English

ಕಾಕಿನಾಡ ಸರ್ಕಾರಿ ಶಾಲೆಗಳಲ್ಲಿ ಅಮೆರಿಕನ್ ಉಚ್ಚಾರಣೆಯಲ್ಲಿ ಇಂಗ್ಲಿಷ್ ಕಲಿಕೆ!
ಕಾಕಿನಾಡ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳಲ್ಲಿ ರೆಡಿನೆಸ್ ಇನಿಶಿಯೇಟಿವ್ ಫಾರ್ ಸಿಚುಯೇಷನಲ್ ಇಂಗ್ಲಿಷ್(ರೈಸ್) ಕಾರ್ಯಕ್ರಮವನ್ನು ಅಧಿಕೃತವಾಗಿ ಅನುಷ್ಠಾನಗೊಳಿಸುವ ಮಾದರಿಯನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ.

ಮಲಯಾಳಂ ಭಾಷೆ ಮಾತನಾಡದಂತೆ ಆದೇಶ: ಸುತ್ತೋಲೆ ಹಿಂಪಡೆದ ದೆಹಲಿಯ ಗೋವಿಂದ್ ಬಲ್ಲಬ್ ಪಂತ್ ಸಂಸ್ಥೆ
ಆಸ್ಪತ್ರೆಯ ನರ್ಸ್ ಗಳು ಕೇವಲ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾತ್ರ ಮಾತನಾಡಬೇಕು, ಮಲಯಾಳಂನಲ್ಲಿ ಸಂವಹನ ನಡೆಸಲೇ ಬಾರದು ಎಂದು ಆದೇಶ ಹೊರಡಿಸಿ ವಿವಾದವೆದ್ದ ಹಿನ್ನೆಲೆಯಲ್ಲಿ ದೆಹಲಿಯ ಗೋವಿಂದ್ ಬಲ್ಲಬ್ ಪಂತ್ ಸಂಸ್ಥೆ ಸುತ್ತೋಲೆಯನ್ನು ಹಿಂಪಡೆದಿದೆ.

ಇಂಗ್ಲೀಷ್ ತುಳು ಚಿತ್ರದ ಟ್ರೈಲರ್
ಅರವಿಂದ್ ಬೊಲಾರ್ ಮತ್ತು ನವ್ಯ ಪೂಜಾರಿ ಅಭಿನಯದ ಇಂಗ್ಲೀಷ್ ತುಳು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸೂರಜ್ ಶೆಟ್ಟಿ ನಿರ್ದೇಶಿಸಿದ್ದಾರೆ.

ಮೊನ್ನೆ ಗಣಿತ, ನಿನ್ನೆ ಇಂಗ್ಲೀಷ್: ಮತ್ತೆ ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ, ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಆತಂಕ
ಕಳೆದ ಬಾರಿಯ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಎಚ್ಚೆತ್ತು ಈ ಬಾರಿ ಯಾವುದೇ ಕಾರಣಕ್ಕೂ ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ನೋಡಿಕೊಳ್ಳವುದಾಗಿ ಶಿಕ್ಷಣ ಇಲಾಖೆ ನೀಡಿದ್ದ ಭರವಸೆ ಇದೀಗ ಹುಸಿಯಾಗಿದೆ. ಸತತವಾಗಿ ಗಣಿತ ಪ್ರಶ್ನೆಪತ್ರಿಕೆ ಬಳಿಕ ಇದೀಗ ಇಂಗ್ಲೀಷ್ ಪಶ್ನೆಪತ್ರಿಕೆ ಕೂಡ ಸೋರಿಕೆಯಾಗಿದ್ದು, ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಾಗಿದೆ.

ಕನ್ನಡದಲ್ಲಿ ಬೈಲಾಪ್ರತಿ ಸಲ್ಲಿಸದ ಬಿಬಿಎಂಪಿ: ಪಾಲಿಕೆ ವಿರುದ್ಧ ಹೈಕೋರ್ಟ್ ಕೆಂಡಾಮಂಡಲ
ನಗರ ವ್ಯಾಪ್ತಿಯಲ್ಲಿ ಎಲ್ಲಾ ಬಗೆಯ ಜಾಹೀರಾತು ನಿಷೇಧಿಸುವ ನಿಟ್ಟಿನಲ್ಲಿ ಅನುಮೋದನೆಗೊಳಿಸಿರುವ ಹೋರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಬೈಲಾ-2018ನ್ನು ಕನ್ನಡ ಭಾಷೆಯಲ್ಲಿ ಗೆಜೆಟ್ ಅಧಿಸೂಚನೆ ಹೊರಡಿಸುವುದಕ್ಕೆ ವಿಳಂಬವಾಗಲು ಕಾರಣರಾದ ಬಿಬಿಎಂಪಿ ವಿರುದ್ದ ಹೈಕೋರ್ಟ್ ಬುಧವಾರ ತೀವ್ರವಾಗಿ ಕೆಂಡಕಾರಿದೆ.

ಕ್ರಿಕೆಟರ್ ಬೆನ್ ಸ್ಟೋಕ್ಸ್ ತಂದೆಯಿಂದಲೇ ಅಣ್ಣ ಮತ್ತು ಸಹೋದರಿಯ ಕಗ್ಗೊಲೆ
ಇಂಗ್ಲೆಂಡ್ ಕ್ರಿಕೆಟರ್ ಬೆನ್ ಸ್ಟೋಕ್ಸ್ ಕುಟುಂಬದ ಭಯಾನಕ ರಹಸ್ಯವೊಂದು ಹೊರ ಬಿದ್ದಿದೆ. ತನ್ನ ಮಲ ಅಣ್ಣ ಮತ್ತು ಸಹೋದರಿಯನ್ನು ನನ್ನ ತಂದೆ ನಾನು ಹುಟ್ಟುವುದಕ್ಕೆ ಮೊದಲೇ ಕೊಲೆ ಮಾಡಿದ್ದರು.

'ಹಿಂದಿ ಅಥವಾ ಇಂಗ್ಲಿಷ್ ಮಾತ್ರ ಮಾತನಾಡಿ' ಸುತ್ತೋಲೆ ಹಿಂಪಡೆದ ದಕ್ಷಿಣ ರೈಲ್ವೆ
ತಮಿಳುನಾಡಿನಲ್ಲಿ ಪ್ರತಿಪಕ್ಷಗಳ ತೀವ್ರ ಪ್ರತಿಭಟನೆಯ ನಂತರ ಎಚ್ಚೆತ್ತುಕೊಂಡ ದಕ್ಷಿಣ ರೈಲ್ವೆ, ಅಧಿಕಾರಿಗಳು 'ಹಿಂದಿ ಅಥವಾ ಇಂಗ್ಲಿಷ್ ಮಾತ್ರ ಮಾತನಾಡಿ...

ಇಂಗ್ಲೀಷ್ ಅಥವಾ ಕನ್ನಡ, ಶೈಕ್ಷಣಿಕ ಮಾಧ್ಯಮ ಆಯ್ಕೆ ಪೋಷಕರಿಗೆ ಬಿಟ್ಟದ್ದು: ಕುಮಾರಸ್ವಾಮಿ
ಮುಂದಿನ ಶೈಕ್ಷಣಿಕ ವರ್ಷದಿಂದ 1,000 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಪ್ರಾರಂಭಿಸುವ ಕುರಿತು ಚರ್ಚೆಗಳು ನಡೆಯುತ್ತಿರುವ ನಡುವೆಯೇ ಮಕ್ಕಳು ಇಂಗ್ಲೀಷ್ ಅಥವಾ ಕನ್ನಡ, ಯಾವ ಮಾದ್ಯಮದಲ್ಲಿ....

ಬಿಬಿಎಂಪಿ ಶಾಲೆ ಮಕ್ಕಳಿಗೆ ಸದ್ಯದಲ್ಲಿ ಟ್ಯಾಬ್ ವಿತರಣೆ, ಇಂಗ್ಲಿಷ್ ಕಲಿಕೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಒಳಪಟ್ಟ ಶಾಲೆಗಳನ್ನು ರಾಜ್ಯ ಸರ್ಕಾರಿ ಮತ್ತು ಖಾಸಗಿ ಶಾಲೆಗಳ...

