drone

ಜಮ್ಮು ಮತ್ತು ಕಾಶ್ಮೀರ: ಸಾಂಬಾ ಜಿಲ್ಲೆಯ 3 ಪ್ರದೇಶಗಳಲ್ಲಿ ಡ್ರೋಣ್ ಗಳ ಅನುಮಾನಾಸ್ಪದ ಹಾರಾಟ, ಸೇನೆ ದಾಳಿ ಮಾಡುತ್ತಿದ್ದಂತೆ ಪಾಕಿಸ್ತಾನದತ್ತ ಪಯಣ
ಭಾರತದ ಗಡಿ ಪ್ರದೇಶದಲ್ಲಿ ಇತ್ತೀಚೆಗೆ ಅನುಮಾನಾಸ್ಪದವಾಗಿ ಡ್ರೋಣ್'ಗಳ ಹಾರಾಟ ಹೆಚ್ಚಾಗಿದ್ದು, ಗುರುವಾರ ರಾತ್ರಿ 8.30-9.30ರ ಸಮಯದಲ್ಲಿ ಸಾಂಬಾ ಜಿಲ್ಲೆಯ ಮೂರು ಪ್ರದೇಶಗಳಲ್ಲಿ ಡ್ರೋಣ್ ಹಾರಾಟ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಜಮ್ಮು: ಸ್ಫೋಟಕ ಸಾಗಿಸುತ್ತಿದ್ದ ಡ್ರೋಣ್ ಹೊಡೆದುರುಳಿಸಿದ ಪೊಲೀಸರು
ಜಮ್ಮು ನಗರ ಹೊರವಲಯದ ಕನ್ಹಚಾಕ್ ಪ್ರದೇಶದ ಅಂತಾರಾಷ್ಟ್ರೀಯ ಗಡಿಯಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಅಳವಡಿಸಿದ್ದ ಡ್ರೋಣ್ ವೊಂದನ್ನು ಜಮ್ಮು-ಕಾಶ್ಮೀರ ಪೊಲೀಸರು ಶುಕ್ರವಾರ ಹೊಡೆದುರುಳಿಸಿದ್ದಾರೆಂದು ತಿಳಿದುಬಂದಿದೆ.

ಮತ್ತೆ ಎಲ್ಒಸಿಯಲ್ಲಿ ಕಾಣಿಸಿಕೊಂಡ ಕ್ವಾಡ್ ಕಾಪ್ಟರ್, ಗುಂಡು ಹಾರಿಸಿದ ಭಾರತದ ಸೈನಿಕರು
ಇಂಡೋ-ಪಾಕ್ ಗಡಿಯಲ್ಲಿ ಮತ್ತೆ ಪಾಕಿಸ್ತಾನದ ಕ್ವಾಡ್‌ಕಾಪ್ಟರ್ ಮೇಲೆ ಭಾರತೀಯ ಸೈನಿಕರು ಗುಂಡು ಹಾರಿಸಿದ ಘಟನೆ ಎಲ್ಒಸಿಯಲ್ಲಿ ನಡೆದಿದೆ.

ಜಮ್ಮು ಐಎಎಫ್ ಕೇಂದ್ರದ ಬಳಿ ಮತ್ತೆ ಡ್ರೋಣ್ ಹಾರಾಟ ಪತ್ತೆ: ಹೆಚ್ಚಿದ ಭದ್ರತೆ
ಜಮ್ಮುವಿನ ವಾಯುನೆಲೆ ಕೇಂದ್ರದಲ್ಲಿ ಮತ್ತೆ ಡ್ರೋಣ್ ಹಾರಾಟ ಪತ್ತೆಯಾಗಿದ್ದು, ಅಲರ್ಟ್ ಆಗಿದ್ದ ಬಿಎಸ್‌ಎಫ್ ಯೋಧರ ಕಣ್ಣಿಗೆ ಡ್ರೋನ್ ಬಿದ್ದೊಡನೆ ಗುಂಡು ಹಾರಿಸಿದ್ದಾರೆ. ನಂತರ ಡ್ರೋಣ್ ವಾಪಸಾಗಿದೆ ಎಂದು ತಿಳಿದುಬಂದಿದೆ.

ಜಮ್ಮು-ಕಾಶ್ಮೀರ: ಅಂತರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಡ್ರೋಣ್ ಹಾರಾಟ, ಸೇನಾಪಡೆಯಿಂದ ಗುಂಡಿನ ದಾಳಿ
ಜಮ್ಮು-ಕಾಶ್ಮೀರ ಅರ್ನಿಯಾ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿ ಬಳಿ ಡ್ರೋಣ್ ಪತ್ತೆಯಾಗಿದೆ. ಮಂಗಳವಾರ ತಡರಾತ್ರಿ ಪತ್ತೆಯಾದ ಡ್ರೋಣ್ ಮೇಲೆ ಬಿಎಸ್ಎಫ್ ಪಡೆಗಳೂ ಗುಂಡಿನ ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ.

ಇಸ್ಲಾಮಾಬಾದ್ ನ ಭಾರತೀಯ ಹೈ ಕಮಿಷನ್ ಕಚೇರಿ ಬಳಿ ಪಾಕ್ ಡ್ರೋನ್ ಹಾರಾಟ: ಭಾರತ ತೀವ್ರ ಪ್ರತಿಭಟನೆ!
ಪಾಕಿಸ್ತಾನ ಭಾರತದ ವಿರುದ್ಧ ಹೊಸ ಆಯುಧವನ್ನು ಪ್ರಯೋಗಿಸುತ್ತಿದೆ. ಜಮ್ಮುವಿನಲ್ಲಿ ಪಾಕ್ ಡ್ರೋನ್ ಪತ್ತೆಯಾದ ಬಳಿಕ ಈಗ ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ಹೈ ಕಮಿಷನ್ ಕಚೇರಿಯಲ್ಲಿ ಪಾಕಿಸ್ತಾನದ ಡ್ರೋನ್ ಪತ್ತೆಯಾಗಿದೆ.

ಜಮ್ಮುವಿನ ಅಂತರಾಷ್ಟ್ರೀಯ ಗಡಿಯಲ್ಲಿ ಡ್ರೋಣ್ ಪತ್ತೆ: ಭಾರತೀಯ ಸೇನಾಪಡೆಯಿಂದ ಗುಂಡಿನ ದಾಳಿ!
ಐಎಎಫ್ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ನಡೆದ ಬಾಂಬ್ ದಾಳಿ ಬೆನ್ನಲ್ಲೇ ಜಮ್ಮುವಿನಲ್ಲಿ ಪದೇ ಪದೇ ಡ್ರೋಣ್ ಹಾರಾಟಗಳು ಪತ್ತೆಯಾಗುತ್ತಲೇ ಇವೆ. ಶುಕ್ರವಾರ ಕೂಡ ಜಮ್ಮುವಿನ ಅಂತರಾಷ್ಟ್ರೀಯ ಗಡಿಯಲ್ಲಿ ಡ್ರೋಣ್ ಪತ್ತೆಯಾಗಿದ್ದು, ಭಾರತೀಯ ಸೇನಾಪಡೆ ಗುಂಡಿನ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.

ಜಮ್ಮುವಿನ ಕಲುಚಕ್ ಮತ್ತು ಕುಂಜ್ವಾನಿ ಪ್ರದೇಶದಲ್ಲಿ ಮತ್ತೆರಡು ಡ್ರೋನ್ ಗಳ ಪತ್ತೆ: ಪರಿಶೀಲನೆ ಮುಂದುವರಿಕೆ
ಜಮ್ಮು-ಕಾಶ್ಮೀರದ ವಾಯುಪಡೆ ನೆಲೆಯಲ್ಲಿ ಸ್ಫೋಟ ಸಂಭವಿಸಿದ ಮೂರು ದಿನಗಳ ನಂತರ ಬುಧವಾರ ಬೆಳಗಿನ ಜಾವ ಕಲುಚಕ್ ಮತ್ತು ಕುಂಜ್ವಾನಿ ಪ್ರದೇಶದಲ್ಲಿ ಮತ್ತೆರಡು ಡ್ರೋನ್ ಗಳ ಪತ್ತೆಯಾಗಿದೆ.

ಜಮ್ಮುವಿನಲ್ಲಿ ಮುಂದುವರೆದ ಉಗ್ರರ ಸಂಚು: ಮತ್ತೆ ಡ್ರೋಣ್ ಹಾರಾಟ ಪತ್ತೆ!
ಜಮ್ಮು-ಕಾಶ್ಮೀರದಲ್ಲಿ ದಾಳಿ ನಡೆಸಲು ಉಗ್ರರು ಸತತ ಯತ್ನಗಳನ್ನು ನಡೆಸುತ್ತಲೇ ಇದ್ದಾರೆ. ಸೋಮವಾರ ತಡರಾತ್ರಿ ಮತ್ತೆ ಜಮ್ಮುವಿನ ರತ್ನುಚಕ್-ಕಾಲೂಚಕ್ ಸೇನಾ ಕೇಂದ್ರದ ಡ್ರೋಣ್ ಹಾರಾಟ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.

