doctors

ಕೋವಿಡ್ ವಾರ್ ರೂಮ್ ನಿರ್ವಹಣೆಗೆ 40 ವೈದ್ಯರ ನೇಮಕ: ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ
ಕೋವಿಡ್ ಸಂಕಷ್ಟದ ನಡುವೆ ನೆರವಿಗಾಗಿ 1912 ಗೆ ಕರೆ ಮಾಡುವ ನಾಗರಿಕರಿಗೆ ಆಯಾ ವಲಯದ ವಾರ್ ರೂಮ್ ನಿಂದ ತ್ವರಿತವಾಗಿ ಸ್ಪಂದಿಸುವುದನ್ನು ಖಚಿತಪಡಿಸಿಕೊಳ್ಳಲು, ರಾಜ್ಯ ಸರ್ಕಾರವು ಈಗ ಕನಿಷ್ಠ 40 ವೈದ್ಯರ ತಂಡವನ್ನು ರಚಿಸುವ ಸನ್ನಾಹದಲ್ಲಿದೆ.

ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಕೇರ್ ಸ್ಥಾಪನೆ: ಬೆಳಗಾವಿ ಆಸ್ಪತ್ರೆಯಲ್ಲಿ ಸ್ಥಳೀಯರಿಂದ ವೈದ್ಯರ ಮೇಲೆ ಹಲ್ಲೆ
ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವುದನ್ನು ವಿರೋಧಿಸಿ ಸ್ಥಳೀಯರು ಖಾಸಗಿ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಳಗಾವಿ ನಗರದಲ್ಲಿ ಬೆಳಕಿಗೆ ಬಂದಿದೆ.

ಕೋವಿಡ್-19 ಸಂಕಷ್ಟ: ತಮ್ಮ ಕ್ಷೇತ್ರದ ರೋಗಿಗಳಿಗಾಗಿ ಮತ್ತೆ ವೈಟ್ ಕೋಟ್ ಧರಿಸಿ 'ಫೀಲ್ಡ್ ' ಗಿಳಿದ ಶಾಸಕರು!
ಆಕ್ಸಿಜನ್ ಕೊರತೆ, ಬೆಡ್ ಕೊರತೆ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ಕುಣಿಗಲ್ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಕಾಂಗ್ರೆಸ್ ಶಾಸಕ ಡಾ. ರಂಗನಾಥ್ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ವೈದ್ಯಾಧಿಕಾರಿಗಳ ನೇಮಕಾತಿ ವಯೋಮಿತಿ 21 ರಿಂದ 26 ಕ್ಕೆ ಏರಿಕೆ: ಸರ್ಕಾರದ ಕ್ರಮ ಎತ್ತಿಹಿಡಿದ ಹೈಕೋರ್ಟ್
ವೈದ್ಯಾಧಿಕಾರಿಗಳ ಹುದ್ದೆಗೆ ನೇಮಕಾತಿ ವಯೋಮಿತಿಯನ್ನು ಕನಿಷ್ಠ 21 ವರ್ಷದಿಂದ 26 ವರ್ಷಕ್ಕೆ ಹೆಚ್ಚಿಸಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ನಿಯಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಎರಡನೇ ಕೋವಿಡ್ ಅಲೆಗೆ ಏಪ್ರಿಲ್‌ನಲ್ಲಿ ಭಾರತದಾದ್ಯಂತ 34 ವೈದ್ಯರು ಸಾವು: ಐಎಂಎ
ಸಾಂಕ್ರಾಮಿಕ ರೋಗದ ಎರಡನೇ ಅಲೆ ದೇಶವನ್ನು ಅಪ್ಪಳಿಸಿಸಿರುವಂತೇ ಕೊರೋನಾವೈರಸ್ ಸೋಂಕಿನಿಂದಾಗಿ ಏಪ್ರಿಲ್ ತಿಂಗಳಲ್ಲಿ ದೇಶಾದ್ಯಂತ ಈವರೆಗೆ ಕನಿಷ್ಠ 34 ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ ಸೋಮವಾರ ಬಿಡುಗಡೆ ಮಾಡಿದ ವಿವರಗಳು ತಿಳಿಸಿವೆ.

ಕೊರೋನಾದಿಂದ ಸಾವನ್ನಪ್ಪಿದ 5 ವೈದ್ಯರಲ್ಲಿ ಒಬ್ಬರಿಗೆ ಮಾತ್ರ ಕೇಂದ್ರದಿಂದ 50 ಲಕ್ಷ ರೂ.ವಿಮೆ!
ಭಾರತದಲ್ಲಿ ಈವರೆಗೆ ಕೋವಿಡ್-19 ಕರ್ತವ್ಯದ ವೇಳೆ ಕನಿಷ್ಠ 756 ವೈದ್ಯರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಈ ಪೈಕಿ ಕೇವಲ 168 ವೈದ್ಯರ ಕುಟುಂಬಗಳು ಮಾತ್ರ ಕೇಂದ್ರ ಸರ್ಕಾರದ 50 ಲಕ್ಷ ರೂ. ವಿಮೆ ಪಡೆದುಕೊಂಡಿದ್ದಾರೆ.

ಚುನಾವಣೆ ನಡೆಸುವುದಾದರೆ, ನೀಟ್ ಪರೀಕ್ಷೆಯನ್ನೇಕೆ ನಡೆಸಲು ಸಾಧ್ಯವಿಲ್ಲ: ಕೇಂದ್ರಕ್ಕೆ ರಾಜ್ಯ ವೈದ್ಯರ ಪ್ರಶ್ನೆ
ದೇಶದಲ್ಲಿ ಚುನಾವಣೆಗಳು ನಡೆಯಲು ಸಾಧ್ಯವಾಗಿದೆ ಎಂದಾದರೆ, ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ (ನೀಟ್) ಪರೀಕ್ಷೆಯನ್ನೇಕೆ ನಡೆಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯದ ವೈದ್ಯರು ಪ್ರಶ್ನೆ ಮಾಡಿದ್ದಾರೆ.

ಜನರಲ್ಲಿ ಭಯ ಹೋಗಲಾಡಿಸುವ ಜವಾಬ್ದಾರಿ ವೈದ್ಯರದ್ದು: ಸಂಸದ ಉಮೇಶ್ ಜಾಧವ್
ಜಿಲ್ಲೆಯಲ್ಲಿ ದಿನೇದಿನೆ ಕೋವಿಡ್-19 ಎರಡನೇ ಅಲೆಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನ ಭಯಭೀತರಾಗಿದ್ದು, ಅವರಲ್ಲಿ ಭಯ ಹೋಗಲಾಡಿಸಿ ಚಿಕಿತ್ಸೆ ನೀಡುವ ಜವಾಬ್ದಾರಿ ವೈದ್ಯರದ್ದಾಗಿದೆ ಎಂದು ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಅವರು ಹೇಳಿದ್ದಾರೆ.

ದೆಹಲಿ ಏಮ್ಸ್ ನ 20 ವೈದ್ಯರು, 6 ವಿದ್ಯಾರ್ಥಿಗಳಿಗೆ ಕೊರೋನಾ
ನವದೆಹಲಿಯ ಏಮ್ಸ್ ನ ಇಪ್ಪತ್ತು ವೈದ್ಯರು ಮತ್ತು ಆರು ವೈದ್ಯಕೀಯ ವಿದ್ಯಾರ್ಥಿಗಳು ಕಳೆದ 10 ದಿನಗಳಲ್ಲಿ ಕೋವಿಡ್-19 ಸೋಂಕಿಗೆ ಒಳಗಾಗಿದ್ದಾರೆ. ಇದರಲ್ಲಿ ಇಬ್ಬರು ಇದಾಗಲೇ ಕೊರೋನಾ ಲಸಿಕೆ ತೆಗೆದುಕೊಂಡಿದ್ದಾರೆಎಂದು ಅಧಿಕೃತ ಮೂಲಗಳು ತಿಳಿಸಿವೆ.

