fire accident

ತೆಲಂಗಾಣ: ಶ್ರೀಶೈಲಂ ಪವರ್ ಸ್ಟೇಷನ್ ಅಗ್ನಿ ಅವಘಡ: 9 ಮಂದಿ ಸಾವು
ತೆಲಂಗಾಣದ ಶ್ರೀಶೈಲಂ ಪವರ್ ಸ್ಟೇಷನ್‌ನಲ್ಲಿ ಗುರುವಾರ ತಡರಾತ್ರಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ತೆಲಂಗಾಣದ ಶ್ರೀಶೈಲಂ ಪವರ್ ಸ್ಟೇಷನ್ ನಲ್ಲಿ ಅಗ್ನಿ ಅವಘಡ: 10 ಮಂದಿ ರಕ್ಷಣೆ, ಹಲವರು ಸಿಲುಕಿರುವ ಶಂಕೆ
ಶ್ರೀಶೈಲಂ ಪವರ್‌ಸ್ಟೇಷನ್‌ನಲ್ಲಿ ಗುರುವಾರ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, 10 ಮಂದಿಯನ್ನು ರಕ್ಷಿಸಲಾಗಿದೆ. 6 ಮಂದಿ ಶ್ರೀಶೈಲಂನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 9 ಮಂದಿ ಒಳಗೆ ಸಿಕ್ಕಿಹಾಕಿಕೊಂಡಿರುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.

ಮುಂಬೈ ಬೊರಿವಾಲಿ ಶಾಪಿಂಗ್ ಮಾಲ್ ನಲ್ಲಿ ಅಗ್ನಿ ಆಕಸ್ಮಿಕ
ಉಪನಗರದ ಬೊರಿವಲಿಯ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ, ಅದೃಷ್ಟ ವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

ಬೆಂಗಳೂರು: ಹೂವಿನ ಅಂಗಡಿಗೆ ಆಕಸ್ಮಿಕ ಬೆಂಕಿ: 10 ಲಕ್ಷ ರೂ. ನಷ್ಟ
ಹೂವಿನ ಅಲಂಕಾರ ಮಾಡುವ ಅಂಗಡಿಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂ. ನಷ್ಟ ಸಂಭವಿಸಿರುವ ಘಟನೆ ಹನುಮಂತನಗರದ ಪೈಪ್ ಲೈನ್ ರಸ್ತೆ ಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.

ಫರ್ನೀಚರ್ ಗೋದಾಮಿಗೆ ಬೆಂಕಿ: ಕಾರ್ಮಿಕರು ಪ್ರಾಣಾಪಾಯದಿಂದ ಪಾರು
ಫರ್ನೀಚರ್ ತುಂಬಿದ್ದ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಗೋದಾಮು ಏಕಾಏಕೀ ಹೊತ್ತಿ ಉರಿದಿರುವ ಘಟನೆ ಇಲ್ಲಿನ ಹೆಗಡೆ ನಗರದಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಗದಗದಲ್ಲಿ ಅಗ್ನಿ ಅವಘಡ: 30ಕ್ಕೂ ಹೆಚ್ಚು ಅಂಗಡಿಗಳು ಬೆಂಕಿಗೆ ಆಹುತಿ
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡವುಂಟಾಗಿ ಗದಗದಲ್ಲಿ 30ಕ್ಕೂ ಹೆಚ್ಚು ಅಂಗಡಿಗಳು ಬೆಂಕಿಗೆ ಆಹುತಿಯಾದ ಘಟನೆ ಮಂಗಳವಾರ ನಸುಕಿನ ಜಾವ ಸಂಭವಿಸಿದೆ.

ಚಿತ್ರದುರ್ಗ: ಆಕಸ್ಮಿಕ ಬೆಂಕಿ ಅವಘಡ; ಒಂದೇ ಕುಟುಂಬದ ಮೂವರು ಸಜೀವ ದಹನ
ಇದ್ದಕ್ಕಿದ್ದಂತೆ ಸಂಭವಿಸಿದ ಅಗ್ನಿ ದುರಂತದಲ್ಲಿ ಒಂದೇ ಕುಟುಂಬದ ಮೂವರು ಸಜೀವ ದಹನವಾಗಿದ್ದಾರೆ. ಮನೆಯಲ್ಲಿ ಅಡುಗೆ ಸಿಲಿಂಡರ್ ಸ್ಫೋಟಿಸಿರುವ ಹಿನ್ನೆಲೆಯಲ್ಲಿ ಈ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ.

ಪ್ರಧಾನಿ ಮೋದಿ ನಿವಾಸದ ಬಳಿ ಅಗ್ನಿ ಆಕಸ್ಮಿಕ, 9 ಅಗ್ನಿಶಾಮಕ ವಾಹನಗಳ ದೌಡು!
ಪ್ರಧಾನಿ ನರೇಂದ್ರ ಮೋದಿ ಅವರ ದೆಹಲಿಯ ಅಧಿಕೃತ ನಿವಾಸದ ಬಳಿ ಅಗ್ನಿ ಅವಘಡ ಸಂಭವಿಸಿದ್ದು, 9 ಅಗ್ನಿಶಾಮಕ ವಾಹನಗಳು ತೆರಳಿ ಬೆಂಕಿ ನಂದಿಸಿವೆ.

ಎಂ.ಎಸ್.ಬಿಲ್ಡಿಂಗ್ ನಲ್ಲಿ ಬೆಂಕಿ ಆಕಸ್ಮಿಕ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಇ- ಆಡಳಿತ ಸಲಹೆಗಾರ ಬೇಳೂರು ಸುದರ್ಶನ್ ಅವರ ಕೊಠಡಿಯಲ್ಲಿ ಮಂಗಳವಾರ ಬೆಳಿಗ್ಗೆ ಅಕಸ್ಮಿಕ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕ ಸೃಷ್ಟಿಯಾದ ಬಗ್ಗೆ ವರದಿಯಾಗಿದೆ.

