dog bite

ಉಡುಪಿ: ಜನವರಿಯಿಂದ ಆಗಸ್ಟ್ ನಡುವೆ 11,000ಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣಗಳು, ಇಬ್ಬರು ಸಾವು
ಉಡುಪಿ ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಹೆಚ್ಚುತ್ತಿದ್ದು, 2023ರ ಜನವರಿ ಮತ್ತು ಆಗಸ್ಟ್ ನಡುವೆ ಎಂಟು ತಿಂಗಳಲ್ಲಿ 11,407 ಪ್ರಕರಣಗಳು ವರದಿಯಾಗಿವೆ ಎಂದು ಅಧಿಕೃತ ಅಂಕಿ ಅಂಶಗಳು ಬಹಿರಂಗಪಡಿಸಿವೆ. ಜಿಲ್ಲೆಯಲ್ಲಿ ಎಂಟು ತಿಂಗಳಲ್ಲಿ ನಾಯಿ ಕಡಿತದಿಂದ ಇಬ್ಬರು ಸಾವಿಗೀಡಾಗಿದ್ದಾರೆ.

ನಾಯಿ ಕಚ್ಚಿದ ವಿಚಾರ ಪೋಷಕರಿಂದ ಮುಚ್ಚಿಟ್ಟ ಬಾಲಕ; ತಿಂಗಳ ಬಳಿಕ ರೇಬಿಸ್‍ನಿಂದ ಸಾವು
ಒಂದು ತಿಂಗಳ ಹಿಂದೆ ನಾಯಿ ಕಚ್ಚಿದ ಘಟನೆಯನ್ನು ಪೋಷಕರಿಗೆ ಮುಚ್ಚಿಟ್ಟಿದ್ದ 14 ವರ್ಷದ ಬಾಲಕ ರೇಬಿಸ್‍ನಿಂದ ಮೃತಪಟ್ಟಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ತಮ್ಮ ಶ್ವಾನವನ್ನು ಕಚ್ಚಿದ್ದಕ್ಕಾಗಿ ನೆರೆಹೊರೆಯ ನಾಯಿಯನ್ನು ಶೂಟ್ ಮಾಡಿ ಕೊಂದ ಇಬ್ಬರ ಬಂಧನ!
ಮಾಗಡಿ ಮುಖ್ಯರಸ್ತೆಯಲ್ಲಿ ನಗರದ ಹೊರವಲಯದಲ್ಲಿ ತಮ್ಮ ನಾಯಿಯನ್ನು ಕಚ್ಚಿದ್ದಕ್ಕೆ ಇಬ್ಬರು ಇನ್ನೊಂದು ನಾಯಿಯನ್ನು ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ. ಇಂಡಿ ತಳಿಯ ನಾಯಿಯ ಮಾಲೀಕ ಕಾಳಯ್ಯ ಈ ಸಂಬಂಧ ಇಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ.

ಹೆಚ್ಚಿದ ಬೀದಿ ನಾಯಿಗಳ ಹಾವಳಿ: ನಾಯಿ ಕಡಿತಕ್ಕೆ ಬಳ್ಳಾರಿಯಲ್ಲಿ ಇಬ್ಬರು ಮಕ್ಕಳ ಸಾವು!
ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ನ.22ರಿಂದ 25ರ ನಡುವೆ ನಾಯಿ ಕಡಿತದಿಂದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.

ಮಾಲೀಕರ ಗಮನಕ್ಕೆ: ನಾಯಿ ಕಚ್ಚಿದರೆ ಚಿಕಿತ್ಸೆಗೆ ಅದರ ಮಾಲೀಕರು 10,000 ತೆರಬೇಕು!
ನಾಯಿ ಮಾಲೀಕರೇ ಎಚ್ಚರ.. ನಿಮ್ಮ ಸಾಕು ಶ್ವಾನ ಇತರರನ್ನು ಕಚ್ಚಿದರೆ ಅವರ ಚಿಕಿತ್ಸೆಗೆ ನೀವೇ 10,000 ತೆರಬೇಕು.. ಇಂತಹುದು ಕಾನೂನು ಇದೀಗ ಜಾರಿಗೆ ಬಂದಿದೆ.

ವಿಡಿಯೊ: ಲಿಫ್ಟ್‌ನಲ್ಲಿ ಸಾಕು ನಾಯಿ ಮಗುವನ್ನು ಕಚ್ಚಿದರೂ ಸುಮ್ಮನೆ ನೋಡುತ್ತಿದ್ದ ಮಹಿಳೆ! ನೆಟ್ಟಿಗರ ಆಕ್ರೋಶ
ವಿಡಿಯೋದಲ್ಲಿ, ತನ್ನ ಸಾಕು ನಾಯಿ ಬಾಲಕನೊಬ್ಬನಿಗೆ ಕಚ್ಚಿ, ಆತ ನೋವಿನಿಂದ ಕುಣಿದಾಡುತ್ತಿದ್ದರೂ ನಾಯಿಯ ಯಜಮಾನಿ ಮಾತ್ರ ಪ್ರತಿಕ್ರಿಯೆಯೇ ನೀಡದೆ ನಿಂತಿರುವುದು ಸೆರೆಯಾಗಿದೆ.

ಕೆ.ಆರ್.ಪೇಟೆ: ಹುಚ್ಚು ನಾಯಿ ಕಡಿತ, 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ
ಹುಚ್ಚು ನಾಯಿಯೊಂದು ಓರ್ವ ಪುರಸಭಾ ನೌಕರ ಸೇರಿದಂತೆ ಸುಮಾರು ೧೦ಕ್ಕೂ ಹೆಚ್ಚು ಮಂದಿಯನ್ನು ಕಚ್ಚಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಕೆ.ಆರ್.ಪೇಟೆ ಪಟ್ಟಣದ ವಿವಿಧ ಬಡಾವಣೆಯಲ್ಲಿ ಮಂಗಳವಾರ ನಡೆದಿದೆ.

