Devegowda

ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳ ಆದ್ಯತೆಯ ಮೇರೆಗೆ ಕ್ಷಿಪ್ರಗತಿಯಲ್ಲಿ ಕಾರ್ಯಗತಗೊಳಿಸಿ: ಕೇಂದ್ರಕ್ಕೆ ದೇವೇಗೌಡ ಒತ್ತಾಯ
ರಾಜ್ಯಸಭೆಯಲ್ಲಿ ರೈಲ್ವೆ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ಹಾಗೂ ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳನ್ನು ಆದ್ಯತೆಯ ಮೇರೆಗೆ ಕ್ಷಿಪ್ರಗತಿಯಲ್ಲಿ ಕಾರ್ಯಗತಗೊಳಿಸಬೇಕು ಎಂದು ಮನವಿ ಮಾಡಿಕೊಂಡರು.

JDSಗೆ ಮರುಜೀವ ನೀಡುವವರೆಗೂ ನಿದ್ರಿಸುವುದಿಲ್ಲ, ನಿಖಿಲ್‌ಗೆ ಹೊಸ ಜವಾಬ್ದಾರಿ ನೀಡಲಾಗುವುದು: ಎಚ್.ಡಿ ದೇವೇಗೌಡ
ಪ್ರಧಾನಿ ಮೋದಿ ಅವರು ಮಹಿಳಾ ಸಬಲೀಕರಣಕ್ಕೆ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ನಾವೂ ಕೂಡ ಅದನ್ನು ಮಾದರಿಯಾಗಿ ತೆಗೆದುಕೊಂಡು ಮಹಿಳೆಯರನ್ನೊಳಗೊಂಡ ಪಕ್ಷ ಕಟ್ಟುವಲ್ಲಿ ಯೋಜನೆಗಳನ್ನು ರೂಪಿಸಬೇಕು.

ಪರಿಶಿಷ್ಟ ಜನರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನೂ ಚುನಾವಣೆಗೆ ಬಳಸಿಕೊಂಡಿದ್ದಾರೆ: ರಾಜ್ಯಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ದೇವೇಗೌಡ ಗುಡುಗು
ನಾನು ಸತ್ಯವನ್ನು ಹೇಳಿದರೆ, ನಿಮಗೆ ಅರಗಿಸಿಕೊಳ್ಳುವುದು ತುಂಬಾ ಕಷ್ಟ ಎಂದು ಗುಡುಗಿದರು.

ನಿಖಿಲ್ ಸೋಲು: JDS ಕಿತ್ತೊಗೆಯುವ ಸಿದ್ದು ರಣತಂತ್ರಕ್ಕೆ ಮತ್ತಷ್ಟು ಪುಷ್ಠಿ?
ಸಿದ್ದರಾಮಯ್ಯ ಅವರು ದೇವೇಗೌಡರ ಭದ್ರಕೋಟೆ ಎಂದೇ ಹೇಳಲಾಗುವ ಹಾಸನದಲ್ಲಿ ಡಿಸೆಂಬರ್ 5 ರಂದು ಬೃಹತ್ ಸಮಾವೇಶ ನಡೆಸಲು ಮುಂದಾಗಿದ್ದಾರೆ.

ಬುದ್ದಿವಂತ, ರಾಜಕೀಯ ಪ್ರಜ್ಞೆ ಇರುವ ಯಾವುದೇ ಒಕ್ಕಲಿಗರನ್ನು ದೇವೇಗೌಡರು ಬೆಳೆಯಲು ಬಿಡಲ್ಲ: ಸಿಎಂ ಸಿದ್ದರಾಮಯ್ಯ
ನಾನು ಮತ್ತೆ ಜಾಲಪ್ಪನವರು ದೇವೇಗೌಡರ ಪರವಾಗಿ ನಿಲ್ಲದೇ ಹೋಗಿದ್ದರೆ ಗೌಡರು ಮುಖ್ಯಮಂತ್ರಿ ಆಗಲಿಕ್ಕೆ ಖಂಡಿತಾ ಸಾಧ್ಯವಿರಲಿಲ್ಲ. ಇಂದು ಇದೇ ದೇವೇಗೌಡರು ಸಿದ್ದರಾಮಯ್ಯನ ಗರ್ವಭಂಗ ಮಾಡುತ್ತೀನಿ ಎಂದು ಶಪಥ ಮಾಡಿದ್ದಾರೆ. ಇದು ಪಾಳೇಗಾರಿಕೆ ಮಾತುಗಳಲ್ವಾ?

ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು NDA ನಿರ್ಧರಿಸಿದೆ- ದೇವೇಗೌಡ; ಯಾರಿಂದಲೂ ಸಾಧ್ಯವಿಲ್ಲ ಎಂದ ಸಿದ್ದರಾಮಯ್ಯ
ಚನ್ನಪಟ್ಟಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ದೇವೇಗೌಡ ಅವರು, ಸಿದ್ದರಾಮಯ್ಯ ಅವರನ್ನು ಹಣಕಾಸು ಸಚಿವನನ್ನಾಗಿ ಮಾಡಿದ್ದೇ ನಾನು. ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಅವರ ಸೊಕ್ಕು ಮುರಿಯಲು ನಿಖಿಲ್ ಅವರನ್ನ ಕಣಕ್ಕಿಳಿಸಿದ್ದೇವೆ.

ಕಾಂಗ್ರೆಸ್ ಸರ್ಕಾರ ಅಧಿಕಾರ ಪೂರ್ಣಗೊಳಿಸುತ್ತದೆ ಎಂಬ ಗ್ಯಾರಂಟಿಯೇ ಇಲ್ಲ: ಎಚ್‌ಡಿ ದೇವೇಗೌಡ
ಐದು ಗ್ಯಾರಂಟಿಗಳ ಪೈಕಿ ಒಂದು ಗ್ಯಾರಂಟಿ ಈಗಾಗಲೇ ನೆಲಕಚ್ಚಿದೆ. ಇತರೆ ಗ್ಯಾರಂಟಿಗಳೂ ಹೆಚ್ಚು ಕಾಲ ಉಳಿಯುವುದಿಲ್ಲ. ಈ ಸರ್ಕಾರವೂ ಪೂರ್ಣಾವಧಿ ಪೂರ್ಣಗೊಳಿಸುತ್ತದೆ ಎಂಬ ಗ್ಯಾರಂಟಿ ಇಲ್ಲ.

ಕನಕಪುರ ಶಾಲೆಗಳಿಗೆ 25 ಎಕರೆ ದಾನ ಮಾಡಿದ್ದೇನೆ, ದೇವೇಗೌಡ ಕುಟುಂಬ ಏನು ನೀಡಿದೆ?: JDS ಗೆ DKS ಸವಾಲು
ಡಿಕೆ.ಶಿವಕುಮಾರ್ ಅವರು ಚಕ್ಕೆರೆ, ಹೊನ್ನನಾಯಕನಹಳ್ಳಿಯಲ್ಲಿ ಕಾಂಗ್ರೆಸ್ ಪರ ಶುಕ್ರವಾರ ಪ್ರಚಾರ ನಡೆಸಿದರು. ಈ ವೇಳೆ ಕೊತ್ವಾಲ್ ಹತ್ತಿ ರೂ.100ಗೆ ಕೆಲಸ ಮಾಡುತ್ತಿದ್ದ ಡಿಕೆಶಿ, ರೈತನಿಗೆ ನೋವಾದರೆ ಎಂದಾದರೂ ಕಣ್ಣೀರು ಹಾಕಿದ್ದಾರಾ ಎಂಬ ದೇವೇಗೌಡ ಟೀಕೆಗೆ ತಿರುಗೇಟು ನೀಡಿದರು.

ನಿಖಿಲ್'ಗೆ ಮತ ನೀಡಿ ದುರಾಡಳಿತ ಸರ್ಕಾರಕ್ಕೆ ಪಾಠ ಕಲಿಸಿ: ಒಂದೇ ವೇದಿಕೆಯಲ್ಲಿ ಕಾಂಗ್ರೆಸ್ ವಿರುದ್ಧ BSY-HDD ಗುಡುಗು
ಕಾಂಗ್ರೆಸ್ ನವರೇ ಹಠ ಮಾಡಿ ನನ್ನ ಮಗ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿದರು. ಕೊನೆಗೆ ಅವರೇ ಮೈತ್ರಿ ಸರ್ಕಾರ ಉರುಳಿಸಿದರು. ಕಳೆದ 10 ವರ್ಷಗಳಿಂದ ರೈತರ ಖಾತೆಗೆ ಮೋದಿ ಸರ್ಕಾರ ರೂ.2000 ಜಮಾ ಮಾಡುತ್ತಾ ಬರುತ್ತಿದೆ. ಆದರೆ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಸ್ಥಗಿತಗೊಳಿಸಿದೆ.

