Dharmastala case

ಧರ್ಮಸ್ಥಳ ಕೇಸ್: ಅಪಪ್ರಚಾರ ನಿಲ್ಲಿಸದಿದ್ದರೆ ಕಠಿಣ ಕ್ರಮ; youtubers ಗೆ ರಾಜ್ಯ ಸರ್ಕಾರ ಖಡಕ್ ಎಚ್ಚರಿಕೆ
ಅವಹೇಳನಕಾರಿಯಾಗಿ ಸುದ್ದಿ ಮಾಡುವವರು, ಭಾವನೆಗಳನ್ನು ಕೆರಳಿಸುವವರು ಈ ಕೂಡಲೇ ಅದನ್ನು ನಿಲ್ಲಿಸಬೇಕು. ಈ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಮುಂದುವರೆದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.

FSL ವರದಿ ಬರುವವರೆಗೂ ಧರ್ಮಸ್ಥಳ ಶವ ಶೋಧ ಕಾರ್ಯಾಚರಣೆ ಸ್ಥಗಿತ: ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ
ಎಸ್‌ಐಟಿ ಯಾರದೇ ಒತ್ತಡಕ್ಕೆ ಮಣಿಯದೆ ಬಹಳ ಗಂಭೀರ ಮತ್ತು ಪಾರದರ್ಶಕವಾಗಿ ತನಿಖೆ ನಡೆಸುತ್ತಿದೆ. ಧರ್ಮಸ್ಥಳದಲ್ಲಿ ಇನ್ನೂ ಎಷ್ಟು ಕಡೆ ಅಗೆಯಬೇಕು, ತನಿಖೆ ಮುಂದಕ್ಕೆ ಹೋಗಬೇಕಾ ಅಥವಾ ಬೇಡವಾ ಎಂಬುದನ್ನು ಎಸ್‌ಐಟಿ ತೀರ್ಮಾನಿಸಲಿದೆ.

ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಭೇಟಿ ಮಾಡಿದ BJP ನಿಯೋಗ
ನಿಯೋಗವು ಧರ್ಮಾಧಿಕಾರಿಯನ್ನು ಭೇಟಿ ಮಾಡುವ ಮೊದಲು ದೇವಾಲಯಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿತು.

ಮಸೀದಿ ಮೇಲೆ ಆರೋಪ ಬಂದಿದ್ದರೆ ಮುಟ್ಟುತ್ತಿದ್ದಿರಾ? ತನಿಖೆ ನಿಲ್ಲಿಸದೆ NIA ಗೆ ಹಸ್ತಾಂತರಿಸಿ: ಸರ್ಕಾರಕ್ಕೆ ಆರ್.ಅಶೋಕ್ ಆಗ್ರಹ
ಪ್ರತಿದಿನ ರಾಜ್ಯದ ಒಂದೊಂದು ಜಿಲ್ಲೆಯಿಂದಲೂ ಸಾವಿರ ದೂರುಗಳು ಬರುತ್ತವೆ. ಅದಕ್ಕೆಲ್ಲ ಎಸ್‌ಐಟಿ ರಚನೆ ಮಾಡುತ್ತಾರಾ? ಒಂದೊಮ್ಮೆ ಎಸ್‌ಐಟಿ ರಚಿಸಬೇಕಾದರೆ ನಾವು ವಿಧಾನಸೌಧದಲ್ಲಿ ಹೋರಾಟ ಮಾಡಬೇಕು.

ಧರ್ಮಸ್ಥಳ ವಿಚಾರದಲ್ಲಿ ಡಿಕೆಶಿ 2 ದೋಣಿ ಮೇಲೆ ಕಾಲಿಟ್ಟು ಹೋಗುವ ಪ್ರಯತ್ನ: ಪ್ರಹ್ಲಾದ್ ಜೋಶಿ
ಡಿಸಿಎಂ ಆಗಿ ಡಿಕೆ.ಶಿವಕುಮಾರ್ ಅವರು ಎಸ್‌ಐಟಿ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು, ಆದರೆ, ಈಗ ಧರ್ಮಸ್ಥಳ ವಿಷಯದಲ್ಲಿ ಪಿತೂರಿ ನಡೆದಿದೆ ಎಂದು ಹೇಳುತ್ತಿದ್ದಾರೆ. ಧರ್ಮಸ್ಥಳ ಬಿಜೆಪಿಯ ಆಸ್ತಿ ಎಂದು ನಾವು ಎಲ್ಲಿ ಹೇಳಿದ್ದೇವೆ?

ಧರ್ಮಸ್ಥಳ ಪ್ರಕರಣ: ಮಧ್ಯಂತರ-ಅಂತಿಮ ವರದಿ ಕುರಿತ ತೀರ್ಮಾನ SITಗೆ ಬಿಟ್ಟದ್ದು, ಸರ್ಕಾರ ಮಧ್ಯಪ್ರವೇಶಿಸುವುದಿಲ್ಲ; ಗೃಹ ಸಚಿವ ಪರಮೇಶ್ವರ್
ಈ ವಿಷಯವನ್ನು ಯಾರೂ ರಾಜಕೀಯಗೊಳಿಸಬಾರದು, ಧಾರ್ಮಿಕ ಬಣ್ಣ ನೀಡಬಾರದು. ಇದು ಕಾನೂನು ಸಮಸ್ಯೆಯಾಗಿದ್ದು, ದೂರು ಸ್ವೀಕರಿಸುವುದು ಮತ್ತು ಎಫ್‌ಐಆರ್ ದಾಖಲಿಸುವುದು ಪೊಲೀಸರ ಕರ್ತವ್ಯ.

ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣ: ಮಧ್ಯಂತರ ವರದಿಗೆ ಯದುವೀರ್ ಆಗ್ರಹ
ಧರ್ಮಸ್ಥಳದಲ್ಲಿ ಸಾಮೂಹಿಕ ಅಂತ್ಯಕ್ರಿಯೆ ಆರೋಪಗಳ ಬಗ್ಗೆ ಎಸ್‌ಐಟಿ ತನಿಖೆ ನಡೆಸುತ್ತಿದೆ. ಜನರು ಶ್ರೀ ಕ್ಷೇತ್ರದ ಪರವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಧರ್ಮಸ್ಥಳ ರಹಸ್ಯ ಸಮಾಧಿ ಪ್ರಕರಣ: ಸಹಾಯವಾಣಿ ಆರಂಭಿಸುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹ
ಎಸ್ಐಟಿ ರಚನೆ ಬಳಿಕ ಸಾಕಷ್ಟು ಮಂದಿ ನನಗೆ ಕಲೆ ಮಾಡಿ, ತಮಗಾದ ಭಯಾನಕ ಅನುಭವ ಹಾಗೂ ದುರಂತಗಳ ಬಗ್ಗೆ ತಿಳಿಸುತ್ತಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿನ ಅನಾನುಕೂಲತೆಗಳಿಂದಾಗ ದೂರು ನೀಡಲು ಹಿಂಜರಿಯುತ್ತಿದ್ದಾರೆ.

