Demolition

ಬೈಲಾ ಉಲ್ಲಂಘಿಸಿ ಕಟ್ಟಡ ನಿರ್ಮಾಣ: ಶೃಂಗೇರಿ ಮಠ ಅಧೀನದಲ್ಲಿರುವ ಶಿಕ್ಷಣ ಸಂಸ್ಥೆ ಕೆಡವಲು BBMP ಮುಂದು!
ರಾಜಧಾನಿಯ ಬಹುತೇಕ ಅನಧಿಕೃತ ಕಟ್ಟಡಗಳನ್ನ ತೆರವು ಮಾಡಲು ಸಿದ್ಧತೆ ಆರಂಭಿಸಿರುವ ಬಿಬಿಎಂಪಿಯು, ನಕ್ಷೆ ಅನುಮತಿ ಪಡೆಯದೇ ತಲೆ ಎತ್ತಿರುವ ಶಂಕರಪುರದ ಜ್ಞಾನೋದಯ ಪಿಯು ಕಾಲೇಜಿನ ಕಟ್ಟಡವನ್ನು ತೆರವುಗೊಳಿಸಲು ಮುಂದಾಗಿದೆ.

ಗುಜರಾತ್: ಸೋಮನಾಥ ದೇವಾಲಯ ಬಳಿ ಅಕ್ರಮ ಮಸೀದಿ, ದರ್ಗಾ, ವಸತಿ ಕಟ್ಟಡಗಳ ಧ್ವಂಸ!
ಈ ವೇಳೆ 36 ಜೆಸಿಬಿಗಳು, 70 ಟ್ರ್ಯಾಕ್ಟರ್‌ಗಳು, 5 ಹಿಟಾಚಿ ಯಂತ್ರಗಳು, 10 ಡಂಪರ್‌ಗಳು ಮತ್ತು 1,400 ಪೊಲೀಸರನ್ನು ನಿಯೋಜಿಸಲಾಗಿತ್ತು

ಆರೋಪಿಯಾದ ಮಾತ್ರಕ್ಕೆ 'ಬುಲ್ಡೋಜರ್ ನ್ಯಾಯ' ಸರಿಯಲ್ಲ; ಸುಪ್ರೀಂ ಅಸಮಾಧಾನ; ಉತ್ತರ ಪ್ರದೇಶದ ಬಗ್ಗೆ ಶ್ಲಾಘನೆ!
ಒಬ್ಬ ವ್ಯಕ್ತಿ ಕೇವಲ ಆರೋಪಿ ಎಂಬ ಕಾರಣಕ್ಕಾಗಿ ಹೇಗೆ ಆತನಿಗೆ ಸಂಬಂಧಪಟ್ಟ ಆಸ್ತಿಯನ್ನು ಧ್ವಂಸಗೊಳಿಸುವುದು ಸಾಧ್ಯ? ಎಂದು ನ್ಯಾ. ಬಿಆರ್ ಗವಾಯಿ ಹಾಗೂ ಕೆವಿ ವಿಶ್ವನಾಥನ್ ಅವರಿದ್ದ ಪೀಠ ಪ್ರಶ್ನಿಸಿದೆ.

ಗೋವಾದಲ್ಲಿ ಅಕ್ರಮ ಮನೆಗಳ ನೆಲಸಮ: ಸಿಎಂ ಸಿದ್ದರಾಮಯ್ಯ ಪೋಸ್ಟ್ ವಿರುದ್ಧ ಬಿಜೆಪಿ ಕಿಡಿ
ಗೋವಾದ ಸಂಗೋಲ್ಡಾದಲ್ಲಿ ಕನ್ನಡಿಗರಿಗೆ ಸೇರಿದ ಮನೆಗಳನ್ನು ನೆಲಸಮಗೊಳಿಸಲಾಗಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ.

ಬಿಬಿಎಂಪಿ ತೆರವು ಕಾರ್ಯಾಚರಣೆಗೆ ಮಾಜಿ ಶಾಸಕರ ಅಡ್ಡಿ: ಬುಲ್ಡೋಜರ್ ಕೀ ಕಸಿದುಕೊಂಡ ನಂದೀಶ್ ರೆಡ್ಡಿ!
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಸೋಮವಾರ ಕೆಆರ್ ಪುರಂನಲ್ಲಿ ಬುಲ್ಡೋಜರ್‌ಗಳೊಂದಿಗೆ ಅತಿಕ್ರಮಣ ತೆರವುಗೊಳಿಸಲು ಮುಂದಾದ ವೇಳೆ ಬಿಜೆಪಿಯ ಮಾಜಿ ಶಾಸಕ ನಂದೀಶ್ ರೆಡ್ಡಿ ಬುಲ್ಡೋಜರ್ ವಾಹನದ ಕೀಗಳನ್ನು ಕಸಿದುಕೊಂಡು ತೆರವು ಕಾರ್ಯಾಚರಣೆಗೆ ಅಡ್ಡಿ ಪಡಿಸಿದ ಘಟನೆ ನಡೆಯಿತು.

8 ವರ್ಷಗಳ ಹಿಂದಿನ ತೆರವು ಕಾರ್ಯಾಚರಣೆ ಆದೇಶ ಹಿಂದಕ್ಕೆ; ಎಚ್ಆರ್‌ಬಿಆರ್ ಲೇಔಟ್ ನಿವಾಸಿಗಳು ನಿರಾಳ!
ಕಳೆದ ಎಂಟು ವರ್ಷಗಳ ಹಿಂದೆ ಹೊರಡಿಸಿದ್ದ ನಿವೇಶನಗಳನ್ನು ನೆಲಸಮಗೊಳಿಸುವ ಆದೇಶವನ್ನು ಹಿಂಪಡೆಯಲಾಗಿದ್ದು, ಇದೀಗ ಎಚ್‌ಆರ್‌ಬಿಆರ್ ಲೇಔಟ್‌ನ 222 ಮಂಜೂರಾತಿದಾರರು ನಿಟ್ಟುಸಿರು ಬಿಟ್ಟಿದ್ದಾರೆ.

ಚರಂಡಿ ಒತ್ತುವರಿ ತೆರವು ಕಾರ್ಯಾಚರಣೆ: ಬಿಬಿಎಂಪಿ ನಡೆಗೆ ಹೊಯ್ಸಳ ನಗರ ನಿವಾಸಿಗಳು ಕಂಗಾಲು!
ಮಳೆನೀರು ಚರಂಡಿಗಳ (ಎಸ್‌ಡಬ್ಲ್ಯುಡಿ) ಮೇಲೆ ಅಕ್ರಮವಾಗಿ ನಿರ್ಮಾಣ ಮಾಡಿರುವ ಕಟ್ಟಡಗಳ ಗುರುತಿಸಲು ಭೂಮಾಪಕರನ್ನು ಬಿಬಿಎಂಪಿ ನಿಯೋಜಿಸಿದ್ದು, ಈ ಬೆಳವಣಿಗೆ ಕೆಆರ್ ಪುರಂನ ಹೊಯ್ಸಳನಗರದ ನಿವಾಸಿಗಳು ಕಂಗಾಲಾಗುವಂತೆ ಮಾಡಿದೆ.

ರಕ್ತದ ಪ್ಲೇಟ್‌ಲೆಟ್ ಬದಲಿಗೆ ರೋಗಿಗೆ 'ಮೂಸಂಬಿ ಜ್ಯೂಸ್' ಪೂರಣ ಮಾಡಿದ ಉತ್ತರ ಪ್ರದೇಶದ ಆಸ್ಪತ್ರೆ ಕೆಡವಲು ನೋಟಿಸ್
ಡೆಂಗ್ಯೂ ರೋಗಿಗೆ ರಕ್ತದ ಪ್ಲೇಟ್‌ಲೆಟ್‌ಗಳ ಬದಲಿಗೆ ಹಣ್ಣಿನ ರಸವನ್ನು ನೀಡಿದ ಆರೋಪದ ಮೇಲೆ ಜಪ್ತಿ ಮಾಡಲಾಗಿದ್ದ ಖಾಸಗಿ ಆಸ್ಪತ್ರೆಯನ್ನು ಕೆಡವಲು ಇಲ್ಲಿನ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಒತ್ತುವರಿ ತೆರವು: ಬಾಗ್ಮನೆ ಟೆಕ್ ಪಾರ್ಕ್ ಮೇಲೆ ಬಲವಂತದ ಕ್ರಮ ಕೈಗೊಳ್ಳದಂತೆ ಬಿಬಿಎಂಪಿಗೆ ಹೈಕೋರ್ಟ್ ಸೂಚನೆ
ಬಾಗ್ಮನೆ ಡೆವಲಪ್‌ಮೆಂಟ್ಸ್ ಪ್ರೈವೇಟ್ ಲಿಮಿಟೆಡ್‌ನ ಟೆಕ್ ಪಾರ್ಕ್‌ನ ಕಾಂಪೌಂಡ್ ಗೋಡೆಯನ್ನು ಕೆಡವುವ ಕುರಿತು ಬಲವಂತದ ಕ್ರಮ ಕೈಗೊಳ್ಳದಂತೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನಿರ್ದೇಶನ ನೀಡಿದೆ.

