DJ Halli Violence

ಸಂಪತ್ ರಾಜ್ ಬಂಧನದ ಮೂಲಕ ಪೊಲೀಸರು ನನಗೆ ನ್ಯಾಯ ಕೊಡಿಸಿದ್ದಾರೆ: ಅಖಂಡ ಶ್ರೀನಿವಾಸ ಮೂರ್ತಿ
ತಪ್ಪಿತಸ್ಥರು ಯಾರೇ ಇದ್ದರು ಅವರಿಗೆ ಶಿಕ್ಷೆಯಾಗಬೇಕು. ಸಂಪತ್ ರಾಜ್'ರನ್ನು ಬಂಧನಕ್ಕೊಳಪಡಿಸುವ ಮೂಲಕ ಪೊಲೀಸರು ನನಗೆ ನ್ಯಾಯ ಕೊಡಿಸಿದ್ದಾರೆಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರು ಹೇಳಿದ್ದಾರೆ.

ಡಿಜೆ ಹಳ್ಳಿ ಗಲಭೆ ಪೂರ್ವ ನಿಯೋಜಿತವಲ್ಲ: ವರದಿ
ನಗರದ ಡಿಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿಯಲ್ಲಿ ಇತ್ತೀಚೆಗೆ ನಡೆದ ಗಲಭೆ ಕೋಮು ಪ್ರೇರಿತವಾಗಲಿ, ಪೂರ್ವ ನಿಯೋಜಿತವಾಗಲಿ ಅಲ್ಲ. ಹಿಂದೂ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಗಲಭೆ ನಡೆದಿಲ್ಲ. ಇದೊಂದು ಸಹಜವಾಗಿ ನಡೆದ ಘಟನೆ ಎಂದು ಬೆಂಗಳೂರು ನಾಗರೀಕ ಸಾಮಾಜಿಕ ಸಂಸ್ಥೆಗಳ ಸಹಯೋಗದಲ್ಲಿ ನಡೆಸಿದ ಸತ್ಯಶೋಧನಾ ವರದಿ ಅಭಿಪ್ರಾಯಪಟ್ಟಿದೆ.

ಡಿ.ಜೆ.ಹಳ್ಳಿ ಗಲಭೆ ಪ್ರಕರಣ: ಕೇಂದ್ರಕ್ಕೆ ವರದಿ ಸಲ್ಲಿಸಿದ ರಾಜ್ಯ ಸರ್ಕಾರ
ಪುಲಕೇಶಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಡಿ.ಜೆ. ಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಕಾವಲ್ ಬೈರಸಂದ್ರದಲ್ಲಿ ಆಗಸ್ಟ್ 11ರಂದು ನಡೆದಿದ್ದ ಗಲಭೆಯ ಕುರಿತು ರಾಜ್ಯ ಸರ್ಕಾರ, ಕೇಂದ್ರ ಗೃಹ ಇಲಾಖೆಗೆ ವರದಿ ಸಲ್ಲಿಸಿದೆ.

ಗಲಭೆ ನಡೆದಿದ್ದ ಡಿ.ಜೆ ಹಳ್ಳಿ ಠಾಣೆಗೆ ಸಿದ್ದರಾಮಯ್ಯ ಭೇಟಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಆಗ್ರಹ!
ಬೆಂಗಳೂರು ಗಲಭೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲ ತಪ್ಪಿತಸ್ಥರಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ಮಾಜಿ ಸಿಎಂ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಡಿಜೆ ಹಳ್ಳಿ ಗಲಭೆಯಲ್ಲಿ ಪಿಎಫ್ಐ ಎಸ್ ಡಿ ಪಿಐ ಪಾತ್ರ: ಪೊಲೀಸರ ವರದಿಗಾಗಿ ಕಾಯುತ್ತಿರುವ ಸರ್ಕಾರ
ಆಗಸ್ಟ್ 11 ರಂದು ನಡೆದ ಡಿಜೆಹಳ್ಳಿ ಹಿಂಸಾಚಾರ ಪ್ರಕರಣದಲ್ಲಿ ಯಾವೂದಾದರೂ ಸಂಘಟನೆಯ ಕೈವಾಡವಿದೆಯೇ ಎಂಬ ಬಗ್ಗೆ ಪೊಲೀಸರ ವರದಿಗಾಗಿ ರಾಜ್ಯ ಸರ್ಕಾರ ಕಾಯುತ್ತಿದೆ.

ಬಿಜೆಪಿಯಿಂದ ದಲಿತ ರಾಜಕಾರಣ,2ನೇ ಹಂತದ ಆಪರೇಷನ್ ಕಮಲ-ಡಿ.ಕೆ.ಶಿವಕುಮಾರ್
ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆಯನ್ನಿಟ್ಟುಕೊಂಡು ಬಿಜೆಪಿ ದಲಿತ ರಾಜಕಾರಣ ಹಾಗೂ ಎರಡನೇ ಹಂತದ ಆಪರೇಷನ್ ಕಮಲ ಆರಂಭಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ಡಿಜೆ ಹಳ್ಳಿ ಗಲಭೆ ಪ್ರಕರಣ: ಕರ್ನಾಟಕ ಟಿಪ್ಪು ಟೈಗರ್ ಅಲ್ಫತ್ ಟ್ರಸ್ಟ್ ಅಧ್ಯಕ್ಷ ಖಾಕಿ ವಶಕ್ಕೆ
ಇತ್ತೀಚೆಗೆ ಡಿ.ಜೆ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಗಲಭೆ ಪ್ರಕರಣ: ಮತ್ತೆ 35 ಆರೋಪಿಗಳ ಬಂಧನ, ಬಂಧಿತರ ಸಂಖ್ಯೆ 340ಕ್ಕೆ ಏರಿಕೆ
ಬೆಂಗಳೂರಿನ ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಮತ್ತೆ 35 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಆ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 340ಕ್ಕೆ ಏರಿಕೆಯಾಗಿದೆ.

ಬೆಂಗಳೂರು ಹಿಂಸಾಚಾರ: ಫೇಸ್ ಬುಕ್ ಪೋಸ್ಟ್ ದೊಡ್ಡ ವಿಚಾರವಲ್ಲ, ಆರೋಪಿ ನವೀನ್ ತಂದೆ ಪವನ್ ಕುಮಾರ್
ಡಿಜಿ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿಂಸಾಚಾರ ನಡೆಯಲು ರಾಜಕೀಯ ಕಾರಣವಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವುದು ದೊಡ್ಡ ವಿಚಾರವೇನು ಅಲ್ಲ ಎಂದು ಆರೋಪಿ ನವೀನ್ ತಂದೆ ಪವನ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

