delivery

ಜಾರ್ಖಂಡ್: ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಹೆರಿಗೆ; ತಾಯಿ, ನವಜಾತ ಶಿಶು ಸಾವು; ಇದಕ್ಕೆ ಯಾರು ಹೊಣೆ?
ಜಾರ್ಖಂಡ್ನ ಸೆರೈಕೆಲಾ-ಖಾರ್ಸವಾನ್ನಲ್ಲಿರುವ ರಾಜನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ (CHC) ಮೊಬೈಲ್ ಫೋನ್ ಬೆಳಕಿನಲ್ಲಿ ಹೆರಿಗೆ ಮಾಡಿಸಿದ್ದು ಈ ವೇಳೆ ಮಹಿಳೆ ಮತ್ತು ನವಜಾತ ಶಿಶು ಸಾವನ್ನಪ್ಪಿದೆ.

'ಬಡವರ ರಕ್ತ ಹೀರುತ್ತೀರಲ್ಲಾ, ನಾಚಿಕೆಯಾಗಲ್ವಾ ನಿಮ್ಗೆ': ದಾಂಡೇಲಿ ಸರ್ಕಾರಿ ಆಸ್ಪತ್ರೆಯ ಭ್ರಷ್ಠ ವೈದ್ಯರ ಚಳಿ ಬಿಡಿಸಿದ ಶಾಸಕ ದೇಶಪಾಂಡೆ
ದಾಂಡೇಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಂದಿರ ಹೆರಿಗೆ ಹಾಗೂ ಸಿಜೇರಿಯನ್ ಸಮಯದಲ್ಲಿ ಬಡವರಿಂದ ಹಣ ಪಡೆಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.

'ಇಂದು ಚಂದ್ರ ಗ್ರಹಣ, ಡೆಲಿವರಿ ಬೇಡ ಪ್ಲೀಸ್': ಹೆರಿಗೆಗೆ ಒಪ್ಪದ ಮಹಿಳೆಯರು, ಮನವೊಲಿಸಲು ವೈದ್ಯರು ಹೈರಾಣ!
ಚಂದ್ರಗ್ರಹಣದ ಸಮಯದಲ್ಲಿ ಹೆರಿಗೆಯಾದರೆ, ಅದು ಮಗು ಹಾಗೂ ತಾಯಿ ಇಬ್ಬರಿಗೂ ಅಪಾಯವನ್ನುಂಟು ಮಾಡುತ್ತದೆ ಎಂಬ ನಂಬಿಕೆಯಿಂದಾಗಿ ಹಲವು ಮಹಿಳೆಯರು ಹೆರಿಗೆ ಮುಂದೂಡುವಂತೆ ವೈದ್ಯರನ್ನು ಒತ್ತಾಯಿಸಿದ್ದಾರೆ.

ಯಾದಗಿರಿ: ಹಾಸ್ಟೆಲ್ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಹೈಸ್ಕೂಲ್ ವಿದ್ಯಾರ್ಥಿನಿ..!
ಶಹಪುರದಲ್ಲಿರುವ ವಸತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಶೌಚಾಲಯಕ್ಕೆ ಹೋದಾಗ ಗಂಡುವಿಗೆ ಜನ್ಮ ನೀಡಿದ್ದಾಳೆ. ಈ ಘಟನೆ ವಸತಿ ನಿಲಯದಲ್ಲಿರುವ ಇತರೆ ವಿದ್ಯಾರ್ಥಿನಿಯ ಪೋಷಕರಲ್ಲಿ ಆತಂಕ ಹುಟ್ಟಿಸಿದೆ.

ಬೆಂಗಳೂರು: ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ನಲ್ಲಿ ರೈಲ್ವೆ ಸಿಬ್ಬಂದಿಯ ಸಹಾಯದಿಂದ ಮಹಿಳೆಗೆ ಹೆರಿಗೆ!
ರೈಲು ಸಂಖ್ಯೆ 12836 SMVT ಬೆಂಗಳೂರು-ಹಟಿಯಾ ಎಕ್ಸ್ಪ್ರೆಸ್ನಲ್ಲಿ ಹಟಿಯಾಗೆ ತೆರಳುತ್ತಿದ್ದ 23 ವರ್ಷದ ಅರ್ಚನಾ ಕುಮಾರಿ ಅವರಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತು.

ಮಧುಗಿರಿಯಲ್ಲೊಂದು ಆಘಾತಕಾರಿ ಘಟನೆ: ಹಾಸ್ಟೆಲ್ ನಲ್ಲಿದ್ದ ಅಪ್ರಾಪ್ತ ಬಾಲಕಿಗೆ ಹೆರಿಗೆ; ವಾರ್ಡನ್ ಅಮಾನತು
ಮಧುಗಿರಿ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಯ ಹಾಸ್ಟೆಲ್ ನಲ್ಲಿದ್ದ ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಪ್ರಕರಣದ ಸಂಬಂಧ ವಸತಿ ನಿಲಯದ ಮಹಿಳಾ ವಾರ್ಡನ್ನನ್ನು ಬುಧವಾರ ಅಮಾನತುಗೊಳಿಸಲಾಗಿದೆ.

ಎರಡು ಗರ್ಭಕೋಶ ಹೊಂದಿದ ಮಹಿಳೆ: ಶಸ್ತ್ರಚಿಕಿತ್ಸೆ ನಂತರ ಶಿಶುವಿಗೆ ಜನನ
29 ವರ್ಷದ ಮಹಿಳೆಯೊಬ್ಬರು ಗರ್ಭಾಶಯ ಡಿಡೆಲ್ಫಿಸ್ (ಎರಡು ಗರ್ಭಾಶಯ) ಹೊಂದಿದ್ದು, ಈ ಹಿಂದೆ ನಾಲ್ಕು ಬಾರಿ ಗರ್ಭಪಾತವಾಗಿ ಈ ಬಾರಿ ಆರೋಗ್ಯಕರ ಮಗುವಿಗೆ ಜನ್ಮನೀಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಆಸ್ಪತ್ರೆಯಲ್ಲಿ ಸಂಕೀರ್ಣ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ.

ಇತ್ತ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರೆ ಅತ್ತ ಪಾರ್ಟಿ ಮಾಡುತ್ತಿದ್ದ ವೈದ್ಯರು: ಮಗು ಗರ್ಭದಲ್ಲಿಯೇ ಸಾವು!
ಹೈದರಾಬಾದ್ ನಗರದ ಚಾದರ್ಘಾಟ್ನಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡ ಮಧ್ಯೆ ಆಸ್ಪತ್ರೆಯ ಸಿಬ್ಬಂದಿಯೆಲ್ಲಾ ಕುಟುಂಬಸ್ಥರ ಶುಭ ಕಾರ್ಯಕ್ರಮಕ್ಕೆ ಎದ್ದು ಹೋದ ಅಮಾನುಷ ಪ್ರಸಂಗ ನಡೆದಿದೆ.

ಬೆಂಗಳೂರಿನಲ್ಲಿ ಇದೇ ಮೊದಲು: ಡ್ರೋನ್ ಬಳಸಿ ಕೋವಿಡ್ ಲಸಿಕೆ ಸಾಗಣೆ
ನಗರದ ಚಂದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಆರು ಕಿಲೋ ಮೀಟರ್ ದೂರವಿರುವ ಆನೇಕಲ್ ನಲ್ಲಿರುವ ಹಾರಗದ್ದೆ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ಡ್ರೋನ್ ಮೂಲಕ ವಿಶೇಷ ಕಂಟೇನರ್ ನಲ್ಲಿ ಕೋವಿಡ್ ಲಸಿಕೆಯ 50 ಬಾಟಲಿಗಳು ಮತ್ತು ಸಿರಿಂಜುಗಳನ್ನು ಯಶಸ್ವಿಯಾಗಿ ರವಾನಿಸಲಾಗಿದೆ.

