Delhi riots

ದೆಹಲಿ ಗಲಭೆ: ಉಮರ್ ಖಲೀದ್ ಗೆ ಅಕ್ಟೋಬರ್ 22ವರೆಗೆ ನ್ಯಾಯಾಂಗ ಬಂಧನ
ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜವಾಹರ್‍ಲಾಲ್ ನೆಹರು ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿ ಮುಖಂಡ ಉಮರ್ ಖಲೀದ್‍ಗೆ ಅಕ್ಟೋಬರ್ 22ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ದೆಹಲಿ ಗಲಭೆ: ಫೇಸ್‌ಬುಕ್ ವಿರುದ್ಧ ಅ.15ರವರೆಗೆ ಒತ್ತಾಯದ ಕ್ರಮ ಕೈಗೊಳ್ಳದಂತೆ 'ಸುಪ್ರೀಂ' ನಿರ್ದೇಶನ
ಈಶಾನ್ಯ ದೆಹಲಿಯ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡ ಜಾರಿಗೊಳಿಸಿದ ಸಮನ್ಸ್‌ಗೆ ಪ್ರತಿಕ್ರಿಯಿಸದ ಫೇಸ್‌ಬುಕ್ ಭಾರತದ ಉಪಾಧ್ಯಕ್ಷರ ವಿರುದ್ದ ಅ.15ರವರೆಗೆ ಯಾವುದೇ ಒತ್ತಾಯದ ಕ್ರಮ ಕೈಗೊಳ್ಳದಂತೆ ದೆಹಲಿ ವಿಧಾನಸಭೆಗೆ ಸುಪ್ರೀಂಕೋರ್ಟ್ ಬುಧವಾರ ಆದೇಶ ನೀಡಿದೆ.

ದೆಹಲಿ ಗಲಭೆ: ಹೆಚ್ಚುವರಿ ಚಾರ್ಜ್ ಶೀಟ್ ನಲ್ಲಿ ಯೆಚೂರಿ, ಯೋಗೇಂದ್ರ ಯಾದವ್, ಜಯತಿ ಘೋಷ್ ಅಪೂರ್ವಾನಂದ ಹೆಸರು
ಸಿಎಎ ವಿರೋಧಿಸಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಿರುವ ದೆಹಲಿ ಪೊಲೀಸರು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ....

ದೆಹಲಿ ಗಲಭೆ: ಶಾರ್ಜೀಲ್ ಇಮಾಮ್ ಗೆ 14 ದಿನ ನ್ಯಾಯಾಂಗ ಬಂಧನ
ಭಯೋತ್ಪಾದನೆ ನಿಗ್ರಹ ಕಾಯ್ದೆ ಅಡಿ ಬಂಧನಕ್ಕೊಳಗಾಗಿರುವ ಜವಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಶಾರ್ಜೀಲ್ ಇಮಾಮ್ ಅವರನ್ನು ದೆಹಲಿ ಕೋರ್ಟ್ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಗುರುವಾರ ಆದೇಶ ನೀಡಿದೆ.

ದೆಹಲಿ ಗಲಭೆಯಲ್ಲಿ ಮೃತಪಟ್ಟ 9 ಮಂದಿಗೆ ಜೈ ಶ್ರೀರಾಮ್ ಘೋಷಣೆ ಕೂಗಲು ಬಲವಂತ: ಕೋರ್ಟ್ ಗೆ ಪೊಲೀಸರ ಮಾಹಿತಿ
ಈಶಾನ್ಯ ದೆಹಲಿಯಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆದ ಗಲಭೆ ವೇಳೆ 9 ಮುಸ್ಲಿಮರನ್ನು ಜೈಶ್ರೀರಾಮ್ ಘೋಷಣೆ ಕೂಗಲು ನಿರಾಕರಿಸಿದ ಕಾರಣಕ್ಕೆ ಹತ್ಯೆ ಮಾಡಲಾಗಿದೆ. ಹತ್ಯೆ ಮಾಡಿದ ಕೆಲವರು ವಾಟ್ಸ್ ಆಪ್ ಗ್ರೂಪ್ ಮೂಲಕ ಸಂಪರ್ಕದಲ್ಲಿದ್ದರು ಎಂದು ದೆಹಲಿ ಪೊಲೀಸರು ಕೋರ್ಟ್ ಗೆ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಹೇಳಿದ್ದಾರೆ.

ದೆಹಲಿ ಗಲಭೆಗಳಲ್ಲಿ ಪಾಕಿಸ್ತಾನ ಕೈವಾಡ; ಭದ್ರತಾ ಸಂಸ್ಥೆಗಳ ತನಿಖೆಯಲ್ಲಿ ಬಹಿರಂಗ
ದೆಹಲಿ ಗಲಭೆಗಳ ಸಂದರ್ಭದಲ್ಲಿ ನೆರೆಯ ಪಾಕಿಸ್ತಾನದಿಂದ 1,000ಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಪ್ರಚೋದನಕಾರಿ ಪೋಸ್ಟ್ ಗಳನ್ನು ಮಾಡಲಾಗಿತ್ತು ಎಂಬ ಅಂಶವನ್ನು ಭದ್ರತಾ ಸಂಸ್ಥೆಗಳ ತನಿಖೆಯಲ್ಲಿ ಬಹಿರಂಗಗೊಂಡಿದೆ.

ದೆಹಲಿ ಗಲಭೆ: ಅಮಾನತುಗೊಂಡ ಆಪ್ ಕೌನ್ಸಿಲರ್ ತಹಿರ್ ಹುಸೇನ್ ಸಹೋದರನ ಬಂಧನ
ಕಳೆದ ತಿಂಗಳು ಈಶಾನ್ಯ ದೆಹಲಿಯಲ್ಲಿ ನಡೆದ ಕೋಮುಗಲಭೆಗೆ ಸಂಬಂಧಿಸಿದಂತೆ ಅಮಾನತುಗೊಂಡ ಎಎಪಿ ಕೌನ್ಸಿಲರ್ ತಹಿರ್ ಹುಸೇನ್ ಅವರ ಸಹೋದರನನ್ನು ಮಂಗಳವಾರ ದೆಹಲಿ ಪೊಲೀಸರು ಬಂಧಿಸಿದ್ದಾರೆ.

ದೆಹಲಿ ಗಲಭೆ: ಹಿಂಸೆಗೆ ಪ್ರಚೋದನೆ ಆರೋಪ, 'ಪಿಎಫ್‌ಐ ಸದಸ್ಯ'ನ ಬಂಧನ
ಸಿಎಎ ವಿರೋಧಿ ಪ್ರತಿಭಟನೆ ವೇಳೆ ಅಪಪ್ರಚಾರ ನಡೆಸಿದ ಆರೋಪದ ಮೇಲೆ ದೆಹಲಿ ಪೊಲೀಸ್ ವಿಶೇಷ ಪಡೆಉತ್ತರ ಪ್ರದೇಶದ ಮೊರಾದಾಬಾದ್‌ನ ಪಿಎಫ್‌ಐ ಸದಸ್ಯ ಡ್ಯಾನಿಶ್‌ನನ್ನು ಸೋಮವಾರ ಬಂಧಿಸಿದೆ.

ದೆಹಲಿ ಗಲಭೆ: ಮಲಯಾಳಂ ಸುದ್ದಿ ವಾಹಿನಿಗಳಾದ ಮೀಡಿಯಾ ಒನ್, ಏಷ್ಯಾನೆಟ್ ಗೆ ಎರಡು ದಿನ ಪ್ರಸಾರ ನಿರ್ಬಂಧ
ಈಶಾನ್ಯ ದೆಹಲಿಯ ಕೋಮುಗಲಭೆಗೆ ಸಂಬಂಧಿಸಿದಂತೆ ಅನುಚಿತ ವರದಿ ಪ್ರಸಾರ ಮಾಡಿದ ಆರೋಪದ ಮೇಲೆ ಮಲಯಾಳಂ ಸುದ್ದಿ ವಾಹಿನಿಗಳಾದ ಮೀಡಿಯಾ ಒನ್ ಹಾಗೂ ಏಷ್ಯಾನೆಟ್ ಗೆ ಎರಡು ದಿನ ಪ್ರಸಾರ ನಿರ್ಬಂಧ ವಿಧಿಸಲಾಗಿದೆ.

