family

ಮೈಸೂರು: ಕುಡಿದ ಅಮಲಿನಲ್ಲಿ ತಾಯಿ, ಪತ್ನಿ, ಇಬ್ಬರು ಮಕ್ಕಳನ್ನು ಕೊಂದ ವ್ಯಕ್ತಿ!
ಕುಡಿದ ಅಮಲಿನಲ್ಲಿ ವ್ಯಕ್ತಿ ಓರ್ವ ತನ್ನ ತಾಯಿ, ಗರ್ಭಿಣಿ ಪತ್ನಿ, ಇಬ್ಬರೂ ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿರುವ ಅಮಾನವೀಯ ಘಟನೆಯೊಂದು ಜಿಲ್ಲೆಯ ಸರಗೂರು ತಾಲೂಕಿನ ಸ್ವಾಮಿಗೌಡನಹುಂಡಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.

22 ವರ್ಷಗಳ ಬಳಿಕ ಮಗನನ್ನು ಪೋಷಕರ ಮಡಿಲು ಸೇರಿಸಿದ ಕೊರೋನಾ!
ಇಲ್ಲೊಂದು ವಿಚಿತ್ರ ಪ್ರಕರಣದಲ್ಲಿ ಬರೋಬ್ಬರಿ 22 ವರ್ಷಗಳ ಹಿಂದೆ ಅಪ್ಪ-ಅಮ್ಮನ್ನು ತೊರೆದು ಹೋಗಿದ್ದ ಯುವಕನೋರ್ವ ಇದೀಗ ಕೊರೋನಾ ಕಾರಣದಿಂದಾಗಿ ವಾಪಸ್ ಮನೆಗೆ ಸೇರಿದ್ದಾನೆ.

ಬೀದಿಗೆ ಬಿತ್ತು ಜೆಡಿಎಸ್ ದಾಯಾದಿ ಕಲಹ! ಉಪಚುನಾವಣೆ ಫಲಿತಾಂಶದ ಮೇಲೆ ಎಫೆಕ್ಟ್?
ಶಿರಾ ಮತ್ತು ಆರ್ ಆರ್ ನಗರ ಉಪಚುನಾವಣೆ ಜೆಡಿಎಸ್ ಗೆ ನಿರ್ಣಾಯಕವಾಗಿದೆ. ಆದರೆ ಇದೇ ಹೊತ್ತಲ್ಲಿ ಜೆಡಿಎಸ್ ಕೌಟುಂಬಿಕ ಕಲಹ ಬಹಿರಂಗಗೊಂಡಿದೆ. ದಶಕಗಳಿಂದಲೂ ಕುಮಾರಸ್ವಾಮಿ ಮತ್ತು ಎಚ್ ಡಿ ರೇವಣ್ಣ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

ಗೋವಿಂದ ಕಾರಜೋಳ ಪುತ್ರ ಆರೋಗ್ಯ ಸ್ಥಿತಿ ಗಂಭೀರ: ಡಿಸಿಎಂ ಮನೆಯಲ್ಲಿ 8 ಮಂದಿಗೆ ಕೊರೋನಾ
ನಾನೂ ಸೇರಿದಂತೆ ಕುಟುಂಬದ ಎಂಟು ಮಂದಿ ಕೋವಿಡ್ ಬಾಧಿತರಾಗಿದ್ದೇವೆ. ಪುತ್ರ ಡಾ. ಗೋಪಾಲ ಕಾರಜೋಳ 23 ದಿನಗಳಿಂದ ವೆಂಟಿಲೇಟರ್‌ನಲ್ಲಿದ್ದಾನೆ. ಇಂಥ ಸಂಕಷ್ಟದ ಸಂದರ್ಭದಲ್ಲಿ ಒಂದು ಘಟನೆಯಿಂದ ಅಳೆಯಲು ಹೋಗಬೇಡಿ’ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮನವಿ ಮಾಡಿದ್ದಾರೆ.

ಸುರೇಶ್ ಅಂಗಡಿ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಕ್ಷೇತ್ರ: ಕುಟುಂಬಸ್ಥರಿಗೆ ಟಿಕೆಟ್ ನೀಡಲು ಹೆಚ್ಚಿದ ಒತ್ತಡ
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿಯವರ ನಿಧನದಿಂದ ಬೆಳಗಾವಿ ಲೋಕಸಭಾ ಕ್ಷೇತ್ರ ಸ್ಥಾನ ತೆರವಾಗಿದೆ. ಈ ನಿಟ್ಟಿನಲ್ಲಿ ಉಪ ಚುನಾವಣೆ ನಡೆಯಲಿದ್ದು ಕೆಲವು ಬಿಜೆಪಿ ನಾಯಕರು ಶತಾಯಗತಾಯ ತಮಗೆ ಟಿಕೆಟ್ ಸಿಗಬೇಕೆಂದು ಪ್ರಯತ್ನಿಸುತ್ತಿದ್ದಾರೆ.

ಸುರೇಶ್ ಅಂಗಡಿ ನಿವಾಸಕ್ಕೆ ಮುಖ್ಯಮಂತ್ರಿ ಭೇಟಿ, ಕುಟುಂಬ ಸದಸ್ಯರಿಗೆ ಸಾಂತ್ವನ
ಇತ್ತೀಚೆಗೆ ನಿಧನರಾದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಬೆಳಗಾವಿಯ ನಿವಾಸಕ್ಕೆ ಬುಧವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಗುಬ್ಬಿ ಶಾಸಕ ಜೆಡಿಎಸ್ ನ ಎಸ್.ಆರ್. ಶ್ರೀನಿವಾಸ್ ಇಡೀ ಕುಟುಂಬಕ್ಕೆ ಕೊರೋನಾ!
ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಕುಟುಂಬಕ್ಕೆ ಕೊರೋನಾ ಸೋಂಕು ತಗುಲಿದೆ. ಆದರೆ ಶಾಸಕ ಎಸ್.ಆರ್. ಶ್ರೀನಿವಾಸ್ ಅವರು ಬಚಾವ್ ಆಗಿದ್ದಾರೆ.

ನಾವೇನು ತಪ್ಪು ಮಾಡಿದ್ದೇವೆಂದು ಈ ಶಿಕ್ಷೆ?: ಕನಸಿನ ಮನೆ ಸುಟ್ಟು ಕರಕಲಾಗಿರುವುದು ಕಂಡು ಶಾಸಕನ ಪತ್ನಿ ಕಣ್ಣೀರು
ನಾವೇನು ತಪ್ಪು ಮಾಡಿದ್ದೇವೆಂದು ನಮಗೆ ಈ ಶಿಕ್ಷೆ?... ಇದೀಗ ನಾವು ಎಲ್ಲಿರಬೇಕು?... ಎಂದು ಪ್ರಶ್ನಿಸಿರುವ ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರಕ ಪತ್ನಿ 40 ವರ್ಷಗಳಿಂದ ನೆಲೆಸಿದ್ದ ಕನಸಿನ ಮನೆ ಸುಟ್ಟು ಕರಕಲಾಗಿರುವುದನ್ನು ಕಂಡು ಕಣ್ಣೀರು ಹಾಕಿದ್ದಾರೆ.

ಒಂದೇ ಕುಟುಂಬ ಐವರಿಗೂ ಕೊರೋನಾ: ಆತಂಕ ಬದಿಗೊತ್ತಿ ಸಹಾಯ ಹಸ್ತ ಚಾಚಿದ ಸ್ಥಳೀಯರು
ಕುಟುಂಬ ಐವರಿಗೂ ಸದಸ್ಯರಿಗೂ ಕೊರೋನಾ ದೃಢಪಟ್ಟು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ ಕುಟುಂಬವೊಂದಕ್ಕೆ ಆತಂಕ ಪಕ್ಕಕ್ಕಿಟ್ಟು ಸ್ಥಳೀಯರೇ ಸಹಾಯಹಸ್ತ ಚಾಚಿರುವ ಘಟನೆ ವಸಂತನಗರದಲ್ಲಿ ನಡೆದಿದೆ.

