DMK

ಲೋಕಸಭೆ ಚುನಾವಣೆ: ತಮಿಳುನಾಡಿನ 21 ಕ್ಷೇತ್ರಗಳಿಗೆ ಡಿಎಂಕೆ ಅಭ್ಯರ್ಥಿಗಳ ಘೋಷಣೆ, ಪ್ರಣಾಳಿಕೆ ಸಹ ಬಿಡುಗಡೆ
ಏಪ್ರಿಲ್ 19 ರಂದು ನಡೆಯಲಿರುವ ಲೋಕಸಭೆ ಚುನಾವಣೆಗೆ ತಮಿಳುನಾಡಿನ ಆಡಳಿತಾರೂಢ ಡಿಎಂಕೆ 21 ಅಭ್ಯರ್ಥಿಗಳ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ.

ರಾಮೇಶ್ವರಂ ಕೆಫೆ ಸ್ಫೋಟದ ಆರೋಪಿ ತಮಿಳುನಾಡಿನವ: ಶೋಭಾ ಕರಂದ್ಲಾಜೆ ವಿರುದ್ಧ ದೂರು ದಾಖಲಿಸಿದ ಡಿಎಂಕೆ
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟದಲ್ಲಿ ಭಾಗಿಯಾಗಿರುವ ಶಂಕಿತ ಆರೋಪಿ ತಮಿಳುನಾಡಿನವನು ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಡಿಎಂಕೆ ಬುಧವಾರ ಭಾರತೀಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ಜಮ್ಮು ಮತ್ತು ಕಾಶ್ಮೀರದ ಜನರಂತೆ ತಮಿಳುನಾಡಿನ ಜನರೂ ವಿಭಜಕ ಶಕ್ತಿಗಳನ್ನು ತಿರಸ್ಕರಿಸುತ್ತಾರೆ: ಪ್ರಧಾನಿ ಮೋದಿ
ದೇಶ ಒಡೆಯುವ ಕನಸು ಕಂಡವರನ್ನು ಜಮ್ಮು ಮತ್ತು ಕಾಶ್ಮೀರದ ಜನತೆ ತಿರಸ್ಕರಿಸಿದ್ದು, ತಮಿಳುನಾಡಿನ ಜನರು ಕೂಡ ಅದನ್ನೇ ಮಾಡಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ಲೋಕಸಭೆ ಚುನಾವಣೆ: ತಮಿಳುನಾಡು, ಪುದುಚೇರಿಯಲ್ಲಿ ಕಾಂಗ್ರೆಸ್ ಗೆ 10 ಸ್ಥಾನ ಹಂಚಿದ ಡಿಎಂಕೆ
ಮುಂಬರುವ ಲೋಕಸಭಾ ಚುನಾವಣೆಗಾಗಿ ತಮಿಳುನಾಡು ಹಾಗೂ ನೆರೆಯ ಪುದುಚೇರಿಯಲ್ಲಿ 10 ಸ್ಥಾನಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಡಿಎಂಕೆ ಶನಿವಾರ ಹಂಚಿಕೆ ಮಾಡಿದೆ. 2019ರ ಸೀಟು ಹಂಚಿಕೆ ಸೂತ್ರವನ್ನೇ ಪುನಾರಾವರ್ತಿಸಲಾಗಿದೆ.

ಲೋಕಸಭೆ ಚುನಾವಣೆ 2024: ಡಿಎಂಕೆ ಮೈತ್ರಿಕೂಟ ಸೇರಿದ MNM ಪಕ್ಷ, ಸ್ಪರ್ಧೆಯಿಂದ ಹಿಂದೆ ಸರಿದ ಕಮಲ್ ಹಾಸನ್!
ನಟ ಕಮಲ್ ಹಾಸನ್ ನೇತೃತ್ವದ ಪಕ್ಷ ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ) ಇಂದು ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನೇತೃತ್ವದ ಮೈತ್ರಿಕೂಟಕ್ಕೆ ಸೇರ್ಪಡೆಗೊಂಡಿದ್ದು ಮುಂಬರುವ ಲೋಕಸಭೆ ಚುನಾವಣೆಗೆ ತನ್ನ ಬೆಂಬಲವನ್ನು ನೀಡಿದೆ.

ನಟಿ ನಿವೇದಿತಾ ಪೇತುರಾಜ್ ಗಾಗಿ ಗುಟ್ಟಾಗಿ 50 ಕೋಟಿ ರೂ. ಮನೆ ಖರೀದಿಸಿದ್ರಾ ಉದಯನಿಧಿ ಸ್ಟಾಲಿನ್?

ಭಾರತ ಒಂದು ದೇಶವೇ ಅಲ್ಲ, 'ನಾವು ರಾಮನ ಶತ್ರುಗಳು': ಮತ್ತೆ ನಾಲಿಗೆ ಹರಿಬಿಟ್ಟ ಡಿಎಂಕೆ ಸಂಸದ ಎ ರಾಜಾ
ಭಾರತ ಒಂದು ದೇಶವೆ ಅಲ್ಲ. ಇದು ವೈವಿಧ್ಯಮಯ ಆಚರಣೆಗಳು ಮತ್ತು ಸಂಸ್ಕೃತಿಗಳ ತವರೂರಿನ ಉಪಖಂಡವಾಗಿದೆ. ನಾವು ಎಂದಿಗೂ ಜೈ ಶ್ರೀರಾಮ್ ಎಂದು ಹೇಳುವುದಿಲ್ಲ ಎಂದು ಹೇಳುವ ಮೂಲಕ ಡಿಎಂಕೆ ಸಂಸದ ಎ ರಾಜಾ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ.

ಡಿಎಂಕೆ, ಕಾಂಗ್ರೆಸ್ ಜನರ ನಡುವೆ ಬಿರುಕು ಮೂಡಿಸುತ್ತಿವೆ: ಪ್ರಧಾನಿ ಮೋದಿ ವಾಗ್ದಾಳಿ
ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಕೇಂದ್ರದ ಯೋಜನೆಗಳಿಗೆ ಸಹಕರಿಸುತ್ತಿಲ್ಲ ಎಂದು ಬುಧವಾರ ಆರೋಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಸಂಸತ್ತಿನಲ್ಲಿ ಅಯೋಧ್ಯೆ ಶ್ರೀರಾಮ ಮಂದಿರದ ಚರ್ಚೆಯ ವೇಳೆ ಸಭಾತ್ಯಾಗ ಮಾಡಿದ ಬಗ್ಗೆ ಟೀಕಿಸಿದ್ದಾರೆ.


