DGCA

ಗೋವಾದಿಂದ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ, ತನಿಖೆಗೆ ಆದೇಶ
ಕ್ಯಾಬಿನ್‌ನಲ್ಲಿ ಹೊಗೆ ಕಾಣಿಸಿಕೊಂಡ ನಂತರ ಬುಧವಾರ ರಾತ್ರಿ ಗೋವಾದಿಂದ ಬರುತ್ತಿದ್ದ ಸ್ಪೈಸ್‌ಜೆಟ್ ವಿಮಾನವು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನಯಾನ ನಿಯಂತ್ರಕ ಡಿಜಿಸಿಎ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡ್ರಗ್ ಟೆಸ್ಟ್ ಪರೀಕ್ಷೆಯಲ್ಲಿ ವಿಫಲ: ಪ್ರಮುಖ ವಿಮಾನಯಾನ ಸಂಸ್ಥೆಯ ಪೈಲಟ್ ಅನ್ನು ಕರ್ತವ್ಯದಿಂದ ತೆಗೆದ ಡಿಜಿಸಿಎ!
ಡ್ರಗ್ ಪರೀಕ್ಷೆಯಲ್ಲಿ ಪ್ರಮುಖ ವಿಮಾನಯಾನ ಸಂಸ್ಥೆಯ ಪೈಲಟ್ ವಿಫಲರಾದ ಕಾರಣ ಅವರನ್ನು ವಿಮಾನ ಕರ್ತವ್ಯದಿಂದ ತೆಗೆದುಹಾಕಲಾಗಿದೆ ಎಂದು ಡಿಜಿಸಿಎಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಮಾನದಲ್ಲಿ ಮಾಸ್ಕ್ ಹಾಕದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ: ಡಿಜಿಸಿಎ
ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಕರು ವಿಮಾನಗಳಲ್ಲಿ ಮಾಸ್ಕ್ ಧರಿಸುವುದನ್ನು ಖಚಿತಪಡಿಸಿಕೊಳ್ಳಲು ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಇಂದು ತಿಳಿಸಿದೆ.

8 ವಾರಗಳ ಕಾಲ ಶೇ. 50 ರಷ್ಟು ವಿಮಾನ ಕಾರ್ಯ ನಿರ್ವಹಿಸುವಂತೆ ಸ್ಪೈಸ್‍ಜೆಟ್‍ಗೆ ಡಿಜಿಸಿಎ ಆದೇಶ
ತಾಂತ್ರಿಕ ದೋಷ ಕಾರಣದಿಂದಾಗಿ ಪದೇ ಪದೇ ತುರ್ತು ಭೂಸ್ಪರ್ಶ ಮಾಡುತ್ತಿದ್ದ ಸ್ಪೈಸ್‍ಜೆಟ್ ಏರ್‌ಲೈನ್ಸ್‌ಗೆ 8 ವಾರಗಳವರೆಗೆ ಶೇ. 50ರಷ್ಟು ವಿಮಾನಗಳನ್ನು ಮಾತ್ರ ಕಾರ್ಯನಿರ್ವಹಿಸುವಂತೆ ನಾಗರಿಕ ವಿಮಾನಯಾನ...

ವೈದ್ಯರ ಸಲಹೆ ಪಡೆಯದೆ ಅಂಗವಿಕಲರಿಗೆ ವಿಮಾನ ಪ್ರವೇಶ ನಿರಾಕರಿಸುವಂತಿಲ್ಲ, ಲಿಖಿತ ಮಾಹಿತಿ ಕಡ್ಡಾಯ: ಡಿಜಿಸಿಎ
ಅಂಗವಿಕಲರಿಗೆ ವಿಮಾನಕ್ಕೆ ಪ್ರವೇಶ ನೀಡುವ ನಿಯಮಗಳಲ್ಲಿ ನಾಗರಿಕ ವಿಮಾನಯಾನ ನಿರ್ದೇಶನಾಲಯವು(ಡಿಜಿಸಿಎ) ಬದಲಾವಣೆಗಳನ್ನು ಮಾಡಿದ್ದು, ವೈದ್ಯರ ಸಲಹೆ ಪಡೆಯದೆ ಅಂಗವಿಕಲರಿಗೆ ವಿಮಾನ ಪ್ರವೇಶ ನಿರಾಕರಿಸುವಂತಿಲ್ಲ ಮತ್ತು ಲಿಖಿತ ಮಾಹಿತಿ ನೀಡಬೇಕು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಶುಕ್ರವಾರ ಹೇಳಿದೆ.

ದೇಶದಲ್ಲಿ ಮತ್ತೊಂದು ವಿಮಾನ ತುರ್ತು ಭೂಸ್ಪರ್ಶ; ಆಗಸದಲ್ಲೇ ಬಿರುಕು ಬಿಟ್ಟ ಗೋ ಏರ್ ವಿಮಾನದ ಕಿಟಕಿ ಗಾಜು!
ದೇಶದಲ್ಲಿ ಮತ್ತೊಂದು ಪ್ರಯಾಣಿಕ ವಿಮಾನ ತುರ್ತು ಭೂಸ್ಪರ್ಶ ಮಾಡಿದ್ದು, ಗೋ ಏರ್ ಸಂಸ್ಥೆಯ ವಿಮಾನದ ಕಿಟಕಿ ಗಾಜು ಆಗಸದಲ್ಲೇ ಬಿರುಕು ಬಿಟ್ಟ ಪರಿಣಾಮ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದೆ ಎಂದು ತಿಳಿದುಬಂದಿದೆ.

ತಾಂತ್ರಿಕ ದೋಷಗಳು: ವಿಮಾನ ಪ್ರಮಾಣೀಕರಿಸುವ ಸಾಕಷ್ಟು ಅಸಮರ್ಪಕ ಎಂಜಿನಿಯರಿಂಗ್ ಸಿಬ್ಬಂದಿ ಪತ್ತೆ ಮಾಡಿದ ಡಿಜಿಸಿಎ
ವಿಮಾನಯಾನ ಸಂಸ್ಥೆಗಳ ಹಲವು ವಿಮಾನಗಳಲ್ಲಿನ ತಾಂತ್ರಿಕ ದೋಷ ಪ್ರಕರಣಗಳು ವರದಿಯಾದ ಬೆನ್ನಲ್ಲೇ ವಾಯುಯಾನ ನಿಯಂತ್ರಕ ಡಿಜಿಸಿಎ ಸ್ಥಳ ಪರಿಶೀಲನೆ ನಡೆಸಿದ್ದು ವಿಮಾನಗಳನ್ನು ಪ್ರಮಾಣೀಕರಿಸುವ ಸಾಕಷ್ಟು ಅಸಮರ್ಪಕ ಇಂಜಿನಿಯರಿಂಗ್ ಸಿಬ್ಬಂದಿಗಳನ್ನು ಪತ್ತೆ ಮಾಡಿದೆ.

ಭಾರತೀಯ ವಾಯುಯಾನ ಸೇವೆಗೆ ಮತ್ತೊಂದು ಖಾಸಗಿ ಸಂಸ್ಥೆ ಪ್ರವೇಶ; ಆಕಾಶ ಏರ್ ಗೆ ಡಿಜಿಸಿಎ ಅನುಮತಿ
ಭಾರತೀಯ ವಾಯುಯಾನ ಸೇವೆಗೆ ಮತ್ತೊಂದು ಖಾಸಗಿ ಸಂಸ್ಥೆ ಪ್ರವೇಶ ಪಡೆದಿದ್ದು, ಜುಲೈನಲ್ಲಿ ಸೇವೆಗಳನ್ನು ಪ್ರಾರಂಭಿಸಲು ಆಕಾಶ ಏರ್ ಸಂಸ್ಥೆಗೆ ಡಿಜಿಸಿಎಯಿಂದ ವಿಮಾನಯಾನ ಪರವಾನಗಿ ಲಭಿಸಿದೆ.

ಇಂಡಿಗೋ ವಿಮಾನದ ಕ್ಯಾಬಿನ್ ನಲ್ಲಿ ಹೊಗೆ; ಕೈ ಕೊಟ್ಟ ವಿಸ್ತಾರಾ ವಿಮಾನ ಎಂಜಿನ್, ತಪ್ಪಿದ ದುರಂತ
ಇತ್ತೀಚಿಗೆ ವಿಮಾನಗಳಲ್ಲಿ ತಾಂತ್ರಿಕ ದೋಷಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ. ರಾಯ್‌ಪುರ-ಇಂದೋರ್ ಇಂಡಿಗೋ ವಿಮಾನ ಮಂಗಳವಾರ ಲ್ಯಾಂಡ್ ಆದ ನಂತರ ಕ್ಯಾಬಿನ್‌ನಲ್ಲಿ ಹೊಗೆ...

