engineer

6 ತಿಂಗಳ ಹಿಂದೆ ಮೃತಪಟ್ಟ ಇಂಜಿನಿಯರ್ ವರ್ಗಾವಣೆ: ನಗರಾಭಿವೃದ್ಧಿ ಇಲಾಖೆ ಎಡವಟ್ಟು
ನಗರಾಭಿವೃದ್ಧಿ ಇಲಾಖೆಯ ಕಿರಿಯ ಎಂಜಿನಿಯರ್ ಅಶೋಕ ಪುಟಪಾಕ್ ಅವರನ್ನು ಸೇಡಂ ಪುರಸಭೆಯಿಂದ ಕೊಡಗು ಜಿಲ್ಲೆಯ ಮಡಿಕೇರಿ ನಗರಸಭೆಯ ಕಿರಿಯ ಎಂಜಿನಿಯರ್ ಹುದ್ದೆಗೆ ವರ್ಗಾವಣೆ ಮಾಡಲಾಗಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ವಿಧಾನಸಭಾ ಕ್ಷೇತ್ರದಲ್ಲಿ ಈ ಎಡವಟ್ಟು ನಡೆದಿದೆ.

ಬೆಂಗಳೂರು: ಬ್ಯಾಗ್'ನಲ್ಲಿ ಬಾಂಬ್ ಇದೆ ಎಂದು ಆತಂಕ ಸೃಷ್ಟಿಸಿದ ವಿಮಾನ ಪ್ರಯಾಣಿಕನ ವಿರುದ್ಧ ಪ್ರಕರಣ ದಾಖಲು!
ಲಗೇಜ್ ತಪಾಸಣೆ ವೇಳೆ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ಹೇಳಿ ಪ್ರಯಾಣಿಕನೊಬ್ಬ ಆತಂಕ ಸೃಷ್ಟಿಸಿದ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಾರ್ಚ್ 28 ರಂದು ಈ ಘಟನೆ ನಡೆದಿದೆ.

ಬೆಂಗಳೂರು: ಮಳೆ ಅನಾಹುತ ತಡೆಗಾಗಿ ಪ್ರತಿ ವಾರ್ಡ್'ಗೆ ಎಂಜಿನಿಯರ್
ನಗರದಲ್ಲಿ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣಗಾಗಿ ಪ್ರತಿ ವಾರ್ಡ್ ಒಬ್ಬ ಎಂಜಿನಿಯರ್'ಗೆ ಜವಾಬ್ದಾರಿ ವಹಿಸಲು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ವಲಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ಬೆಂಗಳೂರು: ಕೆಲಸ ಕಳೆದುಕೊಂಡು ಅಂತರರಾಜ್ಯ ಕಳ್ಳನಾದ ಎಲೆಕ್ಟ್ರಾನಿಕ್ಸ್ ಇಂಜಿನಿಯರ್ ಬಂಧನ!
ಎರಡು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ 37 ವರ್ಷದ ಎಲೆಕ್ಟ್ರಾನಿಕ್ಸ್ ಇಂಜಿನಿಯರ್ ಒಬ್ಬನನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಈತನಿಂದ ಸುಮಾರು 29 ಲಕ್ಷ ಮೌಲ್ಯದ ಕದ್ದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಟೆಂಡರ್ ಆಹ್ವಾನಿಸದೆ ಕೆಲಸ ಮಾಡಿಸಿದ್ದ ಪ್ರಕರಣ: ಹೈಕೋರ್ಟ್ ಚಾಟಿ ಬಳಿಕ ಎಂಜಿನಿಯರ್ ವಿರುದ್ಧ ಕ್ರಮಕ್ಕೆ ಸರ್ಕಾರ ಮುಂದು!
ಕೋವಿಡ್ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಲಾಕ್‍ಡೌನ್ ಜಾರಿಯಲ್ಲಿದ್ದಾಗ ಟೆಂಡರ್ ಆಹ್ವಾನಿಸದೇ 5.02 ಕೋಟಿ ರೂ.ಮೊತ್ತದ ಕಾರ್ಯಾದೇಶ ನೀಡಿ ಗುತ್ತಿಗೆದಾರರಿಂದ ಕೆಲಸ ಮಾಡಿಸಿದ್ದ ಕಾರ್ಯಕಾರಿ ಎಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.

ಪಂಪ್‌ಹೌಸ್‌ಗೆ ವಿದ್ಯುತ್ ಕಡಿತಗೊಳಿಸಿ ಪ್ರವಾಹದ ನಡುವೆ ಜೀವಗಳನ್ನು ಉಳಿಸಿದ ಕರ್ನಾಟಕದ ಇಂಜಿನಿಯರ್!
ಕಳೆದ ವಾರಾಂತ್ಯದಲ್ಲಿ ಶಿಂಷಾ ನದಿಯಲ್ಲಿ ನೀರು ಹೆಚ್ಚಾಗುತ್ತಿದ್ದಂತೆ ಮಂಡ್ಯ ಜಿಲ್ಲೆಯ ತೊರೈಕಾಡನಹಳ್ಳಿ (ಟಿ.ಕೆ.ಹಳ್ಳಿ) ಪಂಪ್‌ಹೌಸ್‌ನಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಮತ್ತು ಅವರ ತಂಡ ಕೈಗೊಂಡ ತ್ವರಿತ ಮತ್ತು ನಿರ್ಣಾಯಕ ನಿರ್ಧಾರದಿಂದ ಹಲವಾರು ಜೀವಗಳು ಮತ್ತು ಕೋಟ್ಯಂತರ ರೂಪಾಯಿ ಮೌಲ್ಯದ ಉಪಕರಣಗಳು ಉಳಿದಿವೆ.

ತುಮಕೂರು: ಪತ್ನಿ -ಪುತ್ರಿಯೊಂದಿಗೆ ಹೇಮಾವತಿ ನಾಲೆಗೆ ಹಾರಿ ಎಂಜಿನೀಯರ್ ಆತ್ಮಹತ್ಯೆ
ಹೇಮಾವತಿ ನಾಲಾ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಪತ್ನಿ, ಪುತ್ರಿಯೊಂದಿಗೆ ನಾಲೆಗೆ ಹಾರಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ.

ರೈತನಾಗಿ ಬದಲಾದ ಜಾರ್ಖಂಡ್ ಎಂಜಿನಿಯರ್ ಯಶೋಗಾಥೆ: ಸಾವಯವ ಕೃಷಿ ಮೂಲಕ ರೈತರ ಆದಾಯ ದುಪ್ಪಟ್ಟು!
ಲಕ್ಷಗಟ್ಟಲೆ ವೇತನದ ಉದ್ಯೋಗ ತೊರೆದು ಸಮುದಾಯ ಕೃಷಿಯನ್ನು ಆರಂಭಿಸಿ 80ಕ್ಕೂ ಹೆಚ್ಚು ರೈತರಿಗೆ ಸಹಾಯ ಮಾಡುತ್ತಿದ್ದಾರೆ ಈ 30 ವರ್ಷದ ಎಂಜಿನಿಯರಿಂಗ್ ಪದವೀಧರ ರಾಕೇಶ್ ಮಹಂತಿ.

ವಾಮಾಚಾರ ಮಾಡಿರುವ ಶಂಕೆ: ವೃದ್ಧನ ಮೇಲೆ ಹಲ್ಲೆ ನಡೆಸಿದ ಎಂಜಿನಿಯರ್ ಯುವಕ
ಆರೋಪಿ ಸುಧಾಂಶು ಕಳೆದ ಹಲವು ತಿಂಗಳುಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ. ಹೊಟ್ಟೆನೋವಿಗೆ ನಾರಾಯಣ್ ಎಂಬ ವ್ಯಕ್ತಿ ಮಾಡಿಸಿದ ವಾಮಾಚಾರವೇ ಕಾರಣ ಎಂದು ಆತ ನಂಬಿದ್ದ.

