education

ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸರ್ಕಾರದಿಂದ ಎಲ್ಲಾ ನೆರವು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
ಕೋವಿಡ್ -19 ಸಾಂಕ್ರಾಮಿಕ ಕಾಯಿಲೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಡಕಾಗಿರುವ ಹಿನ್ನೆಲೆಯಲ್ಲಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ಸರ್ಕಾರ ಎಲ್ಲಾ ರೀತಿಯ ನೆರವು ಒದಗಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಈ ವರ್ಷ ಉದ್ಯೋಗ, ಶಿಕ್ಷಣದಲ್ಲಿ ಮರಾಠ ಮೀಸಲಾತಿ ಇಲ್ಲ, ಮಹಾ ಕಾನೂನಿನ ವಿಚಾರಣೆ ಉನ್ನತ ಪೀಠಕ್ಕೆ: ಸುಪ್ರೀಂ ಕೋರ್ಟ್
ಈ ವರ್ಷ ಮಹಾರಾಷ್ಟ್ರದಲ್ಲಿ ಉದ್ಯೋಗ ಶಿಕ್ಷಣದಕ್ಕೆ ಮರಾಠ ಮೀಸಲಾತಿ ಅನ್ವಯಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.

ಶಾಲೆಗಳ ಪುನರಾರಂಭಕ್ಕೆ ಸರ್ಕಾರದ ಬಳಿ ಸೂಕ್ತ ರೋಡ್ ಮ್ಯಾಪ್ ಇದೆ: ವಿಪಕ್ಷಗಳ ಟೀಕೆಗೆ ಸಚಿವ ಸುರೇಶ್ ಕುಮಾರ್ ಕಿಡಿ
ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಸಹಾಯ ಮಾಡಲು, ಶಾಲೆಗಳ ಪುನರಾರಂಭಿಸಲು ಸರ್ಕಾರದ ಬಳಿ ಸೂಕ್ತ ರೋಡ್ ಮ್ಯಾಪ್ ಇಲ್ಲ ಎಂಬ ವಿರೋಧ ಪಕ್ಷಗಳ ಆರೋಪದ ವಿರುದ್ಧ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕಿಡಿಕಾರಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ ಗುರಿ ತಲುಪಲು 'ಟಾರ್ಗೆಟ್ 2030': ಡಾ. ಸಿ.ಎನ್. ಅಶ್ವತ್ಥ ನಾರಾಯಣ
ಬರುವ 2030ರ ವೇಳೆಗೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ನಿಗದಿ ಮಾಡಲಾಗಿರುವ ಎಲ್ಲ ಗುರಿಗಳನ್ನು ಸಂಪೂರ್ಣವಾಗಿ ಸಾಧಿಸಲು ಹೆಜ್ಜೆ ಇಟ್ಟಿರುವ ರಾಜ್ಯ ಸರಕಾರ, ಮುಂದಿನ ಮೂರು ವರ್ಷಗಳಲ್ಲಿ 6 ಸಂಶೋಧನೆ ಮತ್ತು 10 ಬೋಧನಾ ಕೇಂದ್ರಿತ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಜತೆಗೆ 34 ಸ್ವಾಯತ್ತ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಉದ್ದೇಶಿಸಿದೆ.

ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದುತ್ತಿರುವ ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳ ಸಂಖ್ಯೆ ಶೇ.50ರಷ್ಟು ಮಾತ್ರ!
ಕಳೆದ ವರ್ಷಕ್ಕೆ ಹೋಲಿಸಿದರೆ ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಹೋಲಿಸಿದರೆ ಈ ವರ್ಷ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳ ಸಾಧನೆ ಕಳಪೆಯಾಗಿದೆ.

ಆನ್‌ಲೈನ್ ತರಗತಿ ಮರೆತುಬಿಡಿ: ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಶಿಕ್ಷಣ ತಲುಪಿಸುವ ಶಿಕ್ಷಕರು!
ಜಿಲ್ಲೆಯ ನಾಲ್ಕು ಸರ್ಕಾರಿ ಶಾಲೆಗಳು ಶಿಕ್ಷಣವನ್ನು ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪಿಸುವ ಹೊಸ ಪ್ರಯತ್ನವನ್ನು ಪ್ರಾರಂಭಿಸಿವೆ. ಕಮಲಾಪುರ ತಾಲೂಕಿನ ನೀಲಾಖೇಡ್, ಪಾಟವಾಡ್, ಕಾಟೊಲಿ ಮತ್ತು ಒಕಾಲಿ ಗ್ರಾಮದ ಸರ್ಕಾರಿ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಮನೆ ಬಾಗಿಲಿನಲ್ಲಿ ಕಲಿಯುವ ಹೊಸ ಕಾರ್ಯಕ್ರಮವನ್ನು ಪರಿಚಯಿಸಿದ್ದಾರೆ.

ಪರೀಕ್ಷೆಯೇನೋ ರದ್ದಾಗಿದೆ, ಆದರೆ ಮುಂದೇನು?, ಸಿಬಿಎಸ್ ಇ, ಐಸಿಎಸ್ಇ ಮಕ್ಕಳನ್ನು ಕಾಡುತ್ತಿದೆ ಹತ್ತಾರು ಪ್ರಶ್ನೆಗಳು
ದೇಶಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ 10 ಮತ್ತು 12ನೇ ತರಗತಿಯ ಉಳಿದ ಪರೀಕ್ಷೆಗಳನ್ನು ಸಿಬಿಎಸ್ ಇ ಮತ್ತು ಐಸಿಎಸ್ಇ ಮಂಡಳಿಗಳು ರದ್ದು ಪಡಿಸಿವೆ.

ರಾಜ್ಯ ಸರ್ಕಾರ ಆದೇಶ ನೀಡದಿದ್ದರೂ, ಆನ್'ಲೈನ್ ತರಗತಿ ಆರಂಭಿಸಿರುವ ಹಲವು ಖಾಸಗಿ ಶಾಲೆಗಳು
5ನೇ ತರಗತಿಯವರೆಗೂ ಆನ್'ಲೈನ್ ತರಗತಿ ನಡೆಸಬಾರದು ಎಂದು ಸರ್ಕಾರವೇ ಆದೇಶ ನೀಡಿದ್ದರೂ, ನಗರದಲ್ಲಿರುವ ಹಲವು ಖಾಸಗಿ ಶಾಲೆಗಳು ಆನ್'ಲೈನ್ ನಲ್ಲಿ ತರಗತಿಗಳು ಆರಂಭಿಸಿರುವ ಬೆಳವಣಿಗೆಗಳು ಕಂಡು ಬರುತ್ತಿವೆ.

ಪರ್ಯಾಯ ಶಿಕ್ಷಣ ವಿಧಾನದತ್ತ ಶಿಕ್ಷಣ ಇಲಾಖೆ ದೃಷ್ಟಿ: 3 ಶೈಕ್ಷಣಿಕ ವಾಹಿನಿ ತೆರೆಯಲು ಅನುಮತಿ ಕೋರಿ ಕೇಂದ್ರಕ್ಕೆ ಪತ್ರ
ಕೊರೋನಾ ಶಿಕ್ಷಣ ವಲಯದ ಮೇಲೆ ಭಾರೀ ಪರಿಣಾಮ ಬೀರಿದ್ದು, ಈ ಹಿನ್ನೆಲೆಯಲ್ಲಿ ಪರ್ಯಾಯ ಶಿಕ್ಷಣ ವಿಧಾನದತ್ತ ಮುಖ ಮಾಡಿರುವ ಶಿಕ್ಷಣ ಇಲಾಖೆ 3 ಶೈಕ್ಷಣಿಕ ವಾಹಿನಿಗಳನ್ನು ತೆರೆಯಲು ಕೇಂದ್ರ ಸರ್ಕಾರದ ಅನುಮತಿಯನ್ನು ಕೋರಿದೆ.

