eye

ಕಣ್ಣಿಗೆ ಹಚ್ಚುವ Kajal ಕೇವಲ ಅಲಂಕಾರಕ್ಕಲ್ಲ; ಇಂದು ಮೇಕಪ್ನ ಭಾಗವಾಗಿರುವ ಕಾಜಲ್, ಒಂದು ಕಾಲದಲ್ಲಿ ಕಣ್ಣಿನ ಔಷಧವಾಗಿತ್ತು!
ಪ್ರಾಚೀನ ಈಜಿಪ್ಟ್ನ ಭೌಗೋಳಿಕ ಪರಿಸ್ಥಿತಿ ಅತ್ಯಂತ ಕಠಿಣವಾಗಿತ್ತು. ಎಲ್ಲೆಡೆ ಮರಳುಗಾಡು, ಬಿಸಿಲು, ಧೂಳು ಮತ್ತು ಮರಳಿನ ಕಣಗಳು ಸಾಮಾನ್ಯವಾಗಿದ್ದವು. ಜೊತೆಗೆ ನೈಲ್ ನದಿಯ ವಾರ್ಷಿಕ ಪ್ರವಾಹದಿಂದ ತೇವಾಂಶ ಹೆಚ್ಚಾಗಿ, ಬ್ಯಾಕ್ಟೀರಿಯಾ ಬೆಳೆಯಲು ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತಿತ್ತು.

ಮಾನಸಿಕ ಕಾಲಯಾನ: ಸ್ಮರಣೆ ಮತ್ತು ವಾಸ್ತವದ ಗಡಿಯನ್ನು ಮಸುಕಾಗಿಸುವ ಮೆದುಳಿನ ಅಸಾಧಾರಣ ಸಾಮರ್ಥ್ಯ (ವಿಜ್ಞಾನ ವಿಶೇಷ)
ವಿಜ್ಞಾನದಲ್ಲಿ ಈ ಅಪರೂಪದ ಸಾಮರ್ಥ್ಯವನ್ನು Hyperthymesia ಅಥವಾ Highly Superior Autobiographical Memory (HSAM) ಎಂದು ಕರೆಯಲಾಗುತ್ತದೆ.

ಪಟಾಕಿ ಹೊಡೆಯುವಾಗ ಅವಘಡ: 4 ಮಕ್ಕಳು ಸೇರಿ ಹಲವರಿಗೆ ಗಾಯ; ಮಿಂಟೋ ಆಸ್ಪತ್ರೆಯಲ್ಲಿ 20ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ
ಪಟಾಕಿ ಸಿಡಿತದಿಂದ ಗಾಯಗೊಂಲು ಮಿಂಟೋ ನೇತ್ರ ಆಸ್ಪತ್ರೆಗೆ ಸೋಮವಾರ 16 ಜನರು ಚಿಕಿತ್ಸೆ ಪಡೆದಿದ್ದಾರೆ. ಮಂಗಳವಾರ 4 ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.

ಬಿಸಿಲ ಝಳಕ್ಕೆ ಬಾಡದಿರಲಿ ನಯನಗಳು: ಬೇಸಿಗೆಯಲ್ಲಿ ಕಣ್ಣಿನ ರಕ್ಷಣೆ ಹೇಗೆ? ಇಲ್ಲಿವೆ ಉಪಯುಕ್ತ ಸಲಹೆಗಳು...
ಸುಡು ಬಿಸಿಲಿಗೆ ಕಣ್ಣುಗಳು ತೇವಾಂಶವನ್ನು ಕಳೆದುಕೊಂಡು ಮಡ್ರಾಸ್ ಐ, ಕಾಮಾಲೆ, ಕಣ್ಣನಲ್ಲಿ ನವೆ, ಅಲರ್ಜಿ, ಕಣ್ಣಿನಲ್ಲಿ ಆಗಾಗ ನೀರು ಸುರಿಯುತ್ತಲೇ ಇರುವುದು, ಕಿರಿಕಿರಿ ಅನುಭವ ಇಲ್ಲವೇ ಕಣ್ಣಿನೊಳಗೆ ಚುಚ್ಚಿದಂತಾಗುವುದು...ಹೀಗೆ ಹಲವು ರೀತಿಯ ಕಣ್ಣಿನ ಸಮಸ್ಯೆಗಳು ಎದುರಾಗುತ್ತವೆ.

ಕಣ್ಣಿನ ದೃಷ್ಟಿಯನ್ನೇ ಕಸಿದುಕೊಳ್ಳುವ ಡೇಂಜರ್ ಗ್ಲುಕೋಮಾ ಬಗ್ಗೆ ಎಷ್ಟು ಗೊತ್ತು?
ಇಂದಿನ ದಿನಗಳಲ್ಲಿ ಕಣ್ಣಿನ ಆರೋಗ್ಯ ಬಗ್ಗೆ ಜಾಗೃತೆ ವಹಿಸುವುದು ಅಗತ್ಯ. ದಿನಪೂರ್ತಿ ಮೊಬೈಲ್, ಲ್ಯಾಪ್ ಟಾಪ್/ ಕಂಪ್ಯೂಟರ್ ವೀಕ್ಷಿಸುವುದರಿಂದ ಕಣ್ಣಿನ ಸಮಸ್ಯೆ ಸಾಮಾನ್ಯವಾಗಿದೆ. ಲ್ಯಾಪ್ ಟಾಪ್/ ಕಂಪ್ಯೂಟರ್ ಮೂಲಕ ಕೆಲಸ ಮಾಡುವುದು ಅನಿವಾರ್ಯವಾದ ಕಾರಣ ಕಣ್ಣಿನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಾಗಿದೆ.

ಕಣ್ಣಿನ ಆರೋಗ್ಯ ಮತ್ತು ಉತ್ತಮ ದೃಷ್ಟಿಯನ್ನು ಕಾಪಾಡಿಕೊಳ್ಳುವುದು ಹೇಗೆ? 20-20-20 ನಿಯಮ ಅನುಸರಿಸಿ...
ನಮ್ಮ ದೇಹದಲ್ಲಿ ಹೆಚ್ಚು ಕೆಲಸ ಮಾಡುವ ಅಂಗಳಲ್ಲಿ ಪ್ರಮುಖವಾದದ್ದು ನಮ್ಮ ಕಣ್ಣು ಕೂಡ. ಮುಂಜಾನೆ ಎದ್ದಾಗಿನಿಂದ ಮತ್ತೆ ರಾತ್ರಿ ಮಲಗುವವರೆಗೂ ನಿರಂತರವಾಗಿ ಕಣ್ಣುಗಳು ಕೆಲಸ ಮಾಡುತ್ತಲೇ ಇರುತ್ತವೆ. ಹೀಗಾಗಿ, ನಮ್ಮ ಕಣ್ಣುಗಳ ಬಗ್ಗೆ ಕಾಳಜಿ ತೋರುವುದು ಮುಖ್ಯವಾಗುತ್ತದೆ.

ಬೇಸಿಗೆಯಲ್ಲಿ ಕಣ್ಣಿನ ರಕ್ಷಣೆ ಹೇಗೆ? ಇಲ್ಲಿದೆ ಉಪಯುಕ್ತ ಸಲಹೆಗಳು...
ಒಂದೆಡೆ ನೆತ್ತಿ ಸುಡುವ ಬಿಸಿಲು, ಮತ್ತೊಂದೆಡೆ ಧೂಳಿನ ಕಾಟ... ಬೇಸಿಗೆ ಬಂದರೆ ಸಾಕು ಮನೆಯಿಂದ ಹೊರಗೆ ಬರುವುದೇ ಎಂದೆನಿಸಿ ಬಿಡುತ್ತದೆ. ಬೇಸಿಗೆ ಬಂತೆಂದರೆ ಒಂದಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುವುದು ಸಾಮಾನ್ಯ. ಬಿರುಬೇಸಿಗೆಯಲ್ಲಿ ಹೆಚ್ಚುವ ಧೂಳಿನ ಪ್ರಮಾಣ ಕಣ್ಣಿನ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.

ಕ್ಯಾನ್ಸರ್ ನಿಂದ ಗುಣಮುಖಳಾದ 13 ವರ್ಷದ ಬಾಲಕಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೃತಕ ಕಣ್ಣು, ಮುಖದ ಭಾಗ ಜೋಡಣೆ
ಗರಿಮಾ ಕಾಳಿತಾ ಎಂಬ ಬಾಲಕಿಗೆ 1 ವರ್ಷ 9 ತಿಂಗಳು ಪುಟ್ಟ ಮಗುವಿದ್ದಾಗಲೇ ತಲೆ ಮತ್ತು ಕುತ್ತಿಗೆ ಕ್ಯಾನ್ಸರ್(fibromyxoid sarcoma) ಕಂಡುಬಂದಿತ್ತು. ನಗರದ ನಾರಾಯಣ ಹೆಲ್ತ್ ಸಿಟಿಯ ಮಜುಂದಾರ್ ಶಾ ಕ್ಯಾನ್ಸರ್ ವಿಭಾಗದಲ್ಲಿ ತಪಾಸಣೆ ಮಾಡಿಸಿದ್ದಾಗ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು.

ಕೋವಿಡ್-19 ಎಫೆಕ್ಟ್ : ವೆಚ್ಚ ತಗ್ಗಿಸಲು ಮೈಸೂರಿನತ್ತ ಕಣ್ಣು ಹಾಕಿದ ಬೆಂಗಳೂರಿನ ಐಟಿ / ಐಟಿಇಎಸ್ ಸಂಸ್ಥೆಗಳು
ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯ ಪರಿಣಾಮದಿಂದಾಗಿ ತಂತ್ರಜ್ಞಾನದ ಕಂಪನಿಗಳು ವೆಚ್ಚವನ್ನು ಕಡಿಮೆ ಮಾಡಲು ಎರಡನೇ ಹಂತದ ನಗರಗಳತ್ತ ದೃಷ್ಟಿ ಬೀರಿವೆ.

