Farooq Abdulla

ಈದ್ ಮಿಲಾದ್ ಪ್ರಾರ್ಥನೆಗೆ ಹೊರಟ ಫಾರೂಕ್ ಅಬ್ದುಲ್ಲಾರಿಗೆ ತಡೆ: ಮೂಲಭೂತ ಹಕ್ಕು ಉಲ್ಲಂಘನೆ ಎಂದು ಆರೋಪಿಸಿದ ಎನ್ ಸಿ
ಈದ್ ಮಿಲಾದ್ ಪ್ರಯುಕ್ತ ಹಸರತ್ಬಾಲ್ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲು ಹೊರಟಿದ್ದ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರನ್ನು ಜಮ್ಮು-ಕಾಶ್ಮೀರದ ಆಡಳಿತಾಧಿಕಾರಿಗಳು ನಿವಾಸದಿಂದ ಹೊರಬರದಂತೆ ತಡೆದ ಘಟನೆ ನಡೆದಿದೆ.ಈ ಬಗ್ಗೆ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಆರೋಪಿಸಿದ್ದು ಆಡಳಿತ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.

ಕಾಶ್ಮೀರ ಆಡಳಿತದಿಂದ ಮುಸ್ಲಿಮರನ್ನು ಸಂಪೂರ್ಣವಾಗಿ ತೆಗೆದುಹಾಕಿ ಹಿಂದೂಗಳನ್ನು ನೇಮಿಸಲಾಗಿದೆ: ಫಾರೂಕ್ ಅಬ್ದುಲ್ಲಾ
ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ಸಂವಿಧಾನ ವಿಧಿ 370 ಮತ್ತು 35ಎಯನ್ನು ತೆಗೆದುಹಾಕಿದ ನಂತರ ಕಾಶ್ಮೀರ ಆಡಳಿತದಿಂದ ಮುಸಲ್ಮಾನರನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.

ಜಮ್ಮು-ಕಾಶ್ಮೀರಕ್ಕೆ ಹೊಸ ನಿವಾಸತ್ವ ಕಾನೂನು ಅಸಂವಿಧಾನಿಕ ಮತ್ತು ಅಕ್ರಮ: ಫಾರೂಕ್ ಅಬ್ದುಲ್ಲಾ
ಜಮ್ಮು ಮತ್ತು ಕಾಶ್ಮೀರದ ಹೊಸ ನಿವಾಸತ್ವ ಕಾನೂನು ಅಕ್ರಮ ಮತ್ತು ಅಸಂವಿಧಾನಿಕ, ಇದನ್ನು ಜಮ್ಮು-ಕಾಶ್ಮೀರದ ಜನತೆ ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಮತ್ತು ಲೋಕಸಭಾ ಸದಸ್ಯ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಕಾಶ್ಮೀರದಲಿ ಕೊರೋನಾ ತಡೆಗೆ ಫಾರೂಕ್ ಅಬ್ದುಲ್ಲಾರಿಂದ ಕೋಟಿ ರು. ಬಿಡುಗಡೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಕೊರೋನಾ ಹಾವಳಿ ಎದುರಿಸಲು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಮತ್ತು ಸಂಸತ್ ಸದಸ್ಯ ಫಾರೂಕ್ ಅಬ್ದುಲ್ಲಾ ಶನಿವಾರ ತಮ್ಮ ಎಂಪಿಎಲ್‌ಎಡಿ ನಿಧಿಯಿಂದ ಒಂದು ಕೋಟಿ ರೂ. ಬಿಡುಗಡೆ ಮಾಡಿದ್ದಾರೆ.ಇನ್ನೊಂದೆಡೆ ಶ್ರೀರಾಮನವಮಿಯನ್ನು ಭಕ್ತರು ಮನೆಗಳಲ್ಲೇ ಆಚರಿಸಿ ಎಂದು ಅಯೋಧ್ಯೆ ಶ್ರೀರಾಮತೀರ್ಥಕ್ಷೇತ್ರ ಟ್ರಸ್ಟ್ ಮನವಿ ಮಾಡಿದೆ.

2 ತಿಂಗಳ ಗೃಹ ಬಂಧನ ನಂತರ ಸಾರ್ವಜನಿಕರಿಗೆ ಫಾರೂಕ್ ಅಬ್ದುಲ್ಲಾ ದರ್ಶನ; ನ್ಯಾಷನಲ್ ಕಾನ್ಫರೆನ್ಸ್ ನಿಯೋಗ ಭೇಟಿ
ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರನ್ನು ಮತ್ತು ಅವರ ಪತ್ನಿ ಮೊಲ್ಲಿಯವರನ್ನು ಶ್ರೀನಗರದಲ್ಲಿ ಭಾನುವಾರ ಅವರ ನಿವಾಸದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ನಾಯಕರಾದ ಹಸ್ನೈನ್ ಮಸೂದಿ ಮತ್ತು ಅಕ್ಬರ್ ಲೊನೆ ಭೇಟಿ ಮಾಡಿದರು.

ಫಾರೂಕ್ ಅಬ್ದುಲ್ಲಾ ಗೃಹ ಬಂಧನ; ಕೇಂದ್ರ ಮತ್ತು ಜಮ್ಮು-ಕಾಶ್ಮೀರ ಆಡಳಿತಕ್ಕೆ 'ಸುಪ್ರೀಂ' ನೊಟೀಸ್ ಜಾರಿ
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ತೆಗೆದುಹಾಕಿದ ನಂತರ ಗೃಹ ಬಂಧನದಲ್ಲಿರುವ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂಬಂಧ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಮತ್ತು ಜಮ್ಮು-ಕಾಶ್ಮೀರ ಆಡಳಿತ ಬಳಿ ಪ್ರತಿಕ್ರಿಯೆ ಕೇಳಿದೆ.

ಫಾರೂಕ್ ಅಬ್ದುಲ್ಲಾ ಚೆನ್ನೈ ಆಗಮನಕ್ಕೆ ಅನುಮತಿ ಕೋರಿ ವೈಕೊ 'ಸುಪ್ರೀಂ'ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ
ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಚೆನ್ನೈಗೆ ಆಗಮಿಸಲು ಅನುಮತಿ ನೀಡಬೇಕೆಂದು ಕೋರಿ ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೊ ಬುಧವಾರ ಸುಪ್ರೀಂ ಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ.

ಎನ್'ಕೌಂಟರ್'ನಲ್ಲಿ ಅಬು ದುಜಾನಾ ಹತ್ಯೆ: ಸೇನಾ ಪಡೆಯನ್ನು ಅಭಿನಂದಿಸಿದ ಫರೂಖ್ ಅಬ್ದುಲ್ಲಾ
ಜಮ್ಮು ಮತ್ತು ಕಾಶ್ಮೀರ ಪುಲ್ವಾಮ ಜಿಲ್ಲೆಯಲ್ಲಿ ನಡೆಸಲಾದ ಎನ್'ಕೌಂಟರ್ ನಲ್ಲಿ ಲಷ್ಕರ್-ಇ-ತೊಯ್ಬಾ ಸಂಘಟನೆಯ ಉಗ್ರ ಅಬು ದುಜಾನಾ'ನನ್ನು ಹತ್ಯೆ ಮಾಡಿರುವುದಕ್ಕೆ ಭಾರತೀಯ ಸೇನಾ ಪಡೆಗೆ ಜಮ್ಮು ಮತ್ತು ಕಾಶ್ಮೀರದ ಮಾಜಿ...

