delivery

ಆಕ್ಸಿಜನ್ ಎಕ್ಸ್ ಪ್ರೆಸ್: ವಿವಿಧ ರಾಜ್ಯಗಳಿಗೆ ಭಾರತೀಯ ರೈಲ್ವೆಯಿಂದ 14,500 ಟನ್ ಆಕ್ಸಿಜನ್ ಪೂರೈಕೆ!
ವಿವಿಧ ರಾಜ್ಯಗಳಿಗೆ ಸುಮಾರು 884 ಟ್ಯಾಂಕರ್ ಗಳಲ್ಲಿ 14,500 ಟನ್ ಲಿಕ್ವಿಡ್ ವೈದ್ಯಕೀಯ ಆಕ್ಸಿಜನ್ ಪೂರೈಕೆ ಮಾಡಿರುವುದಾಗಿ ಭಾರತೀಯ ರೈಲ್ವೆ ಶನಿವಾರ ಹೇಳಿದೆ.

ಒಡಿಶಾ: ತುಂಬು ಗರ್ಭಿಣಿಯ ಆಸ್ಪತ್ರೆಗೆ ಸೇರಿಸಿ ಇತರರಿಗೆ ಮಾದರಿಯಾದ ಅಗ್ನಿಶಾಮಕದಳ ಸಿಬ್ಬಂದಿ
ಒಡಿಶಾದ ಚಾಮುಂಡಿಯಾ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಪ್ರವಾಹ ಸಂಕಷ್ಟಕ್ಕೆ ಸಿಲುಕಿದ್ದ ತುಂಬು ಗರ್ಭಿಣಿಯೊಬ್ಬರಿಗೆ ಸಹಾಯ ಹಸ್ತ ಚಾಚುವ ಮೂಲಕ ಅಗ್ನಿ ಶಾಮಕದ ದಳದ ಸಿಬ್ಬಂದಿಗಳು ಇತರರಿಗೆ ಮಾದರಿಯಾಗಿದ್ದಾರೆ.

ಕೊರೋನಾ ಸಂದರ್ಭದಲ್ಲೂ 52 ಹೆರಿಗೆ: ಸೋಂಕಿತ ಮಹಿಳೆಯರ ಡೆಲಿವರಿ ಮಾಡಿಸಿ ಹೆಗ್ಗಳಿಕೆಗೆ ಪಾತ್ರವಾದ ಮೈಸೂರು ಆಸ್ಪತ್ರೆ!
ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಅದರಲ್ಲೂ ಕೊರೋನಾ ಬಂದ್ಮೇಲಂತೂ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಒಂದಿಲ್ಲೊಂದು ಭಯಾನಕ ವರದಿಗಳು ಬರುತ್ತಲೇ ಇವೆ. ಆದರೆ. ಇಲ್ಲೆದರ ನಡುವೆ 52 ಸೋಂಕಿತರ ಮಹಿಳೆಯರಿಗೆ ಹೆರಿಗೆ ಮಾಡಿಸಿದ ಹೆಗ್ಗಳಿಕೆಗೆ ಮೈಸೂರು ಆಸ್ಪತ್ರೆ ಪಾತ್ರವಾಗಿದೆ.

ಕೋವಿಡ್-19 ಸವಾಲಿನ ನಡುವೆಯೂ ರಾಫೆಲ್ ಜೆಟ್ ಗಳು ಸೂಕ್ತ ಸಮಯಕ್ಕೆ ತಲುಪಲಿವೆ: ರಾಜನಾಥ್ ಸಿಂಗ್
ಕೋವಿಡ್-19 ರ ಸವಾಲಿನ ನಡುವೆಯೂ ಫ್ರಾನ್ಸ್ ರಾಫೆಲ್ ಜೆಟ್ ಗಳನ್ನು ಸೂಕ್ತ ಸಮಯಕ್ಕೆ ತಲುಪಿಸಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಸೋಂಕಿನಿಂದ ಗುಣಮುಖಳಾದ ಗರ್ಭಿಣಿ ಸಹಾಯಕ್ಕೆ ಬಾರದ ಪೊಲೀಸರು: ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ
ಕೊರೋನಾ ಸೋಂಕಿಗೊಳಗಾಗಿ ಗುಣಮುಖರಾಗಿದ್ದ ತುಂಬು ಗರ್ಭಿಣಿಯೊಬ್ಬರಿಗೆ ಸಹಾಯ ಮಾಡಲು ಪೊಲೀಸರು ನಿರಾಕರಿಸಿದ್ದು, ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ತೆರಳಲು ಸಾಧ್ಯವಾಗದೆ ಮಹಿಳೆ ಮನೆಯಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆಯೊಂದು ಕಾಸರಗೋಡಿನ ಕಲ್ನಾಡ್ ನಲ್ಲಿ ನಡೆದಿದೆ.

ಉತ್ತರ ಪ್ರದೇಶ: ಬೈಸಿಕಲ್ ನಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದ ಮಹಿಳೆಗೆ ರಸ್ತೆಯಲ್ಲೇ ಹೆರಿಗೆ
ಆಸ್ಪತ್ರೆಗೆ ಸೈಕಲ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಮಹಿಳೆಯೊಬ್ಬರು ನಡು ರಸ್ತೆಯಲ್ಲೆ ಮಗುವಿಗೆ ಜನ್ಮ ನೀಡಿದ್ದಾರೆ. ಉತ್ತರ ಪ್ರದೇಶದ ರಘುನಾಥಪುರ ನಿವಾಸಿಯನ್ನು ಏಪ್ರಿಲ್ 9 ರಂದು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೈಸಿಕಲ್ ನಲ್ಲಿ ಕರೆದೊಯ್ಯಲಾಗುತ್ತಿತ್ತು.

ಬಾಗಲಕೋಟೆ: ನಡುರಸ್ತೆಯಲ್ಲೇ ಗರ್ಭಿಣಿಗೆ ಸ್ಥಳೀಯ ಮಹಿಳೆಯರಿಂದ ಹೆರಿಗೆ
ಹೊಲದಲ್ಲಿದ್ದ ಗರ್ಭಿಣಿ ಮಹಿಳೆಯೊಬ್ಬರಿಗೆ ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಸ್ಥಳೀಯ ಮಹಿಳೆಯರೇ ಸೇರಿ ಗರ್ಭಿಣಿಗೆ ಹೆರಿಗೆ ಮಾಡಿಸಿದ ಘಟನೆ ನಡೆದಿದೆ.

ಬೆಂಕಿ ಅವಘಡ, ಆತಂಕಕಾರಿ ವಾತಾವರಣದ ನಡುವೆ ಹೆರಿಗೆ ಮಾಡಿಸಿ ಕರ್ತವ್ಯ ಪ್ರಜ್ಞೆ ಮೆರೆದ ಏಮ್ಸ್ ವೈದ್ಯರು
ಹೊತ್ತಿ ಉರಿಯುತ್ತಿದ್ದ ಏಮ್ಸ್ ಆಸ್ಪತ್ರೆ ಕಟ್ಟಡದಲ್ಲಿ, ಆತಂಕ, ಗೊಂದಲಗಳ ನಡುವೆಯೇ ಹೆರಿಗೆ ಮಾಡಿಸಿ ವೈದ್ಯರು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

ಯೂಟ್ಯೂಬ್ ನೋಡಿ ಸ್ವತಃ ಹೆರಿಗೆಗೆ ಮುಂದಾದ ಮಹಿಳೆ, ಮಗು-ತಾಯಿ ಇಬ್ಬರೂ ಸಾವು!
ಮದುವೆಗೂ ಮೊದಲೇ ಗರ್ಭಿಣಿಯಾಗಿದ್ದ ಅವಿವಾಹಿತ ಮಹಿಳೆಯೊಬ್ಬರು ಯೂಟ್ಯೂಬ್ ನೋಡಿಕೊಂಡು ತಮ್ಮ ಹೆರಿಗೆ ತಾವೇ ಮಾಡಿಕೊಳ್ಳಲು ಯತ್ನಿಸಿ ತಮ್ಮ ಮಗುವಿನೊಂದಿಗೇ ಸಾವಿಗೀಡಾದ ಘೋರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

