Fake video
ವಿರಾಟ್ ಕೊಹ್ಲಿಗೆ ವೈಭವ್ ಸೂರ್ಯವಂಶಿಯಿಂದ ಅವಮಾನ? ವೈರಲ್ ವಿಡಿಯೋ ಬಗ್ಗೆ ಹರ್ಷ ಭೋಗ್ಲೆ ಸ್ಪಷ್ಟನೆ!
ವಿಡಿಯೋ ವೈರಲ್ ಆದ ನಂತರ ಹರ್ಷ ಭೋಗ್ಲೆ ಸಾಮಾಜಿಕ ಮಾಧ್ಯಮದಲ್ಲಿ ಸ್ಪಷ್ಟನೆ ನೀಡಿದ್ದು, ತಾವು ಅಂತಹ ಪ್ರಶ್ನೆಯನ್ನು ಕೇಳಿಲ್ಲ ಅಥವಾ ವೈಭವ್ ಸೂರ್ಯವಂಶಿ ಆ ರೀತಿಯಲ್ಲಿ ಪ್ರತಿಕ್ರಿಯಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

T20 World Cup 2026: ಭಾರತ-ಪಾಕ್ ಪಂದ್ಯದ ಬಗ್ಗೆ ನಕಲಿ ವಿಡಿಯೋ ಪ್ರಸಾರ; ಪಾಕಿಸ್ತಾನದ ಟಿವಿ ವಿರುದ್ಧ ರಾಜೀವ್ ಶುಕ್ಲಾ ಕಿಡಿ!
ಎಆರ್‌ವೈ ನ್ಯೂಸ್‌ನಲ್ಲಿ ಪ್ರಸಾರವಾದ ಈ ಕಾರ್ಯಕ್ರಮದಲ್ಲಿ ಭಾನುವಾರ ಕೊಲಂಬೊದಲ್ಲಿ ಭಾರತ ವಿರುದ್ಧ ಆಡುವುದನ್ನು ಪಾಕಿಸ್ತಾನ ತಿರಸ್ಕರಿಸಿದ್ದಕ್ಕೆ ಶುಕ್ಲಾ ಅವರ ಪ್ರತಿಕ್ರಿಯೆಯಾಗಿ ಈ ಕ್ಲಿಪ್ ಅನ್ನು ತೋರಿಸಿದೆ.

ಗದಗ: ಚಿರತೆಯ ನಕಲಿ ವಿಡಿಯೋ, ಜಿಗೇರಿ ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ!
ಗದಗ ಜಿಲ್ಲೆಯ ಜಿಗೇರಿ, ನಾಗೇಂದ್ರಗಡ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ಬಂದ್ ಜೀವನ ನಡೆಸುತ್ತಿದ್ದಾರೆ. ಇದರಿಂದಾಗಿ ಬುಧವಾರ ಪ್ರತ್ಯಕ್ಷವಾದ ಚಿರತೆಯೊಂದು ಗ್ರಾಮಸ್ಥರಿಗೆ ಮಾತ್ರವಲ್ಲ, ಅರಣ್ಯ ಇಲಾಖೆ ಅಧಿಕಾರಿಗಳು ಕೂಡಾ ನಿದ್ದೆಯಿಲ್ಲದ ರಾತ್ರಿ ಕಳೆಯುವಂತಾಗಿದೆ.

ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋಗಿಂತ ಜಾಸ್ತಿನೇ ಎಕ್ಸ್‌ಪೋಸ್ ಮಾಡ್ತಾರೆ: ನಟಿ ಮಾಧವಿ ಲತಾ
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ 'ಡೀಪ್‌ಫೇಕ್' ವಿಡಿಯೋ ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಸದ್ದು ಮಾಡುತ್ತಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಶುಕ್ರವಾರ ವಿಶೇಷ ಸೆಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ತಿರುಚಿದ ವಿಡಿಯೋ: 'ಡೀಪ್ ಫೇಕ್' ಕೃತ್ಯಕ್ಕೆ ಕಡಿವಾಣ ಹಾಕಿ; ಸಾಮಾಜಿಕ ಮಾಧ್ಯಮಗಳಿಗೆ ಕೇಂದ್ರ ಸೂಚನೆ
ಬೇರೊಬ್ಬರ ಮುಖವನ್ನು ಡೀಪ್ ಫೇಕ್ ಮಾಡುವ ಯಾವುದೇ ವಿಡಿಯೋ ಅಥವಾ ಪೋಟೋ ಹಾಕದಂತೆ ಬಳಕೆದಾರರಿಗೆ ಸೂಚಿಸುವಂತೆ ಹಾಗೂ ಕಾನೂನಿನ ಪ್ರಕಾರ ದೂರುಗಳನ್ನು ಸ್ವೀಕರಿಸಿದ 24 ಗಂಟೆಗಳ ಒಳಗೆ ಅಂತಹ ವಿಷಯವನ್ನು ತ್ವರಿತವಾಗಿ ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಸಾಮಾಜಿಕ ಮಾಧ್ಯಮಗಳಿಗೆ ಮಂಗಳವಾರ ನಿರ್ದೇಶನ ನೀಡಿದೆ.

ನಕಲಿ ವಿಡಿಯೋ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹ
ಬಿಜೆಪಿಯನ್ನು ಕೆಟ್ಟದಾಗಿ ಬಿಂಬಿಸಲು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಮತ್ತು ಕಪೋಲಕಲ್ಪಿತ ವಿಡಿಯೋವನ್ನು ಹಾಕಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಡಳಿತಾರೂಢ ಬಿಜೆಪಿ ಮಂಗಳವಾರ ಆಗ್ರಹಿಸಿದೆ.

ವಿಕ್ಟೋರಿಯಾ ಆಸ್ಪತ್ರೆ ಹೆಸರಿನಲ್ಲಿ ಬೇರೆ ರಾಜ್ಯದ ವಿಡಿಯೋ ವೈರಲ್: ಆರೋಪಿ ಬಂಧನ- ಭಾಸ್ಕರ್ ರಾವ್
ರಾಜಧಾನಿ ಬೆಂಗಳೂರಿನ ವಿಕ್ಟೋರಿಯಾದ ಆಸ್ಪತ್ರೆಯ ವಿಡಿಯೋ ಎಂದು ಹೇಳಿ ನಕಲಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆ ಅವ್ಯವಸ್ಥೆ ಬಿಂಬಿಸುವ ವಿಡಿಯೋ ನಕಲಿ: ಪ್ರಕರಣ ದಾಖಲು
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನೂರಾರು ರೋಗಿಗಳು ವೈದ್ಯರಿಗಾಗಿ ಕಾಯುತ್ತಿದ್ದ ದೃಶ್ಯ ಎಂದು ಅಲ್ಲಿನ ಅವ್ಯವಸ್ಥೆಯನ್ನು ಬಿಂಬಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವಿಡಿಯೋ, ನಕಲಿಯಾಗಿದ್ದು, ಇದು ವಿಕ್ಟೋರಿಯಾ ಅಥವಾ ಕರ್ನಾಟಕದ ಯಾವುದೇ ಆಸ್ಪತ್ರೆಯ ವಿಡಿಯೋ ಅಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

ವೈರಲ್ ವಿಡಿಯೋ ದೆಹಲಿಯದ್ದಲ್ಲ, ಪುಣೆಯಲ್ಲಿ ನಡೆದ ಹಳೆಯ ಘಟನೆ: ಕೇಂದ್ರ ಸರ್ಕಾರ!
ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೈರಲ್ ವಿಡಿಯೋ ನಿಜವಲ್ಲ.. ಸುಳ್ಳು.. ಅದು ಅಸಲಿಗೆ ದೆಹಲಿಯದ್ದೇ ಅಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಸ್ಪಷ್ಟಪಡಿಸಿದೆ.

