fire accident

ಗುರುಗ್ರಾಮ್: ಚಲಿಸುತ್ತಿದ್ದ ಸ್ಲೀಪರ್ ಬಸ್ ಗೆ ಬೆಂಕಿ, ಇಬ್ಬರು ಸಾವು, 12 ಮಂದಿ ಪ್ರಯಾಣಿಕರಿಗೆ ಗಾಯ
ಜೈಪುರ-ದೆಹಲಿ-ಗುರುಗ್ರಾಮ್ ಎಕ್ಸ್‌ಪ್ರೆಸ್‌ವೇಯಲ್ಲಿ ನಿನ್ನೆ ಬುಧವಾರ ರಾತ್ರಿ ಚಲಿಸುತ್ತಿದ್ದ ಸ್ಲೀಪರ್ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಪ್ರಯಾಣಿಕರು ಸಜೀವ ದಹನವಾಗಿದ್ದು, 12 ಮಂದಿ ಪ್ರಯಾಣಿಕರು ಸುಟ್ಟು ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ: ವರ್ಕ್ ಶಾಪ್ ನಲ್ಲಿ ಬೆಂಕಿ; ಹೊತ್ತಿ ಉರಿದ ಖಾಸಗಿ ಬಸ್ಗಳು! ವಿಡಿಯೋ
ವೀರಭದ್ರ ನಗರದಲ್ಲಿ ಬೆಂಕಿ ಅನಾಹುತ ಉಂಟಾಗಿದ್ದು, ಹಲವು ಖಾಸಗಿ ಬಸ್ ಗಳು ಬೆಂಕಿಗಾಹುತಿಯಾಗಿರುವ ಬಗ್ಗೆ ವರದಿಯಾಗಿದೆ. ವೀರಭದ್ರನಗರದ ಬಸ್ ಗಳ ಬಾಡಿ ಬಿಲ್ಡಿಂಗ್ ಮತ್ತು ವೆಲ್ಡಿಂಗ್ ಮಾಡುವ ವರ್ಕ್ ಶಾಪ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಬೆಂಗಳೂರಿನಲ್ಲಿ ಎರಡು ಅಗ್ನಿ ಅವಘಡ ಪ್ರಕರಣ; ಒಂದೇ ದಿನ 13 ವಾಹನಗಳು ಸುಟ್ಟು ಕರಕಲು
ಬೆಂಗಳೂರು ನಗರದಲ್ಲಿ ಶನಿವಾರ ನಡೆದ ಎರಡು ಪ್ರತ್ಯೇಕ ಬೆಂಕಿ ಅವಘಡಗಳಲ್ಲಿ 13 ದ್ವಿಚಕ್ರ ವಾಹನಗಳು ಸುಟ್ಟು ಭಸ್ಮವಾಗಿವೆ. ಎರಡೂ ಘಟನೆಗಳಿಗೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಶಂಕಿಸಲಾಗಿದೆ. ಈ ಎರಡೂ ಘಟನೆಗಳಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ: ಅಗರಬತ್ತಿ ಕಾರ್ಖಾನೆಯಲ್ಲಿ ಬೆಂಕಿ, 8 ಬೈಕ್ ಗಳು ಭಸ್ಮ
ಅತ್ತಿಬೆಲೆ ಪಟಾಕಿ ಗೋದಾಮು ಬೆಂಕಿ ದುರಂತ ಪ್ರಕರಣ ಹಸಿರಾಗಿರುವಂತೆಯೇ ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ಅಗರಬತ್ತಿ ಕಾರ್ಖಾನೆಯಲ್ಲಿ ಬೆಂಕಿ ಹೊತ್ತಿದ ಪರಿಣಾಮ 8 ಬೈಕ್ ಗಳು ಸುಟ್ಟು ಭಸ್ಮವಾಗಿವೆ.

ಮಂಡ್ಯದ ಮನ್ ಮುಲ್ನಲ್ಲಿ ಬೆಂಕಿ ಅವಘಡ: ಕೂದಲೆಳೆ ಅಂತರದಲ್ಲಿ ತಪ್ಪಿದ ಪ್ರಾಣಹಾನಿ
ಅತ್ತಿಬೆಲೆ ಪಟಾಕಿ ಗೋಡೌನ್ ಅಗ್ನಿ ದುರಂತ ಮಾಸುವ ಮುನ್ನವೇ ಇತ್ತ ಮಂಡ್ಯದಲ್ಲೂ ಅಗ್ನಿ ಅವಘಡ ಘಟನೆ ವರದಿಯಾಗಿದ್ದು, ಮಂಡ್ಯದ ಮನ್ ಮುಲ್ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.

ಬೆಂಗಳೂರು: ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಎಲೆಕ್ಟ್ರಿಕ್ ಕಾರು, ಇಬ್ಬರು ಪ್ರಾಣಾಪಾಯದಿಂದ ಪಾರು
ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ರಸ್ತೆ ಮಧ್ಯೆಯಲ್ಲೇ ಎಲೆಕ್ಟ್ರಿಕ್ ಕಾರು ಹೊತ್ತು ಉರಿದಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲೆಕ್ಟ್ರಿಕ್ ವಾಹನಗಳ ಮಾಲೀಕರಲ್ಲಿ ತೀವ್ರ ಆತಂಕ ಮೂಡಿಸಿದೆ.

ಮದುವೆ ಮನೆಯಲ್ಲಿ ಅಗ್ನಿ ದುರಂತ: ಮದುಮಕ್ಕಳು ಸೇರಿ 100ಕ್ಕೂ ಹೆಚ್ಚು ಮಂದಿ ಭಸ್ಮ; ಸುಟ್ಟು ಕರಕಲಾದ ವೆಡ್ಡಿಂಗ್ ಹಾಲ್
ಮದುವೆ ಸಂದರ್ಭದಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ ಕನಿಷ್ಠ 100 ಜನರು ಸಾವನ್ನಪ್ಪಿದ್ದಾರೆ. 150 ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಬುಧವಾರ ಮುಂಜಾನೆ ಮಾಹಿತಿ ನೀಡಿದ್ದಾರೆ.

ಬೆಂಗಳೂರು: ಚಾಮರಾಜಪೇಟೆ ವಿನಾಯಕ ಥಿಯೇಟರ್ ಬಳಿ ಅಗ್ನಿ ಅವಘಡ, 8 ಮನೆ ಬೆಂಕಿಗಾಹುತಿ, ಇಬ್ಬರಿಗೆ ಗಾಯ
ಬೆಂಗಳೂರಿನಲ್ಲಿ ಅಗ್ನಿಅವಘಡವೊಂದು ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ 8 ಮನೆಗಳು ಬೆಂಕಿಗಾಹುತಿಯಾಗಿ ಇಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಹಾವೇರಿ: ಪಟಾಕಿ ಅಂಗಡಿಯಲ್ಲಿ ಬೆಂಕಿ ಅವಘಡ, ಅಗ್ನಿ ಶಾಮಕ ದಳ ದೌಡು, ಮೂವರು ಸಿಬ್ಬಂದಿ ನಾಪತ್ತೆ ಶಂಕೆ!
ಪಟಾಕಿ ಅಂಗಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಕೋಟ್ಯಂತರ ಮೌಲ್ಯದ ಪಟಾಕಿ ಸುಟ್ಟು ಕರಕಲಾಗಿರುವ ಘಟನೆ ಹಾವೇರಿಯಲ್ಲಿ ಮಂಗಳವಾರ ನಡೆದಿದೆ.

