elephant

ರಾಜ್ಯದಲ್ಲಿ ಆನೆಗಳ ಗಣತಿಯಲ್ಲಿ ಹೆಚ್ಚಳ: ಹುಷಾರು... ಅರಣ್ಯ ಪ್ರದೇಶಗಳ ಹೊರಗೆ ಅಡ್ಡಾಡುತ್ತಿವೆ 400 ಆನೆಗಳು!
ಆನೆ-ಹುಲಿಗಳು ಹೆಚ್ಚಾಗಿರುವ ರಾಜ್ಯವೆಂಬ ಹೆಗ್ಗಳಲಿಕೆ ಪಾತ್ರವಾಗಿರುವ ಕರ್ನಾಟಕದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಬಳಿಕ ಮಾನವ-ಪ್ರಾಣಿ ಸಂಘರ್ಷ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳಗಳು ಕಂಡು ಬಂದಿದೆ.

ಸಕಲೇಶಪುರ: ಆನೆ ತುಳಿದು ರೈತ ಸಾವು
ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ಆನೆಯೊಂದು ರೈತನನ್ನು ತುಳಿದು ಕೊಂದುಹಾಕಿದ ಘಟನೆ ನಡೆದಿದೆ.

ಗಾಯಗೊಂಡ ಆನೆ ಮರಿ ನೋಡಿ ಮರುಗಿದ ರಾಹುಲ್ ಗಾಂಧಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ!
ಭಾರತ್ ಜೋಡೋ ಯಾತ್ರೆಗೆ ವಿರಾಮ ನೀಡಿರುವ ಕಾರಣದಿಂದ ರಾಹುಲ್ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ನಾಗರಹೊಳೆಯಲ್ಲಿ ಮಂಗಳವಾರ ಸಫಾರಿಗೆ ತೆರಳಿದ್ದರು

ಬೆಳಗಾವಿ: ಆನೆಗಳ ಆಹಾರಕ್ಕಾಗಿ ರೈತರ ಕಬ್ಬು ಕದಿಯುತ್ತಿರುವ ಕರ್ನಾಟಕದ ಅರಣ್ಯ ಇಲಾಖೆ ಅಧಿಕಾರಿಗಳು!
ಗಜಪಡೆಗಳ ಹೊಟ್ಟೆ ತುಂಬಲು ಅರಣ್ಯ ಇಲಾಖೆ ಸಿಬ್ಬಂದಿ ರೈತರು ಬೆಳೆದ ಕಬ್ಬಿನ ಬೆಳೆಯನ್ನು ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ. ಬುಧವಾರ ಮುಂಜಾನೆ ಬೆಳಗಾವಿ ತಾಲೂಕಿನ ಮುತಗಾ ಗ್ರಾಮದ ಕಬ್ಬು ರೈತರೊಬ್ಬರ ಹೊಲಕ್ಕೆ ನುಗ್ಗಿ 5 ಕ್ವಿಂಟಾಲ್‌ನಷ್ಟು ಬೆಳೆಯನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ರೈತರು ದೂರಿದ್ದಾರೆ

ಆನೆಗಳನ್ನು ಆತಂಕವಾದಿಯಂತೆ ಬಿಂಬಿಸಬೇಡಿ: ಹಿಂದಿ ಮಾಧ್ಯಮಗಳಿಗೆ ಪರಿಸರ ಮತ್ತು ಅರಣ್ಯ ಇಲಾಖೆ ಸೂಚನೆ
ಆನೆಗಳ ಬಗ್ಗೆ ಕೆಟ್ಟ ಭಾವನೆ ಮೂಡುವಂತೆ ಬರೆಯುವುದರಿಂದ ಸಾರ್ವಜನಿಕರಲ್ಲಿ ಆನೆಗಳ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತಿದೆ ಎಂದು ವನ್ಯಜೀವಿ ತಜ್ಞರು ಈ ಹಿಂದೆ ಆತಂಕ ವ್ಯಕ್ತಪಡಿಸಿದ್ದರು.

ಕಾಲುವೆಯಲ್ಲಿ ಮುಳುಗಿಹೋಗುತ್ತಿದ್ದ 8 ತಿಂಗಳ ಮರಿಯಾನೆ ಕಣ್ಣನ್ ಈಗ ಪ್ರವಾಸಿಗರ ಕಣ್ಮಣಿ
ಕಾಲುವೆಯಿಂದ ರಕ್ಷಿಸಲ್ಪಟ್ಟ ಮರಿಯಾನೆ ಗುಂಪಿನಿಂದ ಬೇರೆಯಾಗಿದೆ ಎಂದು ತಿಳಿದು ಅದರ ಗುಂಪಿನೊಡನೆ ಸೇರಿಸಲು ಅರಣ್ಯ ಇಲಾಖೆ ಪ್ರಯತ್ನ ಪಟ್ಟಿತ್ತು.

ರಾಮನಗರ: ವಿದ್ಯುತ್ ಸ್ಪರ್ಶಿಸಿ ಒಂಟಿ ಸಲಗ ಸಾವು
ಗಣೇಶ ಚತುರ್ಥಿ ಹಬ್ಬದಂದೇ ಆನೆಯೊಂದು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ನಡೆದಿದೆ.

ಸಿಎಂ ಹುದ್ದೆ ಅಂಬಾರಿ ಹೊರುವ ಆನೆ ಇದ್ದಂತೆ, ಅದೇನು ಶಾಶ್ವತವಲ್ಲ: ಯೋಗೇಶ್ವರ್
ಮುಖ್ಯಮಂತ್ರಿ ಹುದ್ದೆ ಮೈಸೂರು ದಸರಾ ಅಂಬಾರಿ ಹೊರುವ ಆನೆಯಿದ್ದಂತೆ ಅದೇನು ಶಾಶ್ವತ ಅಲ್ಲ ಅಂಬಾರಿಯನ್ನು ತಾಯಿ ಚಾಮುಂಡೇಶ್ವರಿಯನ್ನು ನಾವು ಗೌರವಿಸುತ್ತೇವೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ಮಾರ್ಮಿಕವಾಗಿ ಹೇಳಿದ್ದಾರೆ.

'ದಚ್ಚು' ಮನವಿಗೆ ಸ್ಪಂದಿಸಿದ ರಿಯಲ್ ಸ್ಟಾರ್; ಆಫ್ರಿಕನ್ ಆನೆ ದತ್ತು ಪಡೆದ ಉಪೇಂದ್ರ
ಮೃಗಾಲಯದಲ್ಲಿರುವ ಪ್ರಾಣಿ,ಪಕ್ಷಿಗಳನ್ನು ದತ್ತು ಪಡೆಯಲು ನಟ ದರ್ಶನ್ ಅವರು ಕರೆ ನೀಡಿದ ಬೆನ್ನಲ್ಲೇ ನಟ ಉಪೇಂದ್ರ, ಮೈಸೂರು ಮೃಗಾಲಯದಲ್ಲಿನ ಆಫ್ರಿಕನ್ ಆನೆಯೊಂದನ್ನು ದತ್ತು ಪಡೆದಿದ್ದಾರೆ.

