fine

ಹೊಸ ಕಾಯ್ದೆ ಜಾರಿಗೂ ಮುನ್ನವೇ ನಾಗಾಲ್ಯಾಂಡ್ ಟ್ರಕ್ ಗೆ ಲಕ್ಷಗಟ್ಟಲೆ ದಂಡ!
ನಾಗಾಲ್ಯಾಂಡ್ ನ ನೋಂದಣಿ ಇರುವ ಟ್ರಕ್ ಗೆ ಒಡಿಶಾದ ಸಂಬಾಲ್ ಪುರದಲ್ಲಿ ಬರೊಬ್ಬರಿ 6.53 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.

ವಿದ್ಯುತ್ ಕಳ್ಳತನ: ಕಾಂಗ್ರೆಸ್ ಮಾಜಿ ಸಚಿವ ಮುನಿಯಪ್ಪ ಪತ್ನಿಗೆ ರೂ.24 ಲಕ್ಷ ದಂಡ
ವಿದ್ಯುತ್ ಕಳ್ಳತನ ಮಾಡಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಕೆಹೆಚ್.ಮುನಿಯಪ್ಪ ಅವರ ಪತ್ನಿಗೆ ರೂ.24 ಲಕ್ಷ ದಂಡ ವಿಧಿಸಲಾಗಿದೆ.

ನೋ ಪಾರ್ಕಿಂಗ್'ನಲ್ಲಿ ಜೀಪ್ ನಿಲ್ಲಿಸಿದ ಪೊಲೀಸ್: ನಿಯಮ ಉಲ್ಲಂಘಿಸಿದ್ದಕ್ಕೆ ದುಪ್ಪಟ್ಟು ದಂಡ
ಸಂಚಾರ ನಿಯಮ ದಂಡಾಸ್ತ್ರ ಪ್ರಯೋಗ ಖಾಕಿಧಾರಿಗಳಿಗೂ ಬಿಸಿ ತಟ್ಟಿದ್ದು, ನೋ ಪಾರ್ಕಿಂಗ್ ನಲ್ಲಿ ಜೀಪ್ ನಿಲ್ಲಿಸಿದ ತಪ್ಪಿಗೆ ಸಂಚಾರ ಠಾಣೆ ಇನ್ಸ್ ಪೆಕ್ಟರ್'ವೊಬ್ಬರು ದುಪ್ಪಟ್ಟು ದಂಡ ತೆತ್ತಿರುವ ಘಟನೆ ನಗರದಲ್ಲಿ ಗುರುವಾರ ನಡೆದಿದೆ.

ಸಂಚಾರ ನಿಯಮ ಉಲ್ಲಂಘನೆ: ಒಂದೇ ದಿನದಲ್ಲಿ ರೂ.20 ಲಕ್ಷ ದಂಡ ವಸೂಲಿ
ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ದೊಡ್ಡ ಮೊತ್ತದ ಪರಿಷ್ಕೃತ ದಂಡ ಕುರಿತ ಅಧಿಸೂಚನೆ ಹೊರಬಿದ್ದ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದ್ದು, ಒಂದೇ ದಿನದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ 55 ಪ್ರಕರಣಗಳಲ್ಲಿ ರೂ. 20 ಲಕ್ಷ ದಂಡ ವಸೂಲು ಮಾಡಲಾಗಿದೆ.

ಟ್ರಕ್ ಚಾಲಕನಿಂದ ಮೋಟಾರು ವಾಹನ ಕಾಯ್ದೆ ಉಲ್ಲಂಘನೆ: ದಂಡದ ಮೊತ್ತ ಕೇಳಿದರೆ ದಂಗಾಗುತ್ತೀರ!
ಹೊಸದಾಗಿ ಜಾರಿಯಾಗಿರುವ ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಮಾಡುವವರಿಗೆ ದುಬಾರಿ ದಂಡ ವಿಧಿಸುತ್ತಿರುವ ಸರಣಿ ಪ್ರಕರಣಗಳು ವರದಿಯಾಗುತ್ತಿವೆ. ಈಗ ಅತಿ ಹೆಚ್ಚು ಮೊತ್ತದ ದಂಡ ವಿಧಿಸಲಾಗಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ.

ಸಂಚಾರ ನಿಯಮ ಉಲ್ಲಂಘನೆ: ಒಂದೇ ದಿನ ರೂ.30 ಲಕ್ಷ ರೂ. ದಂಡ ವಸೂಲು!
ಸಂಚಾರ ನಿಯಮ ಉಲ್ಲಂಘಟನೆ ಸಂಬಂಧಿಸಿದಂತೆ ದೊಡ್ಡ ಮೊತ್ತದ ಪರಿಷ್ಕೃತ ದಂಡ ಕುರಿತ ಅಧಿಸೂಚನೆ ಹೊರಬಿದ್ದ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತಂದಿರುವ ಪೊಲೀಸರು ಒಂಜದೇ ದಿನದಲ್ಲಿ ಬರೋಬ್ಬರಿ ರೂ.30 ಲಕ್ಷ ದಂಡ ವಸೂಲಿ ಮಾಡಿದ್ದಾರೆ.

ದಂಡ ಕಟ್ಟು ಎಂದಿದ್ದಕ್ಕೆ ಎಸ್ಐಎಗೇ ಪಂಚ್ ಕೊಟ್ಟ ಸವಾರ!
ಸಂಚಾರ ನಿಯಮ ಉಲ್ಲಂಘಿಸಿದ ಸವಾರನಿಗೆ ದಂಡ ಕಟ್ಟುವಂತೆ ಸೂಚಿಸಿದ ಸಹಾಯಕ ಪೊಲೀಸ್ ಇನ್ಸ್'ಪೆಕ್ಟರ್ ಒಬ್ಬರ ಮೇಲೆ ಸವಾರನೊಬ್ಬ ಹಲ್ಲೆ ನಡೆಸಿರುವ ಘಟನೆ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.

ಸಂಚಾರ ನಿಯಮ ಉಲ್ಲಂಘನೆ: ಬೆಂಗಳೂರು ಬೈಕ್ ಸವಾರನಿಗೆ ಬರೋಬ್ಬರಿ 17 ಸಾವಿರ ರು. ದಂಡ!
ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾಗಿದ್ದು, ಮೊದಲ ಬಾರಿಗೆ ಬೈಕ್ ಸವಾರ 17 ಸಾವಿರ ದಂಡ ಪಾವತಿ ಮಾಡಿದ್ದಾನೆ.

ದುಬಾರಿ ಸಂಚಾರಿ ದಂಡಕ್ಕೆ 'ದೇಸೀ ಉಪಾಯ'; ಬೇಸ್ತು ಬಿದ್ದ ಟ್ರಾಫಿಕ್ ಪೊಲೀಸರು!
ದೇಶಾದ್ಯಂತ ಜಾರಿಯಾಗಿರುವ ನೂತನ ಸಂಚಾರಿ ನಿಯಮಗಳಿಂದಾಗಿ ದುಬಾರಿ ದಂಡಕ್ಕೆ ಜನ ಕಂಗಾಲಾಗಿದ್ದಾರೆಯಾದರೂ, ಅತ್ತ ದುಬಾರಿ ದಂಡ ತಪ್ಪಿಸಿಕೊಳ್ಳಲು ಅಲ್ಲಿನ ಬೈಕ್ ಸವಾರರು ಮಾಡಿರುವ ದೇಸೀ ಉಪಾಯಕ್ಕೆ ಟ್ರಾಫಿಕ್ ಪೊಲೀಸರೇ ಬೇಸ್ತು ಬಿದ್ದಿದ್ದಾರೆ.

