derail

ಸಿಕಂದರಾಬಾದ್-ಶಾಲಿಮಾರ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್: ಕೋಲ್ಕತ್ತಾದ ಹೌರಾ ಬಳಿ 3 ಬೋಗಿಗಳು ಹಳಿತಪ್ಪಿ ಅವಘಡ
ಸಾಪ್ತಾಹಿಕ ವಿಶೇಷ ರೈಲು ಕೋಲ್ಕತ್ತಾದಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ನಲ್ಪುರದಲ್ಲಿ ಹಳಿತಪ್ಪಿದೆ. ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ವರದಿಯಾಗಿಲ್ಲ ಎಂದು ಹೇಳಿದ್ದಾರೆ. ಹಳಿತಪ್ಪಿದ ಬೋಗಿಗಳಲ್ಲಿ ಪಾರ್ಸೆಲ್ ವ್ಯಾನ್ ಕೂಡ ಸೇರಿದೆ.

ರಾಂಚಿ ರೈಲ್ ಯಾರ್ಡ್ ನಲ್ಲಿ ಎರಡು ರೈಲುಗಳ ಇಂಜಿನ್ ಹಳಿ ತಪ್ಪಿ ಅವಘಡ!
ಮುರಿ ಎಂಬ ಪ್ರದೇಶದಲ್ಲಿನ ಸುಯಿಸಾ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಹಳಿತಪ್ಪಿದ ನಂತರ, ಎಂಜಿನ್ಗಳಲ್ಲಿ ಒಂದು ಅದರ ಬದಿಯಲ್ಲಿ ಬಿದ್ದಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೋಪಾಲ್: ಸರಕು ಸಾಗಣೆ ರೈಲಿನ 3 ಬೋಗಿಗಳು ಹಳಿ ತಪ್ಪಿ ಸಂಚಾರ ವ್ಯತ್ಯಯ!
ಮಧ್ಯಾಹ್ನ 12:45 ಕ್ಕೆ ಈ ಘಟನೆ ನಡೆದಿದ್ದು, ಪಶ್ಚಿಮ ಸೆಂಟ್ರಲ್ ರೈಲ್ವೆ ವ್ಯಾಪ್ತಿಯಲ್ಲಿ ರೈಲು ಸಂಚಾರವನ್ನು ಯಥಾಸ್ಥಿತಿಗೆ ತರಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಾನ್ಪುರ: ಹಳಿ ತಪ್ಪಿದ ಸಬರಮತಿ ಎಕ್ಸ್ಪ್ರೆಸ್ನ 20 ಬೋಗಿಗಳು, ಪ್ರಯಾಣಿಕರ ಸ್ಥಳಾಂತರ
ವಾರಣಾಸಿಯಿಂದ ಅಹಮದಾಬಾದ್ ಕಡೆಗೆ ತೆರಳುತ್ತಿದ್ದ ರೈಲು ಕಾನ್ಪುರ ಮತ್ತು ಭೀಮಸೇನ್ ರೈಲು ನಿಲ್ದಾಣದ ನಡುವೆ ರೈಲು ಹಳಿತಪ್ಪಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ.

ಚಾಮರಾಜನಗರ-ಮೈಸೂರು ಎಕ್ಸ್ಪ್ರೆಸ್ ರೈಲು ಹಳಿತಪ್ಪಿಸಲು ಯತ್ನ: ಮೂವರ ಬಂಧನ
ಮೈಸೂರಿನ ನಂಜನಗೂಡು ಮತ್ತು ಕಡಕೋಳ ರೈಲು ನಿಲ್ದಾಣಗಳ ನಡುವೆ ಸಂಚರಿಸುತ್ತಿದ್ದ ಚಾಮರಾಜನಗರ-ಮೈಸೂರು ಎಕ್ಸ್ಪ್ರೆಸ್ ರೈಲನ್ನು ಹಳಿತಪ್ಪಿಸಲು ನಡೆಸಲಾಗುತ್ತಿದ್ದ ಯತ್ನವೊಂದನ್ನು ಲೋಕೋಪೈಲಟ್ ಗಳು ತಡೆದಿದ್ದು, ಈ ಮೂಲಕ ದೊಡ್ಡ ದುರಂತವೊಂದನ್ನು ತಪ್ಪಿಸಿದ್ದಾರೆ.

ಪಾಕಿಸ್ತಾನ: ಹಜಾರಾ ಎಕ್ಸ್ಪ್ರೆಸ್ ರೈಲಿನ ಐದು ಬೋಗಿಗಳು ಹಳಿತಪ್ಪಿ 15 ಮಂದಿ ಸಾವು, ಹಲವರಿಗೆ ಗಾಯ
ರಾವಲ್ಪಿಂಡಿಗೆ ತೆರಳುತ್ತಿದ್ದ ರೈಲಿನ ಐದು ಬೋಗಿಗಳು ಹಳಿತಪ್ಪಿದ ಪರಿಣಾಮ ಭಾನುವಾರ ಪಾಕಿಸ್ತಾನದಲ್ಲಿ ಕನಿಷ್ಠ 15 ಜನರು ಸಾವಿಗೀಡಾಗಿದ್ದಾರೆ ಮತ್ತು ಇತರರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಸ್ಥಾನ: ಪಾಲಿಯಲ್ಲಿ ಹಳಿತಪ್ಪಿದ ಸೂರ್ಯನಗರಿ ಎಕ್ಸ್ಪ್ರೆಸ್ ರೈಲಿನ ಬೋಗಿಗಳು, 10 ಮಂದಿಗೆ ಗಾಯ
ಸೋಮವಾರ ಮುಂಜಾನೆ ರಾಜಸ್ಥಾನದಲ್ಲಿ ರೈಲು ಹಳಿತಪ್ಪಿದ ಪರಿಣಾಮ ಸುಮಾರು 10 ಪ್ರಯಾಣಿಕರು ಗಾಯಗೊಂಡಿದ್ದಾರೆ. ಪಾಲಿಯ ರಾಜ್ಕಿವಾಸ್ನಲ್ಲಿ ಮುಂಜಾನೆ 3:27 ರ ಸುಮಾರಿಗೆ ಅಪಘಾತ ಸಂಭವಿಸಿದೆ.

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಸುರಂಗ ಮಾರ್ಗದಲ್ಲಿ ಹಳಿ ತಪ್ಪಿದ ರಾಜಧಾನಿ ಎಕ್ಸ್ ಪ್ರೆಸ್ ರೈಲು: ಪ್ರಯಾಣಿಕರು ಸುರಕ್ಷಿತ
ಹಸ್ರತ್ ನಿಜಾಮುದ್ದೀನ್ ಕಡೆಯಿಂದ ಗೋವಾ ಕಡೆಗೆ ಬರುತ್ತಿದ್ದ ರಾಜಧಾನಿ ಎಕ್ಸ್ ಪ್ರೆಸ್ ರೈಲು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಸುರಂಗದೊಳಗೆ ಶನಿವಾರ ಬೆಳಗ್ಗೆ ಹಳಿ ತಪ್ಪಿದ ಘಟನೆ ನಡೆದಿದ್ದು ಅದೃಷ್ಟವಶಾತ್ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.

ಉತ್ತರ ಪ್ರದೇಶದ ರಾಂಪುರದಲ್ಲಿ ಹಳಿ ತಪ್ಪಿದ ರೈಲಿನ ಆರು ಬೋಗಿಗಳು: ಸಂಚಾರದಲ್ಲಿ ವ್ಯತ್ಯಯ
ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ಮೊರದಾಬಾದ್-ಬರೇಲಿ ಜಂಕ್ಷನ್ ನ ದಮೊರ ಮತ್ತು ದುಗ್ಗನ್ ...

