drugs

ರೇವ್ ಪಾರ್ಟಿ ಮೇಲಿನ ಸಿಸಿಬಿ ದಾಳಿಯಲ್ಲಿ ಗಾಂಜಾ, ಡ್ರಗ್ಸ್ ಹಾಗೂ ಸಿಂಥೆಟಿಕ್ ಡ್ರಗ್ಸ್ ಸಿಕ್ಕಿದೆ: ಡಾ ಜಿ ಪರಮೇಶ್ವರ್
ಸೋಮವಾರ ಬೆಂಗಳೂರಿನಲ್ಲಿ ರೇವ್ ಪಾರ್ಟಿ ನಡೆಯುತ್ತಿದ್ದ ಮಾಹಿತಿ ಸಿಕ್ಕಿ ಸಿಸಿಬಿಯವರು ದಾಳಿ ಮಾಡಿದ್ದಾರೆ. ಯಾರ‍್ಯಾರು ಬಂದಿದ್ದರು ಎಂದು ಪೊಲೀಸರು ಮಾಹಿತಿ ತೆಗೆದುಕೊಂಡಿದ್ದಾರೆ. ದಾಳಿ ವೇಳೆ ಡ್ರಗ್ಸ್, ಸಿಂಥೆಟಿಕ್ ಡ್ರಗ್ಸ್ ಪತ್ತೆ ಆಗಿದೆ. ಕಾನೂನು ಪ್ರಕಾರ ಕ್ರಮ ಆಗಲಿದೆ.

ಬೆಂಗಳೂರು: ರೇವ್ ಪಾರ್ಟಿ ಮೇಲೆ CCB ಪೊಲೀಸರ ದಾಳಿ; ಆಯೋಜಕರು ಸೇರಿ ಐವರ ಬಂಧನ; ಎಂಡಿಎಂಎ, ಕೊಕೇನ್ ವಶ
ಐಟಿ ಸಿಟಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿ ಆರ್ ಫಾರ್ಮ್‌ಹೌಸ್‌ನಲ್ಲಿ ನಿನ್ನೆ ಭಾನುವಾರ ಸಾಯಂಕಾಲದಿಂದ ಇಂದು ಸೋಮವಾರ ನಸುಕಿನ ಜಾವದವರೆಗೆ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಕೇಂದ್ರ ಅಪರಾಧ ವಿಭಾಗದ (CCB) ಪೊಲೀಸರು ದಾಳಿ ನಡೆಸಿದ ಘಟನೆಗೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ.

ಬೆಂಗಳೂರು: ಫಾರ್ಮ್ ಹೌಸ್ ನಲ್ಲಿ ರೇವ್ ಪಾರ್ಟಿ, ತೆಲುಗು ನಟಿಯರು, ಮಾಡೆಲ್ ಗಳು ಸೇರಿ ಟೆಕ್ಕಿಗಳು ಭಾಗಿ, CCB ದಾಳಿ ವೇಳೆ ಡ್ರಗ್ಸ್ ಪತ್ತೆ
ಐಟಿ ಸಿಟಿ ಬೆಂಗಳೂರಿನಲ್ಲಿ ವಾರಾಂತ್ಯ ನಡೆದ ರೇವ್ ಪಾರ್ಟಿ ಮೇಲೆ ನಗರ ಅಪರಾಧ ದಳ ವಿಭಾಗ ಪೊಲೀಸರು ದಾಳಿ ನಡೆಸಿದ್ದಾರೆ. ಎಕ್ಟ್ರಾನಿಕ್ ಸಿಟಿ ಬಳಿಯ ಜಿ ಆರ್.ಫಾರ್ಮ್‌ಹೌಸ್‌ನಲ್ಲಿ ನಡೆಯುತ್ತಿದ್ದ ರೇವ್ಪಾರ್ಟಿ ಮೇಲೆ ಸಿಸಿಬಿ ತಂಡ ನಸುಕಿನ ಜಾವ 3 ಗಂಟೆ ಸುಮಾರಿಗೆ ದಾಳಿ ನಡೆಸಿದ್ದು, ದಾಳಿ ವೇಳೆ ಪಾರ್ಟಿಯಲ್ಲಿ ಡ್ರಗ್ಸ್ ಪತ್ತೆಯಾಗಿದೆ.

ರಾತ್ರಿ ನನಗೆ ಡ್ರಗ್ಸ್ ನೀಡಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ: ಮಹಿಳಾ ಸಂಸದೆ ಗಂಭೀರ ಆರೋಪ
ರಾತ್ರಿಯ ವೇಳೆ ತನಗೆ ಅಮಲು ಪದಾರ್ಥ ನೀಡಿ ನನ್ನ ಮೇಲೆ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆಸ್ಟ್ರೇಲಿಯಾದ ಮಹಿಳಾ ಸಂಸದೆ ಆರೋಪಿಸಿದ್ದಾರೆ.

Pakistan boat seized in Gujarat coast: 600 ಕೋಟಿ ರೂ ಮೌಲ್ಯದ ಡ್ರಗ್ಸ್ ಸಹಿತ ಪಾಕ್ ದೋಣಿ ವಶಕ್ಕೆ, 14 ಮಂದಿ ಬಂಧನ
ಭಾರತೀಯ ಕರಾವಳಿ ಭದ್ರತಾ ಪಡೆಗಳು ಭಾನುವಾರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಸುಮಾರು 600 ಕೋಟಿ ರೂ ಮೌಲ್ಯದ ಡ್ರಗ್ಸ್ ಸಾಗಿಸುತ್ತಿದ್ದ ಪಾಕಿಸ್ತಾನ ಮೂಲದ ಬೋಟ್ ಅನ್ನು ಸೀಜ್ ಮಾಡಿ 14 ಜನರನ್ನು ಬಂಧಿಸಿದೆ.

ECI ಹೊಸ ದಾಖಲೆ: 4,650 ಕೋಟಿ ರೂ. ಮೌಲ್ಯದ ನಗ-ನಾಣ್ಯ-ವಸ್ತು ವಶ, ಶೇ.45ರಷ್ಟು ಡ್ರಗ್ಸ್!
ದೇಶದಲ್ಲಿ 75 ವರ್ಷಗಳ ಲೋಕಸಭಾ ಚುನಾವಣೆಯ ಇತಿಹಾಸದಲ್ಲಿ ದಾಖಲಾದ ಅತಿ ಹೆಚ್ಚು ದಾಖಲೆರಹಿತ ನಗದು ಮತ್ತು ವಸ್ತುಗಳನ್ನು ಈ ಬಾರಿ ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಚುನಾವಣಾ ಅಕ್ರಮಗಳ ಮೇಲೆ ಕಣ್ಣು: ರಾಜ್ಯದಲ್ಲಿ ಈವರೆಗೂ 3.13 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ!
ಚುನಾವಣಾ ನೀತಿ ಸಂಹಿತೆ ಜಾರಿ ಬೆನ್ನಲ್ಲೇ ನಗದು ವಹಿವಾಟು, ಮದ್ಯ ಮಾರಾಟ, ಉಚಿತ ಉಡುಗೊರೆ ಹಾಗೂ ಮತ್ತಿತರ ಅಕ್ರಮ ಚಟುವಟಿಕೆಗಳ ಮೇಲೆ ನಿರಂತರ ನಿಗಾ ಇರಿಸಿರುವ ಚುನಾವಣಾ ಆಯೋಗದ ಅಧಿಕಾರಿಗಳು ಮಾದಕ ದ್ರವ್ಯ ಪ್ರಕರಣಗಳನ್ನು ನಿಭಾಯಿಸಲು ವಿಭಿನ್ನ ವಿಧಾನವನ್ನು ಅನುಸರಿಸುತ್ತಿದ್ದು, ರಾಜ್ಯದಲ್ಲಿ 3.13 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದುಕೊಡಿದ್ದಾರೆ.

ಗುಜರಾತ್: ಡ್ರಗ್ಸ್ ಸಾಗಿಸುತ್ತಿದ್ದ ಬೋಟ್, ಅದರಲ್ಲಿದ್ದ ಪಾಕ್ ಸಿಬ್ಬಂದಿಯ ಬಂಧನ
ಗುಜರಾತ್ ಕರಾವಳಿಯಲ್ಲಿ 60 ಪ್ಯಾಕೆಟ್ ಡ್ರಗ್ಸ್ ಸಾಗಿಸುತ್ತಿದ್ದ ದೋಣಿಯನ್ನು ವಶಪಡಿಸಿಕೊಳ್ಳಲಾಗಿದೆ.

ಡ್ರಗ್ಸ್ ದಂಧೆ: ನೇತ್ರ ತಜ್ಞ ಸೇರಿ ನಾಲ್ವರ ಬಂಧನ; 2.35 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಮತ್ತೆ ಭರ್ಜರಿ ಕಾರ್ಯಾಚರಣೆ ನಡೆಸಿರುವ ಸಿಸಿಬಿ, ನೇತ್ರ ತಜ್ಞ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿ ರೂ.2.35 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದೆ.

