕೊಂಡು ಸಂಸತ್ ಭವನದೆಡೆಗೆ ಧಾವಿಸಿದ ವ್ಯಕ್ತಿ!, ಶೇ.95 ರಷ್ಟು ಗಾಯ!; ವಿಡಿಯೋ
ಕೂಡಲೇ ಎಚ್ಚೆತ್ತ ರೈಲ್ವೆ ಪೊಲೀಸ್, ಸ್ಥಳೀಯರು ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿ ಹಚ್ಚಿಕೊಂಡಿದ್ದ ವ್ಯಕ್ತಿಯನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಶೇ.95 ರಷ್ಟು ದೇಹ ಸುಟ್ಟುಹೋಗಿದೆ.

ಚಿತ್ರದುರ್ಗದ ಗುಯಿಲಾಳ್ ಬಳಿ ಬೆಂಕಿಗೆ ಹೊತ್ತಿ ಉರಿದ ಖಾಸಗಿ ಬಸ್: ಪ್ರಯಾಣಿಕರು ಪಾರು
ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಇಂದು ಬೆಳಗ್ಗೆ ದುರ್ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಟಯರ್ ಸ್ಫೋಟಗೊಂಡ ಕೂಡಲೇ ಟೋಲ್ ಬಳಿ ಚಲಿಸುತ್ತಿದ್ದ ಬಸ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ.

ಮಧ್ಯಪ್ರದೇಶದಲ್ಲಿ ಭೀಕರ ಅಗ್ನಿ ಅವಘಡ: ಒಂದೇ ಕುಟುಂಬದ ನಾಲ್ವರು ಸಜೀವ ದಹನ
ನಯಾಪುರ ಪ್ರದೇಶದ ಮೂರು ಅಂತಸ್ತಿನ ಮನೆಯಲ್ಲಿ ಇಂದು ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿದ್ದು, ಸ್ವಲ್ಪ ಸಮಯದೊಳಗೆ ಬೆಂಕಿಯ ಕೆನ್ನಾಲಿಗೆ ಇಡೀ ಕಟ್ಟಡವನ್ನು ಆವರಿಸಿದೆ. ಬೆಂಕಿ ಹೊತ್ತಿಕೊಂಡಿದ್ದರಿಂದ ಮನೆಯಲ್ಲಿ ಇರಿಸಲಾಗಿದ್ದ ಸಿಲಿಂಡರ್ ಕೂಡ ಸ್ಫೋಟಗೊಂಡಿದೆ. ಸ್ಫೋಟದ ಸದ್ದು ಇಡೀ ಪ್ರದೇಶಕ್ಕೆ ಪ್ರತಿಧ್ವನಿಸಿದೆ.

ಜಮ್ಮು-ಕಾಶ್ಮೀರ: ಕಥುವಾದಲ್ಲಿ ಮನೆಯೊಂದರಲ್ಲಿ ಬೆಂಕಿ; ಉಸಿರುಗಟ್ಟಿ ಮಾಜಿ ಡಿಎಸ್ಪಿ ಸೇರಿ ಆರು ಮಂದಿ ಸಾವು
ಕಥುವಾ ಜಿಲ್ಲೆಯ ಶಿವನಗರ ಪ್ರದೇಶದಲ್ಲಿ ಮನೆಯೊಂದರಲ್ಲಿ ಇದ್ದವರು ಮಲಗಿದ್ದಾಗ ದಟ್ಟ ಹೊಗೆ ತುಂಬಿಕೊಂಡು, ಮನೆಯೊಳಗೆ ಬೆಂಕಿ ಕಾಣಿಸಿಕೊಂಡಿದೆ.

ಹುಬ್ಬಳ್ಳಿ: ಪೊಲೀಸರ ಮೇಲೆ ಹಲ್ಲೆಗೆ ಯತ್ನ; ಇಬ್ಬರು ದರೋಡೆಕೋರರ ಕಾಲಿಗೆ ಗುಂಡೇಟು
ಮೂಲತಃ ಮಂಗಳೂರು ಮೂಲದ ಭರತ್, ಫಾರುಕ್ ಕಾರು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದರು. ಇವರ ಗ್ಯಾಂಗ್‌ನಲ್ಲಿ 15 ಜನರಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿ ಮೂಲದ ರಾಹುಲ್ ಸುರ್ವೆ ಕಾರು ಅಡ್ಡಗಟ್ಟಿ ಖದೀಮರು ದರೋಡೆ ಮಾಡಿದ್ದರು.

ಬೆಂಗಳೂರು: ಇವಿ ಶೋರೂಂನಲ್ಲಿ ಯುವತಿ ಸಜೀವ ದಹನ; ಮಾಲೀಕನ ಬಂಧನ
ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಇವಿ ಶೋರೂಂ ಮಾಲೀಕ 36 ವರ್ಷದ ಪುನಿತ್ ಗೌಡ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಂಪಿ: ಪ್ರವಾಸಕ್ಕೆ ಹೊರಟಿದ್ದ ವಿಂಟೇಜ್ ಕಾರು ಮಾರ್ಗ ಮಧ್ಯೆ ಹೇಗೆ ಹೊತ್ತಿ ಉರಿಯಿತು ನೋಡಿ...
ಬೆಂಕಿಗೆ ಆಹುತಿಯಾದ ಕಾರು ಹಿಂದೆ ಇತ್ತು. ರಾಯರಕೆರೆ ಸಮೀಪಕ್ಕೆ ಬಂದಾಗ ಬೆಳಗ್ಗೆ 9 ಗಂಟೆ ವೇಳೆಗೆ ಕಾರಿಗೆ ಒಮ್ಮಿಂದೊಮ್ಮೆಲೆ ಬೆಂಕಿ ಹತ್ತಿಕೊಂಡಿತು.

ಬೆಂಗಳೂರು: ಕಾರಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಉದ್ಯಮಿ ಶವ ಪತ್ತೆ; ಸಾವಿನ ಸುತ್ತ ಅನುಮಾನದ ಹುತ್ತ!
ಮೃತ ವ್ಯಕ್ತಿಯನ್ನು ನಾಗರಬಾವಿ ಎರಡನೇ ಹಂತದ 12ನೇ ಮುಖ್ಯರಸ್ತೆ ನಿವಾಸಿ, ಉದ್ಯಮಿ ಪ್ರದೀಪ್ (42) ಎಂದು ಗುರ್ತಿಸಲಾಗಿದೆ. ಮುದ್ದಿನಪಾಳ್ಯದ ಖಾಸಗಿ ಬಡಾವಣೆಯ ಖಾಲಿ ಜಾಗದಲ್ಲಿ ಈ ಘಟನೆ ನಡೆದಿದೆ.

