Election

ಮುಂಬರುವ ಉತ್ತರಪ್ರದೇಶ, ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್'ಪಿಯಿಂದ ಏಕಾಂಗಿ ಸ್ಪರ್ಧೆ: ಮಾಯಾವತಿ ಸ್ಪಷ್ಟನೆ
ಉತ್ತರಪ್ರದೇಶ ಮತ್ತು ಉತ್ತರಾಖಂಡ ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ ಏಕಾಂಗಿಯಾಗಿ ಸ್ಪರ್ಧೆಗಿಳಿಯಲಿದೆ ಎಂದು ಬಿಎಸ್'ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿಯವರು ಹೇಳಿದ್ದಾರೆ.

ವಾಸ್ತವ ಅರಿಯದಿದ್ದರೆ ಪಾಠ ಕಲಿಯಲು ಸಾಧ್ಯವಿಲ್ಲ ಎಂದ ಸೋನಿಯಾ ಗಾಂಧಿ: ಚುನಾವಣೆ ಸೋಲಿನ ಪರಾಮರ್ಶೆಗೆ 'ತಂಡ' ರಚನೆಗೆ ಒಲವು
ಇತ್ತೀಚೆಗೆ ನಡೆದ ಕೇರಳ, ಅಸ್ಸಾಂ ವಿಧಾನಸಭೆ ಚುನಾವಣೆಗಳಲ್ಲಿ ಆಗ ಇದ್ದ ಸರ್ಕಾರವನ್ನು ಹೊರಹಾಕಲು ಕಾಂಗ್ರೆಸ್ ಏಕೆ ವಿಫಲವಾಯಿತು, ಪಶ್ಚಿಮ ಬಂಗಾಳದಲ್ಲಿ ಖಾತೆ ತೆರೆಯಲು ಸಂಪೂರ್ಣವಾಗಿ ಏಕೆ ವಿಫಲವಾದೆವು ಎಂದು ನಾವು ಈ ಸಂದರ್ಭದಲ್ಲಿ ಖಂಡಿತವಾಗಿಯೂ ಅರ್ಥಮಾಡಿಕೊಳ್ಳಬೇಕಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ರಾಜಕೀಯ ಭಿನ್ನಾಭಿಪ್ರಾಯ ಮೀರಿ ಕೋವಿಡ್ ವಿರುದ್ಧ ಹೋರಾಡಬೇಕಿದೆ, ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆ ಕಳಪೆ: ಸೋನಿಯಾ ಗಾಂಧಿ
ಕೋವಿಡ್-19 ಸೋಂಕಿನ ವಿರುದ್ಧದ ಹೋರಾಟವು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿದ್ದಾಗಿದ್ದು, ಎಲ್ಲರೂ ರಾಷ್ಟ್ರಮಟ್ಟದಲ್ಲಿ ಒಟ್ಟಾಗಿ ಹೋರಾಡಬೇಕಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಶುಕ್ರವಾರ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ (ಸಿಪಿಪಿ) ಹೇಳಿದ್ದಾರೆ.

ಸೋಲುಗಳು ಜೀವನದ ಒಂದು ಭಾಗ, ಇಂತಹ ಸೋಲುಗಳನ್ನು ಜೀವನದಲ್ಲಿ ಬಹಳ ನೋಡಿದ್ದೇನೆ: ಕೆ.ಅಣ್ಣಾಮಲೈ
ಸೋಲುಗಳು ಜೀವನದ ಒಂದು ಭಾಗ. ಇಂತಹ ಸೋಲುಗಳನ್ನ ಜೀವನದಲ್ಲಿ ನಾನು ಬಹಳ ನೋಡಿದ್ದೇನೆಂದು ತಮಿಳುನಾಡಿನ ಅರವಕುರುಚಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿರುವ ಅಣ್ಣಾಮಲೈ ಅವರು ಹೇಳಿದ್ದಾರೆ.

ತಮಿಳುನಾಡು: ಭಾನುವಾರ ಮತ ಎಣಿಕೆ, ಸಂಭ್ರಮಾಚರಣೆ ಬೇಡ; ಪಕ್ಷದ ಕಾರ್ಯಕರ್ತರಲ್ಲಿ ಸ್ಟಾಲಿನ್ ಮನವಿ
ಮೇ 2 ರಂದು ನಡೆಯಲಿರುವ ಮತ ಎಣಿಕೆ ಕೇಂದ್ರಗಳ ಬಳಿ ಹೆಚ್ಚಿನ ಜನ ಸೇರದಂತೆ ಅಥವಾ ಎಲ್ಲಿಯೂ ಸಂಭ್ರಮಾಚರಣೆ ಮಾಡದಂತೆ ಪಕ್ಷದ ಅಧ್ಯಕ್ಷ ಎಂ. ಕೆ. ಸ್ಟಾಲಿನ್ ಕಾರ್ಯಕರ್ತರಲ್ಲಿ ಶುಕ್ರವಾರ ಮನವಿ ಮಾಡಿದ್ದಾರೆ.

ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ವಿಳಂಬವಾಗುವುದಿಲ್ಲ: ಚುನಾವಣಾ ಆಯೋಗ
ಮೇ ತಿಂಗಳ ಅಂತ್ಯಕ್ಕೆ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರ ಮುಗಿಯಲಿದ್ದು, ಚುನಾವಣೆ ನಡೆಯಲಿದೆಯೋ ಇಲ್ಲವೋ ಎಂಬ ಅನುಮಾನ ಎಲ್ಲರನ್ನು ಕಾಡುತ್ತಿದೆ.

ಕೊರೋನಾ ಉಲ್ಬಣದ ನಡುವೆ ಒಕ್ಕಲಿಗರ ಸಂಘ, ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ: ಸದಸ್ಯರಲ್ಲಿ ಆತಂಕ
ಒಕ್ಕಲಿಗರ ಸಂಘಕ್ಕೆ ಮುಂದಿನ ತಿಂಗಳು ಚುನಾವಣೆ ನಡೆಯಲಿದ್ದು ಸಂಘವು ಸೋಮವಾರ ತನ್ನ ವೆಬ್‌ಸೈಟ್‌ನಲ್ಲಿ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ. ಅಲ್ಲದೆ ಮತದಾರರ ಗುರುತಿನ ಚೀಟಿಗಳನ್ನು ಸಂಗ್ರಹಿಸುವಂತೆ ಮತದಾರರನ್ನು ಮನವಿ ಮಾಡಿದೆ. ಆದರೆ ಕೋವಿಡ್ ಸೋಂಕು ತಾರಕ್ಕೇರಿರುವ ಈ ಸಮಯದಲ್ಲಿ ಸಂಘವು ತನ್ನ ಮೇ 16 ರ ಚುನಾವಣೆಯನ್ನು ಹೇಗೆ ನಡೆಸಲಿದೆ ಎನ್ನುವುದು ಪ್ರಶ್ನೆಯಾಗಿ

ಬಿಎಸ್'ವೈ ಗುರಿ ಎಂದಿಗೂ ತಪ್ಪಿಲ್ಲ, 2023 ಚುನಾವಣೆಯಲ್ಲಿ 130 ಸೀಟು ಗೆಲ್ಲುವುದು ಖಚಿತ: ಬಿ.ವೈ.ವಿಜಯೇಂದ್ರ ವಿಶ್ವಾಸ
ಮಹಾಮಾರಿ ಕೊರೋನಾ ಆತಂಕದ ನಡುವೆಯೇ ಉಪಚುನಾವಣೆಗೆ ಮೂರು ಪಕ್ಷಗಳ ಪ್ರಚಾರ ಕಾರ್ಯ ಬಿರುಸಿನಿಂದ ಸಾಗಿದ್ದು, ಈ ಬಾರಿಯ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿದ್ದಾರೆ.

ಪಶ್ಚಿಮ ಬಂಗಾಳ: ನಾಳೆ 44 ಕ್ಷೇತ್ರಗಳಲ್ಲಿ ನಾಲ್ಕನೇ ಹಂತದ ಮತದಾನ
ಪಶ್ಚಿಮ ಬಂಗಾಳ ವಿಧಾನಸಭೆಯ 44 ಕ್ಷೇತ್ರಗಳಲ್ಲಿ ನಾಳೆ ನಾಲ್ಕನೇ ಹಂತದ ಮತದಾನ ನಡೆಯಲಿದೆ. ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಮತ್ತು ಪಶ್ಚಿಮ ಬಂಗಾಳದ ಸಚಿವರಾದ ಪಾರ್ಥ ಚಟರ್ಜಿ, ಅನೂಪ್ ಬಿಸ್ವಾಸ್ ಸೇರಿದಂತೆ ಹಲವು ಮುಖಂಡರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

