district administration

ಮಳೆಗಾಲಕ್ಕೆ ಸಜ್ಜಾಗಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಮುಂದು; ಸಮಸ್ಯೆಗಳನ್ನು ನಿಭಾಯಿಸಲು ಸಿದ್ಧತೆ ಆರಂಭಿಸಲು ಸೂಚನೆ
ಮಳೆಗಾಲದಲ್ಲಿ (ಜೂನ್‌ನಿಂದ ಆಗಸ್ಟ್‌ವರೆಗೆ) ಪೂರ್ವಭಾವಿಯಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ವಿವಿಧ ಮಳೆ ಸಂಬಂಧಿತ ಸಮಸ್ಯೆಗಳನ್ನು ಎದುರಿಸಲು ಸಿದ್ಧತೆಗಳನ್ನು ಆರಂಭಿಸಿದೆ. ಮಂಗಳವಾರ ನಡೆದ ಸಭೆಯಲ್ಲಿ, ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂಪಿ ಅವರು ಮುಂಗಾರು ಹಂಗಾಮಿನ ಸವಾಲುಗಳನ್ನು ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ನಿರ್ದೇಶನಗಳೊಂದಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರು: ವಾಟರ್ ಟ್ಯಾಂಕರ್ ಮಾಫಿಯಾ’ಗೆ ಸರ್ಕಾರ ಬ್ರೇಕ್; ಹೊಸ ದರ ನಿಗದಿ ಮಾಡಿ ಜಿಲ್ಲಾಡಳಿತ ಆದೇಶ!
ಬೇಸಿಗೆಯ ಆರಂಭವಾಗಿದ್ದು, ನಗರದಲ್ಲಿ ನೀರಿನ ಅಭಾವ ಶುರುವಾಗಿದೆ. ಈ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡು ಕೆಲವರು ಸಾರ್ವಜನಿಕರಿಂದ ತಮ್ಮಗಿಷ್ಟ ಬಂದ ದರ ನಿಗದಿ ಮಾಡಿ ಹಣ ವಸೂಲಿ ಮಾಡುತ್ತಿದ್ದರು. ಈ ಮಾಫಿಯಾಗೆ ಕೊನೆಗೂ ಸರ್ಕಾರ ಬ್ರೇಕ್ ಹಾಕಿದ್ದು, ಟ್ಯಾಂಕರ್ ನೀರಿಗೆ ದರ ನಿಗದಿ ಮಾಡಿದೆ.

ಚಾಮರಾಜನಗರ: ಸುದೀರ್ಘ ಕಾಯುವಿಕೆ ಅಂತ್ಯ, ಮನೆ ಬಾಗಿಲಲ್ಲೇ ಆಧಾರ್ ಪಡೆದ ಆದಿವಾಸಿಗಳು!
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆರಂಭವಾಗಿ ಹದಿನಾಲ್ಕು ವರ್ಷಗಳ ನಂತರ ಹಿಂದುಳಿದ ಚಾಮರಾಜನಗರ ಜಿಲ್ಲೆಯ ದೂರದ ಪ್ರದೇಶಗಳಲ್ಲಿ ವಾಸಿಸುವ ಆದಿವಾಸಿಗಳು ತಮ್ಮ ಆಧಾರ್ ಪಡೆದಿದ್ದಾರೆ.

ಬರಪೀಡಿತ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬಾಲ್ಯ ವಿವಾಹ: ಜಿಲ್ಲಾಡಳಿತದಿಂದ ಕಾರ್ಯಪಡೆ ರಚನೆ
ಸರಕಾರದಿಂದ ಸಿಗುವ ಅಲ್ಪಸ್ವಲ್ಪ ನೆರವಿನಿಂದ ಸರಿಯಾಗಿ ಜೀವನ ನಡೆಸಲು ಸಾಧ್ಯವಾಗದೆ ಬರಪೀಡಿತ ಬಳ್ಳಾರಿ ಜಿಲ್ಲೆಯ ಹಲವು ಗ್ರಾಮಗಳ ಜನರು ಕೆಲಸ ಅರಸಿ ನಗರ, ಪಟ್ಟಣಗಳಿಗೆ ವಲಸೆ ಹೋಗುವ ಸಲುವಾಗಿ ತಮ್ಮ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳಿಗೆ ಮದುವೆ ಮಾಡುವ ಸನ್ನಿವೇಶವಿದೆ.

ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚುವರಿಯಾಗಿ 150 'ಗ್ರಾಮ ಒನ್' ಕೇಂದ್ರಗಳು, ಶೀಘ್ರದಲ್ಲೇ ಪ್ರಾರಂಭ
ಬೆಳಗಾವಿ ಜಿಲ್ಲೆಯ ಪ್ರತಿ ಹಳ್ಳಿಯ ಜನರಿಗೆ ಎಲ್ಲಾ ಸರ್ಕಾರಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಹೆಚ್ಚುವರಿಯಾಗಿ 150 'ಗ್ರಾಮ ಒನ್' ಕೇಂದ್ರಗಳನ್ನು ತೆರೆಯಲು ಜಿಲ್ಲಾಡಳಿತ ನಿರ್ಧರಿಸಿದೆ.

ರಾಮನಗರ: ಈಗಲ್‌ಟನ್ ಒತ್ತುವರಿ ಮಾಡಿದ್ದ 77 ಎಕರೆ ಜಾಗ ವಶಕ್ಕೆ ಪಡೆದ ಜಿಲ್ಲಾಡಳಿತ ಮಂಡಳಿ
ಬಿಡದಿ ಬಳಿ ಈಗಲ್‌ಟನ್ ರೆಸಾರ್ಟ್ ಒತ್ತುವರಿ ಮಾಡಿಕೊಂಡಿದ್ದ 77 ಎಕರೆ 18 ಗುಂಟೆ ಜಾಗವನ್ನು ಜಿಲ್ಲಾಡಳಿತ ಮಂಡಳಿ ವಶಕ್ಕೆ ಪಡೆದುಕೊಂಡಿದ್ದು, ಈ ಪ್ರದೇಶದಲ್ಲಿ ಇದೀಗ ಬೇಲಿ ನಿರ್ಮಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಅಗತ್ಯ ಸಿದ್ಧತೆ, ಔಷಧಿಗೆ ಹೆಚ್ಚು ದರ ವಿಧಿಸಿದರೆ ಕ್ರಮ: ಡಾ. ಕೆ.ಸುಧಾಕರ್
ಕೋವಿಡ್ ಸಂಭಾವ್ಯ 2 ನೇ ಅಲೆಗೆ ಸಿದ್ಧತೆಯಾಗಿ 10 ಜಿಲ್ಲಾಸ್ಪತ್ರೆ, 30 ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಜನರೇಟರ್ ಉಪಕರಣಗಳನ್ನು ಖರೀದಿಸಲು 37 ಕೋಟಿ 72 ಲಕ್ಷ ರೂಪಾಯಿಗೆ ಅನುಮೋದನೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಮಂಡ್ಯ ಜಿಲ್ಲಾಡಳಿತದಿಂದ ವಾಕ್-ಇನ್ ಕೋವಿಡ್ -19 ಟೆಸ್ಟ್!
ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಕೋವಿಡ್-19 ಪ್ರಕರಣಗಳ ಪರಿಶೀಲಿಸಲು ಮಂಡ್ಯ ಜಿಲ್ಲಾಡಳಿತವು ಸ್ವಾಬ್ ಸಂಗ್ರಹಕೇಂದ್ರಗಳಲ್ಲಿ ವಾಕ್-ಇನ್- ಕೋವಿಡ್ ಪರೀಕ್ಷೆಗಳನ್ನು ನಡೆಸಲು ಸಿದ್ಧವಾಗಿದೆ.

ಹೃದ್ರೋಗ ಸಮಸ್ಯೆಯ 5 ವರ್ಷದ ಬಾಲಕಿಯನ್ನು ಶಿವಮೊಗ್ಗಕ್ಕೆ ತಲುಪಿ ಮಾನವೀಯತೆ ಮೆರೆದ ಬೆಂಗಳೂರು ಜಿಲ್ಲಾಡಳಿತ
ಕೊರೋನಾ ವೈರಸ್ ನಿಯಂತ್ರಣ ಉದ್ದೇಶದಿಂದ ಜಾರಿಗೊಳಿಸಿರುವ ಲಾಕ್ ಡೌನ್ ನಿಂದಾಗಿ ಬೆಂಗಳೂರಿನಲ್ಲಿ ಸಿಲುಕಿಕೊಂಡಿದ್ದ ಹೃದ್ರೋಗ ಸಮಸ್ಯೆಯಿರುವ ಐದು ವರ್ಷದ ಬಾಲಕಿಯನ್ನು ನಗರ ಜಿಲ್ಲಾಡಳಿತ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಕರೆದೊಯ್ದು ಮಾನವೀಯತೆ ಮರೆದಿದೆ.

