death threats

ದುಬೈ ಕ್ಲಬ್ ಉದ್ಘಾಟನಾ ಸಮಾರಂಭದಲ್ಲಿ ಪೂಜಾ ಹೆಗ್ಡೆ ಜಗಳ, ನಟಿಗೆ ಕೊಲೆ ಬೆದರಿಕೆ!
ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ದಕ್ಷಿಣ ಭಾರತದ ನಟಿ ಪೂಜಾ ಹೆಗ್ಡೆ ಬಗ್ಗೆ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಇತ್ತೀಚಿನ ವರದಿಗಳ ಪ್ರಕಾರ, ನಟಿಗೆ ಕೊಲೆ ಬೆದರಿಕೆಗಳು ಬಂದಿವೆ.

'ನಮ್ಮ ಬಳಿ ಅತ್ಯುತ್ತಮ ಶೂಟರ್‌ಗಳಿದ್ದಾರೆ'; 20 ಕೋಟಿ ರೂ. ಕೊಡದಿದ್ದರೆ ಕೊಲ್ಲುವುದಾಗಿ ಮುಕೇಶ್ ಅಂಬಾನಿಗೆ ಬೆದರಿಕೆ!
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರಿಗೆ ಇಮೇಲ್ ಮೂಲಕ ಕೊಲೆ ಬೆದರಿಕೆ ಬಂದಿದ್ದು, 20 ಕೋಟಿ ರೂ. ನೀಡಲು ವಿಫಲವಾದರೆ ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ.

ಹೈಕೋರ್ಟ್‌ನ ಆರು ಜಡ್ಜ್, ಸಾರ್ವಜನಿಕ ಸಂಪರ್ಕ ಅಧಿಕಾರಿಗೆ ಜೀವ ಬೆದರಿಕೆ
ಹೈಕೋರ್ಟ್‌ನ ಆರು ನ್ಯಾಯಾಧೀಶರು ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿಗೆ ಜೀವ ಬೆದರಿಕೆ ಹಾಕಿರುವ ಆರೋಪಿಗಳಿಗಾಗಿ ಕೇಂದ್ರ ಸಿಇಎನ್ ಕ್ರೈಂ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಹೈಕೋರ್ಟ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿಯ ವಾಟ್ಸಾಪ್ ಸಂಖ್ಯೆಗೆ ಆರೋಪಿ ಬೆದರಿಕೆ ಸಂದೇಶ ಕಳುಹಿಸಿದ್ದಾನೆ.

ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪಗೆ 16 ಕೊಲೆ ಬೆದರಿಕೆ ಪತ್ರ: ಭದ್ರತೆ ಒದಗಿಸಿದ ಪೊಲೀಸರು
ಕನ್ನಡದ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಅವರಿಗೆ 16 ಕೊಲೆ ಬೆದರಿಕೆ ಪತ್ರಗಳು ಬಂದಿರುವ ಹಿನ್ನೆಲೆಯಲ್ಲಿ ಅವರಿಗೆ ಭದ್ರತೆ ಒದಗಿಸಲಾಗಿದೆ ಎಂದು ಕರ್ನಾಟಕ ಪೊಲೀಸರು ಬುಧವಾರ ತಿಳಿಸಿದ್ದಾರೆ.

'ಗಾಂಧಿ- ಗೋಡ್ಸೆ' ನಿರ್ದೇಶಕ ರಾಜ್‌ಕುಮಾರ್ ಸಂತೋಷಿಗೆ ಜೀವ ಬೆದರಿಕೆ, ಪೊಲೀಸರಿಗೆ ದೂರು
ಗಾಂಧಿ- ಗೋಡ್ಸೆ ಸಿನಿಮಾದ ನಿರ್ದೇಶಕ ರಾಜ್ ಕುಮಾರ್ ಸಂತೋಷಿಗೆ ಕೊಲೆ ಬೆದರಿಕೆ ಕರೆಗಳು ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ಸೋಮವಾರ ಪೊಲೀಸರಿಗೆ ದೂರು ದಾಖಲಿಸಿದ್ದು, ಹೆಚ್ಚುವರಿ ಭದ್ರತೆಗಾಗಿ ಮನವಿ ಮಾಡಿದ್ದಾರೆ.

ಶರದ್ ಪವಾರ್‌ಗೆ ಕೊಲೆ ಬೆದರಿಕೆ ಹಾಕಿದ ಬಿಹಾರದ ವ್ಯಕ್ತಿ ಬಂಧನ
ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ(ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಅವರ ಮುಂಬೈ ನಿವಾಸಕ್ಕೆ ಪದೇ ಪದೇ ಬೆದರಿಕೆ ಕರೆ ಮಾಡುತ್ತಿದ್ದ ವ್ಯಕ್ತಿಯನ್ನು ಬಿಹಾರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಟಿಪ್ಪು ಸುಲ್ತಾನ್ ಕುರಿತ ಕನ್ನಡ ನಾಟಕ, ಪುಸ್ತಕದ ಲೇಖಕ-ನಿರ್ದೇಶಕರಿಗೆ ಕೊಲೆ ಬೆದರಿಕೆ
ಟಿಪ್ಪು ಸುಲ್ತಾನ್ ಕುರಿತ ‘ಟಿಪ್ಪು ನಿಜಕನಸುಗಳು’ ಶೀರ್ಷಿಕೆಯ ಕನ್ನಡ ನಾಟಕ ಮತ್ತು ಪುಸ್ತಕದ ಲೇಖಕ-ನಿರ್ದೇಶಕರಿಗೆ ಜೀವಬೆದರಿಕೆ ಹಾಕಲಾಗಿದೆ ಎಂದು ತಿಳಿದುಬಂದಿದೆ.

'ನಿಮಗೂ ಇದೇ ಗತಿ ಬರಲಿದೆ': ಟೈಲರ್ ಹತ್ಯೆಯ ವಿಡಿಯೋ ಕಳಿಸಿ ಬಿಜೆಪಿ ಉಚ್ಚಾಟಿತ ನಾಯಕ ನವೀನ್ ಜಿಂದಾಲ್ ಗೆ ಬೆದರಿಕೆ
ಪ್ರವಾದಿ ಬಗ್ಗೆ ಟ್ವೀಟ್ ಮಾಡಿದ್ದ ನವೀನ್ ಕುಮಾರ್ ಜಿಂದಾಲ್ ಗೆ ಮತ್ತೆ ಜೀವ ಬೆದರಿಕೆ ಹಾಕಲಾಗಿದೆ.

ಐಸಿಸ್ ಕಾಶ್ಮೀರದಿಂದ ಕೊಲೆ ಬೆದರಿಕೆ: ಗೌತಮ್ ಗಂಭೀರ್ ನಿವಾಸದ ಹೊರಗಡೆ ಬಿಗಿ ಭದ್ರತೆ
ಭಾರತೀಯ ಜನತಾ ಪಕ್ಷದ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರಿಗೆ ಜೀವ ಬೆದರಿಕೆಯೊಡ್ಡಲಾಗಿದೆ. ಐಸಿಸ್ ಕಾಶ್ಮೀರದಿಂದ ಈ ಬೆದರಿಕೆ ಹಾಕಲಾಗಿದೆ ಅಂತಾ ಗೌತಮ್ ಗಂಭೀರ್ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ.

