ಜಮ್ಮು-ಕಾಶ್ಮೀರಕ್ಕೆ ಹೊಸ ನಿವಾಸತ್ವ ಕಾನೂನು ಅಸಂವಿಧಾನಿಕ ಮತ್ತು ಅಕ್ರಮ: ಫಾರೂಕ್ ಅಬ್ದುಲ್ಲಾ
ಜಮ್ಮು ಮತ್ತು ಕಾಶ್ಮೀರದ ಹೊಸ ನಿವಾಸತ್ವ ಕಾನೂನು ಅಕ್ರಮ ಮತ್ತು ಅಸಂವಿಧಾನಿಕ, ಇದನ್ನು ಜಮ್ಮು-ಕಾಶ್ಮೀರದ ಜನತೆ ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಮತ್ತು ಲೋಕಸಭಾ ಸದಸ್ಯ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಹೊಸ ನಿವಾಸತ್ವ ಕಾನೂನು ಅಕ್ರಮ ಮತ್ತು ಅಸಂವಿಧಾನಿಕ, ಇದನ್ನು ಜಮ್ಮು-ಕಾಶ್ಮೀರದ ಜನತೆ ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಮತ್ತು ಲೋಕಸಭಾ ಸದಸ್ಯ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಅಂಸವಿಧಾನಿಕ ಮತ್ತು ಅಕ್ರಮವಾಗಿರುವುದರ ವಿರುದ್ಧ ಯಾವುದೇ ಕ್ರಮ ಕೈಗೊಂಡರೂ ಅದನ್ನು ನಾವು ಜಮ್ಮು-ಕಾಶ್ಮೀರದ ಜನತೆ ಒಪ್ಪಲು ಸಾಧ್ಯವಿಲ್ಲ, ಒಟ್ಟಾಗಿ ನಿಂತು ಹೋರಾಡುತ್ತೇವೆ, ಸದ್ಯ ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ಸರಿಯಾಗಿಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ತೆಗೆದು ಹಾಕಿ ಕೇಂದ್ರಾಡಳಿತ ಪ್ರದೇಶವಾಗಿ ಮಾಡಿದ ನಂತರ ತರಲಾಗಿರುವ ಹೊಸ ವಾಸ ಕಾನೂನಿನ ಪ್ರಕಾರ 15 ವರ್ಷಗಳ ಕಾಲ ಜಮ್ಮು-ಕಾಶ್ಮೀರದಿಂದ ನೆಲೆಸಿರುವ ಶಾಶ್ವತರಹಿತ ನಿವಾಸಿಗಳು ಅಲ್ಲಿನ ವಾಸಿಗಳು ಎಂಬ ಪ್ರಮಾಣಪತ್ರ ಪಡೆಯಲು, ಸರ್ಕಾರದ ಇತರ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.
ಸಂವಿಧಾನ ಪರಿಚ್ಛೇದ 370 ಮತ್ತು 35ಎ ಅಧಿಸೂಚನೆಯನ್ನು ರದ್ದುಗೊಳಿಸುವ ಮೊದಲು ಜಮ್ಮು-ಕಾಶ್ಮೀರದಲ್ಲಿ ಅಲ್ಲಿಯೇ ಹುಟ್ಟಿ ಬೆಳೆದ ಪ್ರಜೆಗಳು ಮಾತ್ರ ಭೂಮಿ ಖರೀದಿಸಬಹುದಾಗಿತ್ತು ಮತ್ತು ಸರ್ಕಾರಿ ನೌಕರಿ ಗಟ್ಟಿಸಿಕೊಳ್ಳಬಹುದಾಗಿತ್ತು.
ಫಾರೂಕ್ ಅಬ್ದುಲ್ಲಾ ಇದರ ಜೊತೆಗೆ ಭಾರತ ಮತ್ತು ಚೀನಾ, ಭಾರತ ಮತ್ತು ಪಾಕಿಸ್ತಾನ ಮಧ್ಯೆ ಮಾತುಕತೆಗೆ ಸಹ ಒಲವು ತೋರಿಸಿದರು. ಭಾರತ-ಚೀನಾ ಮತ್ತು ಭಾರತ-ಪಾಕಿಸ್ತಾನ ಮಧ್ಯೆ ಮಾತುಕತೆಯೊಂದೇ ಪರಿಹಾರ, ಯುದ್ಧ ಅಲ್ಲ ಎಂದು ಅಭಿಪ್ರಾಯಪಟ್ಟರು.
ಶ್ರೀನಗರ ಕ್ಷೇತ್ರದ ಸಂಸದರಾಗಿರುವ ಫಾರೂಕ್ ಅಬ್ದುಲ್ಲಾ, ಕಳೆದ ಆಗಸ್ಟ್ ತಿಂಗಳಲ್ಲಿ ಕೇಂದ್ರ ಸರ್ಕಾರ ಸಂವಿಧಾನ ಪರಿಚ್ಛೇದ 370 ರದ್ದುಗೊಳಿಸಿದ ನಂತರ ಅವರನ್ನು 8 ತಿಂಗಳ ಕಾಲ ಗೃಹ ಬಂಧನದಲ್ಲಿರಿಸಲಾಗಿತ್ತು, ಇತ್ತೀಚೆಗಷ್ಟೆ ಬಿಡುಗಡೆಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


