Delhi Police

ಹಿಂದೂ ದೇವತೆ ವಿರುದ್ಧ ಪೋಸ್ಟ್: ಮೊಹಮ್ಮದ್ ಜುಬೇರ್ ಪೊಲೀಸ್ ಕಸ್ಟಡಿ ನಾಲ್ಕು ದಿನಕ್ಕೆ ವಿಸ್ತರಿಸಿದ ನ್ಯಾಯಾಲಯ
ಹಿಂದೂ ದೇವತೆ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ ಪೊಲೀಸ್ ಕಸ್ಟಡಿ ಅವಧಿಯನ್ನು ದೆಹಲಿ ನ್ಯಾಯಾಲಯವು ನಾಲ್ಕು ದಿನಗಳವರೆಗೆ ವಿಸ್ತರಿಸಿದೆ.

ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಮತ್ತೆ ಜೀವಬೆದರಿಕೆ, ಪಾಕ್ ನಿಂದ 3ನೇ ಇ-ಮೇಲ್
ಭಾರತ ತಂಡದ ಮಾಜಿ ಕ್ರಿಕೆಟಿಗ ಮತ್ತು ಬಿಜೆಪಿ ಸಂಸದ ಗೌತಮ್ ಗಂಭೀರ್ ಗೆ ಮತ್ತೆ ಜೀವಬೆದರಿಕೆ ಸಂದೇಶ ಬಂದಿದ್ದು, ಪಾಕಿಸ್ತಾನದ ಕರಾಚಿಯಿಂದ ಮೂರನೇ ಬಾರಿಗೆ ಬೆದರಿಕೆ ಇ-ಮೇಲ್ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಲಿಂಪಿಕ್ ಮೆಡಲಿಸ್ಟ್ ಕುಸ್ತಿಪಟು ಸುಶೀಲ್ ಕುಮಾರ್ ವಿರುದ್ಧ ಎರಡನೇ ಚಾರ್ಜ್ ಶೀಟ್ ದಾಖಲಿಸಿದ ದೆಹಲಿ ಪೊಲೀಸ್
ಯುವ ಕುಸ್ತಿಪಟು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಗಸ್ಟ್2ರಂದು ಸುಶೀಲ್ ಕುಮಾರ್ ಸೇರಿದಂತೆ ಒಟ್ಟು 13 ಮಂದಿ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿದ್ದರು.

ಓವೈಸಿ ಮನೆ ಮೇಲೆ ದಾಳಿ ಪ್ರಕರಣ ಸಂಬಂಧ ಐದು ಮಂದಿ ಬಂಧನ: ದೆಹಲಿ ಪೊಲೀಸ್
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮನೆ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 5 ಮಂದಿಯನ್ನು ಬಂಧಿಸಿದ್ದಾರೆ.

ತಪ್ಪಿದ ಮಹಾ ದುರಂತ: ಪಾಕ್ನಲ್ಲಿ ತರಬೇತಿ ಪಡೆದಿದ್ದ ಇಬ್ಬರು ಸೇರಿ 6 ಭಯೋತ್ಪಾದಕರ ಬಂಧನ!
ಪಾಕಿಸ್ತಾನದ ನಿಯಂತ್ರಿತ ಉಗ್ರ ಸಂಘಟನೆಯ ಜಾಲವನ್ನು ಭೇದಿಸಿರುವ ದೆಹಲಿ ಪೊಲೀಸರು ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದ ಇಬ್ಬರು ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ.

ಎಲ್ ಜೆಪಿ ಸಂಸದ, ಚಿರಾಗ್ ಪಾಸ್ವಾನ್ ಸಂಬಂಧಿ ಪ್ರಿನ್ಸ್ ರಾಜ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು
ಲೋಕ ಜನಶಕ್ತಿ ಪಾರ್ಟಿ ಸಂಸದ ಪ್ರಿನ್ಸ್ ಪಾಸ್ವಾನ್ ವಿರುದ್ಧ ದೆಹಲಿ ಪೊಲೀಸರು ಅತ್ಯಾಚಾರ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಜೆಎನ್ಯು ಕ್ಯಾಂಪಸ್ನಲ್ಲಿ 26 ವರ್ಷದ ಮಹಿಳೆಯ ನಿಗೂಢ ಸಾವು!
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್ಯು) ಕ್ಯಾಂಪಸ್ನಲ್ಲಿ ವಾಸಿಸುತ್ತಿದ್ದ 26 ವರ್ಷದ ಮಹಿಳೆ ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಂತರ್ ಮಂತರ್ ನಲ್ಲಿ ಕೋಮು ಪ್ರಚೋದಕ ಘೋಷಣೆ: ಹಿಂದೂ ರಕ್ಷಾ ದಳದ ನಾಯಕರ ಬಂಧನಕ್ಕೆ ಪೊಲೀಸ್ ದಾಳಿ
ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಕೋಮು ಪ್ರಚೋದಕ ಘೋಷಣೆ ಕೂಗಿದ್ದ ಪ್ರಕರಣದಲ್ಲಿ ಹಿಂದೂ ರಕ್ಷಾ ದಳದ ನಾಯಕರನ್ನು ಬಂಧಿಸಲು ಪೊಲೀಸರು ದಾಳಿ ನಡೆಸಿದ್ದಾರೆ.

ಮಾಜಿ ಶಾಸಕಿ ಅಲ್ಕಾ ಲಂಬಾ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿ ಬೆದರಿಕೆ: ದೆಹಲಿ ವ್ಯಕ್ತಿ ಬಂಧನ
ಮಾಜಿ ಶಾಸಕಿ ಹಾಗೂ ದೆಹಲಿ ಕಾಂಗ್ರೆಸ್ ನಾಯಕಿ ಅಲ್ಕಾ ಲಂಬಾ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ 30 ವರ್ಷದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

