
ಅವಹೇಳಕಾರಿ ಪೋಸ್ಟ್: ಕುಂದಾಪುರ ವ್ಯಕ್ತಿಯ ಖಾತೆಯ ಬಗ್ಗೆ ಫೇಸ್‌ಬುಕ್‌ನಿಂದ ಮಾಹಿತಿ ಕೇಳಿದ ಪೋಲೀಸರು
ಸೌದಿ ಅರೇಬಿಯಾ ದೊರೆ ಹಾಗೂ ಮೆಕ್ಕಾದ ಬಗೆಗೆ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದ ಆರೋಪದಡಿ ಸೌದಿ ಅರೇಬಿಯಾದಲ್ಲಿ ಬಂಧಿಸಲ್ಪಟ್ಟಿರುವ ಕುಂದಾಪುರ ಮೂಲದ ಹರೀಶ್ ಬಂಗೇರಅವರನ್ನು ಬಿಡುಗಡೆ ಮಾಡುವ ಪ್ರಯತ್ನದಲ್ಲಿ, ಉಡುಪಿ ಜಿಲ್ಲಾ ಪೊಲೀಸರು ಫೇಸ್‌ಬುಕ್‌ಗೆ ಪತ್ರವೊಂದನ್ನು ಬರೆದಿದ್ದು, ಹರೀಶ್ ಹೆಸರಿನಲ್ಲಿ ಎರಡನೇ ಫೇಸ್‌ಬುಕ್ ಖಾತೆಯನ್ನು ಯಾವ ಐಪಿ ಸಂಖ್ಯೆಯಿಂದ ರಚಿಸಲಾಗಿದೆ

ಫೇಸ್ಬುಕ್'ನಲ್ಲಿ ಅವಹೇಳನಕಾರಿ ಪೋಸ್ಟ್: ಸೌದಿಯಲ್ಲಿ ಬಂಧನಕ್ಕೊಳಗಾದ ಯುವಕನ ರಕ್ಷಣೆಗೆ ಒಗ್ಗೂಡಿದ ಉಡುಪಿ ಜನತೆ
ಧಾರ್ಮಿಕ ಅವಹೇಳನ ಹಾಗೂ ಸೌದಿ ಅರೇಬಿಯಾ ದೊರೆ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಕುಂದಾಪುರದ ಯುವಕನನ್ನು ಸೌದಿ ಪೊಲೀಸರು ಬಂಧನಕ್ಕೊಳಪಡಿಸಿರುವ ಹಿನ್ನೆಲೆಯಲ್ಲಿ ಯುವಕನ ರಕ್ಷಣೆಗಾಗಿ ಉಡುಪಿ ಜನತೆ ಒಗ್ಗೂಡಿ ಆಕ್ರೋಶ ವ್ಯಕ್ತಪಡಿಸಿದೆ.

ಸಾಮಾಜಿಕ ತಾಣಗಳಿಗೆ ಆಧಾರ್ ಲಿಂಕ್: ಹೈಕೋರ್ಟ್ ನಲ್ಲಿನ ಅರ್ಜಿಗಳನ್ನು ಸುಪ್ರೀಂಗೆ ವರ್ಗಾಯಿಸಲು ನ್ಯಾಯಾಲಯ ಅನುಮತಿ
ಫೇಸ್‌ಬುಕ್‌ನ ಮನವಿಯನ್ನು ಪುರಸ್ಕರಿಸಿರುವ ಸುಪ್ರೀಂ ಕೋರ್ಟ್ ಭಾರತದಲ್ಲಿ ಸಾಮಾಜಿಕ ಮಾಧ್ಯಮವನ್ನು ನಿಯಂತ್ರಿಸುವ ಮಾರ್ಗಸೂಚಿಗಳಿಗೆ ಸಂಬಂಧಿಸಿ ದೇಶದ ನಾನಾ ಹೈಕೋರ್ಟ್‌ಗಳಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಲು ಅನುಮತಿ ನೀಡಿದೆ.

ಫೇಸ್ಪುಕ್, ವಾಟ್ಸಪ್ ನಿಯಂತ್ರಣ ಅಗತ್ಯ: ಸುಪ್ರೀಂ'ಗೆ ಕೇಂದ್ರ
ಪ್ರಜಾಪ್ರಭುತ್ವ ರಾಜಕೀಯಕ್ಕೆ ಅಂತರ್ಜಾಲ ಊಹಿಸಲೂ ಆಗದಷ್ಟು ಹಾನಿಯುಂಟು ಮಾಡುತ್ತಿದ್ದು, ಫೇಸ್'ಬುಕ್, ವಾಟ್ಸಪ್, ಟ್ವಿಟರ್ ಅಂತಹ ಮಧ್ಯವರ್ತಿಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್'ಗೆ ತಿಳಿಸಿದೆ.

ತೆಲಂಗಾಣ; ಲೈಂಗಿಕತೆಗೆ ಸಹಕರಿಸದ್ದಕ್ಕೆ 10ನೇ ತರಗತಿ ಬಾಲಕಿಯನ್ನು ಕೊಂದ 'ಫೇಸ್ ಬುಕ್' ಗೆಳೆಯ
ಫೇಸ್ ಬುಕ್ ನಲ್ಲಿ ಪರಿಚಯವಾಗಿ ಸ್ನೇಹಿತರಾಗಿದ್ದ 15 ವರ್ಷದ 10ನೇ ತರಗತಿಯ ಬಾಲಕಿಯನ್ನು ವೈ ನವೀನ್ ರೆಡ್ಡಿ ಎಂಬಾತ ಹತ್ಯೆ ಮಾಡಿರುವ ಘಟನೆ ಮಹಬೂಬ್ ನಗರ ಜಿಲ್ಲೆಯ ಶಂಕರಪಳ್ಳಿ ತಾಂಡಾದಲ್ಲಿ ನಡೆದಿದೆ.

ಯಾರು ನಿಜವಾದ ಸುಮಲತಾ? ಗೊಂದಲಗಳಿಗೆ ತೆರೆ ಎಳೆದ ಮಂಡ್ಯ'ಗೌಡ್ತಿ'
ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ತಮ್ಮದೇ ಹೆಸರಿನ ಮೂವರ ವಿರುದ್ಧ ಗೆದ್ದು ಬೀಗಿದ ಸಂಸದೆ ಸುಮಲತಾ ಅಂಬರೀಶ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹೋರಾಟ ಮಾಡುತ್ತಿದ್ದಾರೆ,..

ನಟ ವಸಿಷ್ಠ ಸಿಂಹ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಮಹಿಳೆಗೆ ವಂಚನೆ
ಕನ್ನಡ ಖ್ಯಾತ ಚಿತ್ರನಟ ವಸಿಷ್ಠ ಸಿಂಹ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ವಂಚಿಸುತ್ತಿದ್ದ ಖತರ್ ನಾಕ್ ಕಳ್ಳನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಆಧಾರ್‌ನೊಂದಿಗೆ ಬಳಕೆದಾರರ ಪ್ರೊಫೈಲ್ ಲಿಂಕ್: ಪ್ರಕರಣಗಳ ವರ್ಗಾವಣೆ ಕುರಿತ ಫೇಸ್‌ಬುಕ್‌ನ ಮನವಿ ಆಲಿಸಲು ಸುಪ್ರೀಂ ಒಪ್ಪಿಗೆ
ಬಳಕೆದಾರರ ಸೋಷಿಯಲ್ ಮೀಡಿಯಾ ಪ್ರೊಫೈಲ್‌ಗಳನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡುವ ಬೇಡಿಕೆಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ವರ್ಗಾವಣೆ ಮಾಡುವಂತೆ ಫೇಸ್‌ಬುಕ್ ಇಂಕ್ ಸಲ್ಲಿಸಿದ್ದ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ಮಂಗಳವಾರ ಒಪ್ಪಿಗೆ ನೀಡಿದೆ.

ಪರಭಾಷಾ ಸ್ಟಾರ್ ಗಳೇ ಎಲ್ಲಿದ್ದೀರಾ...?: ಕರ್ನಾಟಕ ಪ್ರವಾಹದ ಕುರಿತು ಯುವರಾಜ್ ಕುಮಾರ್ ಪೋಸ್ಟ್ ವೈರಲ್
ಕರ್ನಾಟಕ ಪ್ರವಾಹಕ್ಕೆ ಸಂಬಂಧಿಸಿದಂತೆ ರಾಜ್ ಕುಟುಂಬದ ಕುಡಿ ನಟ ಯುವರಾಜ್ ಕುಮಾರ್ ಅವರು ಮಾಡಿರುವ ಫೇಸ್ ಬುಕ್ ಪೋಸ್ಟ್ ಇದೀಗ ವ್ಯಾಪಕ ವೈರಲ್ ಆಗಿದೆ.

