Election Commission

ಅನುಮತಿ ಇಲ್ಲದೇ ರೋಡ್ ಶೋ: ಹಾರ್ದಿಕ್ ಪಟೇಲ್ ವಿರುದ್ಧ 2 ಎಫ್ ಐಆರ್
ಗುಜರಾತ್ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಅಹ್ಮದಾಬಾದ್ ಪೊಲೀಸರು ಪಟೇಲ್ ಸಮುದಾಯದ ಹೋರಾಟಗಾರ ಹಾರ್ದಿಕ್ ಪಟೇಲ್ ಗೆ ಶಾಕ್ ನೀಡಿದ್ದು, 2 ಪ್ರತ್ಯೇಕ ಎಫ್ ಐಆರ್ ದಾಖಲಿಸಿದ್ದಾರೆ.

ಜಯಾ ವಿಡಿಯೋ ಪ್ರಸಾರ ನಿಲ್ಲಿಸಿ: ಸುದ್ದಿವಾಹಿನಿಗಳಿಗೆ ಚುನಾವಣಾ ಆಯೋಗ!
ಟಿಟಿವಿ ದಿನಕರನ್ ಬಣ ಬಿಡುಗಡೆ ಮಾಡಿರುವ ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ವಿಡಿಯೋ ಪ್ರಸಾರ ಮಾಡದಂತೆ ಎಲ್ಲ ಸುದ್ದಿವಾಹಿನಿಗಳಿಗೆ ಮತ್ತು ಸುದ್ದಿ ಪತ್ರಿಕೆಗಳಿಗೆ ಚುನಾವಣಾ ಆಯೋಗ ಪತ್ರದ ಮೂಲಕ ಮನವಿ ಮಾಡಿಕೊಂಡಿದೆ.

ಗೆಲ್ಲದೇ ಇರಬಹುದು, ಆದರೆ ಬಿಜೆಪಿಗೆ ಪ್ರಬಲ ಹೊಡೆತ ನೀಡಿದ್ದೇವೆ: ರಾಹುಲ್ ಗಾಂಧಿ
ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲದೇ ಇರಬಹುದು. ಆದರೆ ಬಿಜೆಪಿ ಪಕ್ಷಕ್ಕೆ ಮರೆಯಲಾಗದ ಪ್ರಬಲ ಹೊಡೆತ ನೀಡಿದ್ದೇವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಗೆಲುವಿನ ಟ್ರ್ಯಾಕ್ ಗೆ ಮರಳಿದ ಬಿಜೆಪಿ: ಸೆನ್ಸೆಕ್ಸ್ 290 ಅಂಕಗಳ ಏರಿಕೆ!
ತೀವ್ರ ಕುತೂಹಲ ಕೆರಳಿಸಿದ್ದ ಗುಜರಾತ್ ಚುನಾವಣಾ ಫಲಿತಾಂಶ ಭಾರತೀಯ ಷೇರುಮಾರುಕಟ್ಟೆ ಮೇಲೂ ಪರಿಣಾಮ ಬೀರಿದ್ದು, ಬೆಳಗ್ಗೆ ಕುಸಿತಕಂಡಿದ್ದ ಷೇರುಮಾರುಕಟ್ಟೆ ಇದೀಗ ಚೇತರಿಕೆಯತ್ತ ಮುಖಮಾಡಿದೆ.

ಗುಜರಾತ್ ಚುನಾವಣೆ: ಬಿಜೆಪಿಗೆ ಪ್ರಬಲ ಹೋರಾಟ ನೀಡಿದ್ದಕ್ಕೆ ರಾಹುಲ್ ಗೆ ಶಿವ ಸೇನೆ ಮೆಚ್ಚುಗೆ!
ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ನಾಯಕತ್ವವನ್ನು ಎನ್ ಡಿಎ ಮೈತ್ರಿಕೂಟದ ಮಿತ್ರಪಕ್ಷ ಶಿವಸೇನೆ ಮುಕ್ತಕಂಠದಿಂದ ಶ್ಲಾಘಿಸಿದ್ದು, ರಾಹುಲ್ ಗಾಂಧಿ ಉತ್ಸಾಹಿ ನಾಯಕರಾಗಿದ್ದು, ಗುಜರಾತ್ ನಲ್ಲಿ ಪಕ್ಷವನ್ನು ಉತ್ತಮವಾಗಿ ಮುನ್ನಡೆಸಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.

ಷೇರು ಮಾರುಕಟ್ಟೆ ಮೇಲೆ ಗುಜರಾತ್ ಚುನಾವಣಾ ಫಲಿತಾಂಶ ಪರಿಣಾಮ: ಸೆನ್ಸೆಕ್ಸ್ 600 ಅಂಕ ಇಳಿಕೆ!
ಗುಜರಾತ್ ವಿಧಾನಸಭಾ ಚುನಾವಣಾ ಫಲಿತಾಂಶ ಭಾರತೀಯ ಷೇರು ಮಾರುಕಟ್ಟೆ ಮೇಲೂ ಗಂಭೀರ ಪರಿಣಾಮ ಬೀರಿದ್ದು, ಮಾರುಕಟ್ಟೆ ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ ಬರೊಬ್ಬರಿ 600 ಅಂಕಗಳ ಇಳಿಕೆ ಕಂಡಿದೆ.

ಗುಜರಾತ್ ನಲ್ಲಿ ಬಿಜೆಪಿಗೆ ಮುನ್ನಡೆ: ಚುನಾವಣಾ ಆಯೋಗ
ತೀವ್ರ ಕುತೂಹಲ ಕೆರಳಿಸಿರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಮುನ್ನಡೆ ಸಾಧಿಸಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗುಜರಾತ್- ಹಿಮಾಚಲ ಪ್ರದೇಶ ಚುನಾವಣೆ: ಮತ ಎಣಿಕೆ ಆರಂಭ
ಬಹು ನಿರೀಕ್ಷಿತ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣಾ ಮತಎಣಿಕೆ ಕಾರ್ಯ ಆರಂಭವಾಗಿದ್ದು, ಆರಂಭಿಕ ಹಂತದಲ್ಲಿ ಅಂಚೆಗಳ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಗುಜರಾತ್ ನಲ್ಲಿ ಆಡಳಿತಾರೂಢ ಬಿಜೆಪಿ ಆರಂಭಿಕ ಮುನ್ನಡೆ ಸಾಧಿಸಿದೆ,

ಮತಯಂತ್ರ ತಿರುಚಲು 140 ಎಂಜಿನಿಯರ್ ಗಳ ನೇಮಕ: ಬಿಜೆಪಿ ವಿರುದ್ಧ ಹಾರ್ದಿಕ್ ಪಟೇಲ್ ಆರೋಪ
ಗುಜರಾತ್ ಚುನಾವಣೆಯಲ್ಲಿ ಮತಯಂತ್ರಗಳು ತಿರುಚಲು ಬಿಜೆಪಿ ಪಕ್ಷ 140 ಎಂಜಿನಿಯರ್ ಗಳ ನೇಮಕ ಮಾಡಿದೆ ಎಂದು ಪಾಟಿದಾರ್ ಹೋರಾಟದ ಮುಖಂಡ ಹಾರ್ದಿಕ್ ಪಟೇಲ್ ಆರೋಪಿಸಿದ್ದಾರೆ.

